ನಾಪೋಕ್ಲು, ಡಿ. ೨೦: ಇಲ್ಲಿಗೆ ಸಮೀಪದ ಎಮ್ಮೆಮಾಡು ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಹುತ್ತರಿ ಹಬ್ಬವನ್ನು ಸಂಭ್ರಮದಿAದ ಆಚರಿಸಿದರು. ಹಿರಿಯರ ಕಾಲದಿಂದಲೇ ಹುತ್ತರಿ ಹಬ್ಬವನ್ನು ಈ ವ್ಯಾಪ್ತಿಯಲ್ಲಿ ಸಂಪ್ರದಾಯAತೆ ಆಚರಿಸಿಕೊಂಡು ಬರಲಾಗುತ್ತಿದ್ದು, ೭ ದಿನಗಳ ಬಳಿಕ ಹುತ್ತರಿ ಹಬ್ಬವನ್ನು ಆಚರಿಸಿದರು.
ಇಲ್ಲಿನ ಕಾಳೇರ ಕುಟುಂಬಸ್ಥರು ಒಟ್ಟು ಸೇರಿ ಸಂಪ್ರದಾಯದAತೆ ಅವರದ್ದೇ ಗದ್ದೆಗೆ ತೆರಳಿ ಕದಿರು ತೆಗೆದು ವಿಧಿವಿಧಾನದಂತೆ ಒಂದು ಸುತ್ತು ಗುಂಡು ಹಾರಿಸಿ ಪಟಾಕಿ ಸಿಡಿಸಿ ಉದ್ಘಾಷದೊಂದಿಗೆ ಆ ಬಳಿಕ ಕದಿರಿನೊಂದಿಗೆ ಮನೆಗೆ ಹಿಂತಿರುಗಿ ಬಂದು ಮನೆಯ ಕದಿರು ಕಟ್ಟಿ ಹಬ್ಬ ಆಚರಿಸಲಾಯಿತು.
ಕುಟುಂಬದ ಹಿರಿಯರಾದ ಕಾಳೇರ ಖಾದರ್ ಮಾಧ್ಯಮದೊಂದಿಗೆ ಮಾತನಾಡಿ ಎಮ್ಮೆಮಾಡಿನಲ್ಲಿ ನಮ್ಮ ಪೂರ್ವಜರ ಕಾಲದಿಂದಲೇ ಹುತ್ತರಿ ಹಬ್ಬವನ್ನು ಸಂಪ್ರದಾಯ ಬದ್ಧವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಹುತ್ತರಿ ಆಚರಣೆಯ ಈ ಸಂದರ್ಭ ಕಾಳೆರ ಉಮರ್, ಚಂಬಾರAಡ ಅಪ್ಪಿ, ಕಾಳೆರ ಇಸ್ಮಾಯಿಲ್, ಬೆಲ್ಯ್ತ್ ಕಾರಂಡ ಸೈದು, ಕಾಳೆರ ಇಬ್ರಾಹಿಂ ಹಾಜಿ, ನೇರೋಟ್ ಕಾರಂಡ ರಜಾಕ್, ಚಕ್ಕೆರ ಇಸ್ಮಾಯಿಲ್, ಯಚ್.ಎಸ್. ಅಸೈನರ್, ಮೇನೆ ರಜಾಕ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
- ದುಗ್ಗಳ ಸದಾನಂದ