ಸುಂಟಿಕೊಪ್ಪ, ಡಿ. ೨೦: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಉದ್ಯಮಿ ನವೀನ್‌ಗೌಡ ಅವರನ್ನು ಕೆಲವು ಅಪರಿಚಿತರು ಆ್ಯಂಬ್ಯುಲೆನ್ಸ್ನಲ್ಲಿ ಬಲವಂತವಾಗಿ ಕರೆದೊಯ್ಯುವ ವೇಳೆ ವಾಹನ ತಡೆದು ರಕ್ಷಿಸಿದ ಘಟನೆ ನಡೆದಿದೆ. ಘಟನೆ ಸಂಬAಧ ವಾಟ್ಸಾಪ್ ಮೂಲಕ ಮಡಿಕೇರಿಯ ಆ್ಯಂಬ್ಯುಲೆನ್ಸ್ ಚಾಲಕ ಶರೀಫ್ ಅವರಿಗೆ ಸಂದೇಶ ರವಾನೆಯಾಗಿದೆ.
ಈ ಸಂದರ್ಭ ಆ್ಯಂಬ್ಯುಲೆನ್ಸ್ ಮಡಿಕೇರಿ ದಾಟಿ ಸುಂಟಿಕೊಪ್ಪ ಕಡೆ ಹೊರಟಿದ್ದು ಸುಂಟಿಕೊಪ್ಪದಲ್ಲಿ ಕೆಲವರು ಆ್ಯಂಬ್ಯುಲೆನ್ಸ್ ತಡೆದು ಪರಿಶೀಲಿಸಿದಾಗ ನವೀನ್ ಅವರನ್ನು ಕೈ ಕಾಲು ಕಟ್ಟಿಹಾಕಲಾಗಿತ್ತು. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ವಿಚಾರಿಸಿದಾಗ ಇವರನ್ನು ಅಪಹರಿಸಿಲ್ಲ ಚಿಕಿತ್ಸೆಗಾಗಿ ಕರೆದೊಯ್ಯತ್ತಿದ್ದೇವೆ ಎಂದು ತಿಳಿಸಿದ್ದಾರೆ. ಈ ವಿಚಾರವಾಗಿ ನವೀನ್ ಅವರನ್ನು ಪೊಲೀಸರು ವಿಚಾರಿಸಿದಾಗ ನಾನು ಚೆನ್ನಾಗಿದ್ದೇನೆ. ನನಗೂ ನನ್ನ ಪತ್ನಿಗೂ ಕೆಲವು ವಿಚಾರದಲ್ಲಿ ಜಗಳವಾಗಿ ಎರಡು ತಿಂಗಳಿAದ ನಾನು ಪತ್ನಿಯಿಂದ ದೂರವಾಗಿದ್ದೆ. ಅದಕ್ಕಾಗಿ ನನ್ನ ಅತ್ತೆ ಕಡೆಯವರು ಮಧ್ಯಾಹ್ನ ಬೆಳ್ಳಾರೆಯಿಂದ ತನ್ನನ್ನು ಅಪಹರಿಸಿದ್ದಾರೆ ಎಂದು ಸುಂಟಿಕೊಪ್ಪ ಠಾಣೆಯಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭ ಬೆಳ್ಳಾರೆಯಿಂದ ನವೀನ್ ಗೆಳೆಯರು ಆಗಮಿಸಿ, ನವೀನ್ ಅವರಿಗೆ ಯಾವುದೇ ಕಾಯಿಲೆಯಿಲ್ಲ ಎಂದು ಹೇಳಿದ್ದಾರೆ.
ನಂತರ ನವೀನ್ ತಂದೆ ಮಾಧÀವಗೌಡ ನವೀನ್ ಪತ್ನಿ ಸ್ಪಂದನಾ ಆಗಮಿಸಿ ನವೀನ್‌ನನ್ನು ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯುತ್ತಿದ್ದೇವೆ ಎಂದು ತಿಳಿಸಿದ್ದಾರೆ. ರಾತ್ರಿ ೮ ಗಂಟೆಯವರೆಗೂ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮಾತುಕತೆಯ ನಂತರ ಕುಟುಂಬದೊAದಿಗೆ ಕಳುಹಿಸಿಕೊಡಲಾಯಿತು. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ನವೀನ್ ತಾಯಿ ಎಂ ನೀರಜಾಕ್ಷಿ ನನ್ನ ಮಗನ ಅಪಹರಣವಾಗಿದೆ ಎಂದು ಕೆಲವರ ವಿರುದ್ಧ ದೂರು ದಾಖಲಿಸಿದ್ದರು.