ಸುಂಟಿಕೊಪ್ಪ, ಡಿ. ೨೦: ಯಾವಾಗ ಪ್ರೀತಿ ಅನ್ಯೋನ್ಯತೆ ಕರುಣೆ ನಮ್ಮಲ್ಲಿ ಇರುತ್ತದೆಯೋ ಅಲ್ಲಿ ಯೇಸು ಇರುತ್ತಾರೆ. ಕ್ರಿಸ್ಮಸ್, ಗೀತ ಗಾಯನ ಸ್ಪರ್ಧೆಯಲ್ಲಿ ಹೃದಯದಿಂದ ಭಾಗವಹಿಸುವುದು ಮುಖ್ಯ ಎಂದು ಮೈಸೂರು ವಿಭಾಗದ ಧರ್ಮಾಧ್ಯಕ್ಷ ಡಾ.ಕೆ.ಎ.ವಿಲಿಯಂ ಹೇಳಿದರು.

ಸುಂಟಿಕೊಪ್ಪದ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಸಭಾಂಗಣದಲ್ಲಿ ಇದೇ ಪ್ರಥಮ ಬಾರಿಗೆ ಆಯೋಜಿಸಲಾದ ಕೊಡಗು ಜಿಲ್ಲಾ ಮಟ್ಟದ ಕ್ರಿಸ್ತ ಜಯಂತಿ ಗೀತ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂತಹ ವಿಶೇಷ ಸಭೆಯಲ್ಲಿ ಜೀವನದಲ್ಲಿ ಶಾಂತಿ ನೆಮ್ಮದಿ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳು ಇದೊಂದು ಗಾಯನ ಸ್ಪರ್ಧೆ ಎಂದು ತಿಳಿದುಕೊಳ್ಳದೆ ಶ್ರದ್ಧೆಯಿಂದ ಭಾಗವಹಿಸಿ ಕಾರ್ಯಕ್ರಮ ವನ್ನು ಅರ್ಥಪೂರ್ಣಗೊಳಿಸಬೇಕು. ಈ ವರ್ಷ ಸರಳವಾಗಿ ಆಚರಿಸ ಲ್ಪಡುವ ಗಾಯನ ಸ್ಪರ್ಧೆ ಮುಂದಿನ ವರ್ಷ ವಿಜೃಭಣೆಯಿಂದ ನಡೆಸಲು ಎಲ್ಲಾ ಕ್ಯಾಥೊಲಿಕ್ ಸಂಘಟನೆಗಳು ಮುಂದಾಗಬೇಕೆAದು ಕರೆ ನೀಡಿದರು.

ಮುಖ್ಯ ಅತಿಥಿಗಳಾದ ಮಡಿಕೇರಿ ದಿವ್ಯ ಜ್ಯೋತಿ ಸಹಕಾರ ಸಂಘದ ಅಧ್ಯಕ್ಷ ಮೊರೆಸ್ ಮಾತನಾಡಿ ರೋಮನ್ ಕ್ಯಾಥೋಲಿಕ್ ಸಂಘದಿAದ ಮಕ್ಕಳಿಗೆ ಶೈಕ್ಷಣಿಕವಾಗಿ ಶಿಸ್ತು, ದೇವಾಲಯದಲ್ಲಿ ಒಳ್ಳೆಯ ಪ್ರಾರ್ಥನೆ ಉತ್ತಮ ಸಂಸ್ಕಾರಗಳ ಕೆಲಸವಾಗುತ್ತದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಕರಾವಳಿ ವಿಭಾಗದ ಜಿಲ್ಲಾ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರೂ ಆದ ಉದ್ಯಮಿ ಗ್ರೇಸಿಯಾನ್ ರೋಡ್ರಿಗಸ್, ಮೈಸೂರು ಧರ್ಮಾಧ್ಯಕ್ಷ ಡಾ.ಕೆ.ಎ.ವಿಲಿಯಂ, ಕುಶಾಲನಗರದ ಹಿಂದಿ ಶಿಕ್ಷಕಿ ಪಿಹೆಚ್‌ಡಿ ಪಡೆದ ಸವರಿನ್ ಡಿಸೋಜ ಹಾಗೂ ಸೋಮವಾರಪೇಟೆಯ ಲೋಕೋಪಯೋಗಿ ಇಂಜಿನಿಯರ್ ಸೈಜನ್ ಪೀಟರ್ ಅವರುಗಳನ್ನು ಸನ್ಮಾನಿಸಿ ಗೌರವಿಸಿಲಾಯಿತು.

ವೇದಿಕೆಯಲ್ಲಿ ಮಡಿಕೇರಿ ವಲಯ ಶ್ರೇಷ್ಠ ಗುರುಗಳಾದ ವಂ.ಪಾ. ಎ. ಜಾರ್ಜ್ ದೀಪಕ್, ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಅರುಳ್‌ಸೆಲ್ವಕುಮಾರ್, ಹಟ್ಟಿಹೊಳೆ ಧರ್ಮಕೇಂದ್ರದ ಧರ್ಮಗುರುಗಳಾದ ಗಿಲ್ಬರ್ಟ್ ಡಿಸಿಲ್ವಾ, ರೆ.ಫಾ. ಮದಲೈಮುತ್ತು, ಸಂತ ಮೈಕಲರ ಶಾಲೆಯ ಪ್ರಾಂಶುಪಾಲ ನವೀನ್ ಕುಮಾರ್, ಪೊನ್ನಂಪೇಟೆ ದೇವಾಲಯದ ರೆ.ಫಾ. ಡೇವಿಡ್ ಸೆವೆರಾಜ್, ಪಾಲಿಬೆಟ್ಟ ಧರ್ಮಕೇಂದ್ರ ಧರ್ಮಗುರು ಪಾ. ಜಾರ್ಜ್, ಕುಶಾಲನಗರ ಧರ್ಮಕೇಂದ್ರ ರೆ.ವಂ.ಫಾ. ಮಾರ್ಟಿನ್ ರೋಮನ್ ಕ್ಯಾಥೋಲಿಕ್ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಉಪಾಧ್ಯಕ್ಷರುಗಳಾದ ಮಾರ್ವಿನ್ ಲೋಬೋ, ಜಾನ್ಸನ್ ಪಿಂಠೋ, ಕಾರ್ಯದರ್ಶಿ ಪಿ.ಎಫ್. ಸಭಾಸ್ಟೀನ್, ಸ್ಥಾಪಕ ಅಧ್ಯಕ್ಷ ವಿ.ಎ. ಲಾರೆನ್ಸ್, ಪಿಲಿಫ್‌ವಾಸ್, ವಿನ್ಸೆಂಟ್ ಡಿಸೋಜ, ನಿವೃತ್ತ ಪೊಲೀಸ್ ಎಎಸ್‌ಐ ಅಂತೋಣಿ ಮತ್ತಿತರರು ಇದ್ದರು.

ಪ್ರಥಮ ಬಾರಿಗೆ ಸುಂಟಿಕೊಪ್ಪದಲ್ಲಿ ಕೊಡಗು ಜಿಲ್ಲಾಮಟ್ಟದ ಗೀತಾ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಜಿಲ್ಲೆಯ ವಿವಿಧ ಧರ್ಮ ಕೇಂದ್ರಗಳಿAದ ೨೫ ತಂಡಗಳು ನೊಂದಾಯಿಸಿಕೊAಡು ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ಮತ್ತು ಹಿರಿಯರ ಗಾಯನ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳಲ್ಲಿ ಗಾಯನ ಸ್ಪರ್ಧೆಯು ಮನಸೂರೆಗೊಳಿಸಿತು.