ನಾಪೋಕ್ಲು, ಡಿ. ೨೦: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವೀರಾಜಪೇಟೆ, ಮಡಿಕೇರಿ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ, ಭಾಗಮಂಡಲ ವಲಯದ ನಾಪೋಕ್ಲು ಸುಭಾಷ್ ನಗರ ಕಾರ್ಯಕ್ಷೇತ್ರದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆ ಹತ್ತನೇ ತರಗತಿಯ ಮಕ್ಕಳಿಗೆ ಟ್ಯೂಷನ್ ಕ್ಲಾಸ್ ಕೊಡುವ ಕಾರ್ಯಕ್ರಮದ ಉದ್ಘಾಟನೆ ಜರುಗಿತು.
ಕರ್ನಾಟಕ ಪಬ್ಲಿಕ್ ಶಾಲೆಯ ಅಭಿವೃದ್ಧಿ ಸಮಿತಿಯ ಪ್ರಮುಖರಾದ ನೂರಂಬಾಡ ಉದಯಶಂಕರ್ ಕಾರ್ಯಕ್ರಮ ಉದ್ಘಾಟಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಶಾಲೆಯ ಅಭಿವೃದ್ಧಿ ಸಮಿತಿಯ ಕಟ್ಟಡ ಕಾಮಗಾರಿ ಅಧ್ಯಕ್ಷ ಜಿನ್ನು ನಾಣಯ್ಯ. ಶಾಲೆಯ ಮುಖ್ಯೋಪಾಧ್ಯಾಯ ಶಿವಣ್ಣ, ವಲಯದ ಮೇಲ್ವಿಚಾರಕ ಸಂತೋಷ್, ಜ್ಞಾನವಿಕಾಸ ಅಧಿಕಾರಿ ಶ್ರೇಯ ಹಾಗೂ ಶಾಲೆಯ ಶಿಕ್ಷಕ ವೃಂದದವರಾದ ಗಂಗಮ್ಮ, ಉಷಾರಾಣಿ, ಅಶ್ವಿನಿ, ಸುಮಿತ್ರ ಸೇವಾ ಪ್ರತಿನಿಧಿ ಉಮಾಲಕ್ಷಿö್ಮ, ಹತ್ತನೆ ತರಗತಿಯ ಮಕ್ಕಳು ಹಾಗೂ ಪೋಷಕರು ಸಭೆಯಲ್ಲಿ ಹಾಜರಿದ್ದರು.