ಕುಶಾಲನಗರ, ಡಿ. ೧೯: ತಮ್ಮ ಮನೆಯ ಕೋಳಿಗಳನ್ನು ಹಿಡಿದು ತಿನ್ನುತ್ತಿದ್ದ ಸಾಕು ನಾಯಿಗಳಿಗೆ ಗುಂಡು ಹಾರಿಸಿ ಹತ್ಯೆಗೈದ ಘಟನೆ ಕುಶಾಲನಗರ ಬಡಾವಣೆಯೊಂದರಲ್ಲಿ ನಡೆದಿದೆ.

ಬಸವೇಶ್ವರ ಬಡಾವಣೆಯ ಮನೆ ಬಳಿ ಸುಳಿದಾಡಿದ ಎರಡು ನಾಯಿಗಳಿಗೆ ಗುಂಡು ಹಾರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಘಟನೆಯಲ್ಲಿ ಒಂದು ನಾಯಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಂದು ನಾಯಿ ಕಾಲಿಗೆ ಗಂಭೀರ ಗಾಯವಾಗಿದೆ. ನಾಯಿಗಳ ಮಾಲೀಕರು ಈ ಬಗ್ಗೆ ಇದುವರೆಗೆ ದೂರು ನೀಡಿಲ್ಲ. ಗಾಯಗೊಂಡಿರುವ ನಾಯಿಗೆ ಚಿಕಿತ್ಸೆ ನೀಡಲಾಗುತ್ತಿದೆ.

- ಸಿಂಚು