ಮಡಿಕೇರಿ, ಡಿ. ೨೦: ಮಡಿಕೇರಿಯಿಂದ ಕೊಡಗಿನ ಗಡಿ ಗ್ರಾಮ ಕರಿಕೆ-ಕಾಂಞAಗಾಡುವಿಗೆ ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕರಿಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ಸ್ಥಳೀಯ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಗಮನ ಸೆಳೆದರು.

ಈ ಸಂದರ್ಭ ಮಾತನಾಡಿದ ಗ್ರಾಮಸ್ಥರಾದ ಕೆ.ಬಿ. ರಾಜೇಶ್ ಹಾಗೂ ಎಂ.ಕೆ. ಕೃಷ್ಣ ಮಡಿಕೇರಿಯಿಂದ ಕರಿಕೆ-ಕಾಂಞ್ಞAಗಾಡುವಿಗೆ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಸಕಾಲದಲ್ಲಿ ಶಾಲಾ, ಕಾಲೇಜುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಗ್ರಾಮಸ್ಥರು ಜಿಲ್ಲಾ ಕೇಂದ್ರ ಮತ್ತು ಹೋಬಳಿ ಕೇಂದ್ರಕ್ಕೆ ಹೋಗಿ ಬರಲು ಪರದಾಡುವಂತಾಗಿದೆ ಎಂದರು.

ಮಡಿಕೇರಿಯಿAದ ಕರಿಕೆ-ಕಾಂಞ್ಞAಗಾಡುವಿಗೆ ಹಿಂದೆ ಒಂದು ಖಾಸಗಿ ಬಸ್ಸು ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಈ ಬಸ್ ಅನ್ನು ಕಾರಣಾಂತರಗಳಿAದ ನಿಲುಗಡೆ ಗೊಳಿಸಲಾಗಿದೆ. ಕಳೆದ ಹಲವು ತಿಂಗಳುಗಳಿAದ ಬಸ್ ಸೌಲಭ್ಯ ಇಲ್ಲದೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸಂಕಷ್ಟಪಡುವAತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮಡಿಕೇರಿಯಿಂದ ಬೆಳಿಗ್ಗೆ ೭ ಗಂಟೆಗೆ ಹೊರಟು, ೭.೩೦ಕ್ಕೆ ಮೂರ್ನಾಡು ತಲುಪಿ, ನಾಪೋಕ್ಲುವಿಗೆ ೮ ಗಂಟೆಗೆ, ಭಾಗಮಂಡಲಕ್ಕೆ ೮.೪೦ ಗಂಟೆಗೆ, ಕರಿಕೆ ೯.೫೦ಕ್ಕೆ, ಪಾಣತ್ತೂರಿಗೆ ೧೧.೫ ಗಂಟೆಗೆ ತಲುಪುವಂತೆ, ಮತ್ತೆ ಅದೇ ಮಾರ್ಗವಾಗಿ ಕಾಂಞ್ಞAಗಾಡುವಿನಿAದ ೧.೧೫ಕ್ಕೆ ಬಿಟ್ಟು ಪಾಣತ್ತೂರು ೨.೪೫, ಚೆತ್ತುಕಾಯ ೩.೧೫ ಗಂಟೆಗೆ, ಭಾಗಮಂಡಲ ೪.೫೦ ಗಂಟೆಗೆ, ನಾಪೋಕ್ಲು ೫ ಗಂಟೆಗೆ, ಮೂರ್ನಾಡು ೫.೩೦ ಗಂಟೆಗೆ, ಮಡಿಕೇರಿಗೆ ೬.೪೦ಕ್ಕೆ ತಲುಪುವಂತೆ ತಕ್ಷಣವೇ ಬಸ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿದರು.

ನಂತರ ಗ್ರಾಮಸ್ಥರು ಶಾಸಕ ಕೆ.ಜಿ. ಬೋಪಯ್ಯ ಹಾಗೂ ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋ ವ್ಯವಸ್ಥಾಪಕರನ್ನು ಭೇಟಿಯಾಗಿ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಿದರು.