ಮಡಿಕೇರಿ, ಡಿ. ೧೯: ೨೦೨೨-೨೩ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸರ್ಕಾರದ ಆದೇಶದಂತೆ ಎಫ್‌ಎಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಾಲ್ ಭತ್ತ, ಸಾಮಾನ್ಯ ರೂ. ೨,೦೪೦ ಮತ್ತು ಗ್ರೇಡ್ ಎ ರೂ. ೨,೦೬೦ ರಂತೆ ಹಾಗೂ ರಾಗಿಯನ್ನು ಪ್ರತಿ ಕ್ವಿಂಟಾಲ್‌ಗೆ ರೂ. ೩,೫೭೮ ಖರೀದಿ ಮಾಡಲಾಗುವುದು. ಭತ್ತವನ್ನು ನೋಂದಾಯಿಸಿಕೊAಡ ಪ್ರತಿ ರೈತರಿಂದ ಪ್ರತಿ ಎಕರೆಗೆ ೨೫ ಕ್ವಿಂಟಾಲ್‌ನAತೆ, ಗರಿಷ್ಠ ೪೦ ಕ್ವಿಂಟಾಲ್ ಭತ್ತವನ್ನು ಒಬ್ಬ ರೈತರಿಂದ ಖರೀದಿಸಲಾಗುವುದು.

ರಾಗಿಯನ್ನು ನೋಂದಾಯಿಸಿಕೊAಡ ಪ್ರತಿ ರೈತರಿಂದ ಪ್ರತಿ ಎಕರೆಗೆ ೧೦ ಕ್ವಿಂಟಾಲ್‌ನAತೆ, ಗರಿಷ್ಠ ೨೦ ಕ್ವಿಂಟಾಲ್ ರಾಗಿಯನ್ನು ಒಬ್ಬ ರೈತರಿಂದ ಖರೀದಿಸಲಾಗುವುದು. ಈ ಹಿನ್ನೆಲೆ ಖರೀದಿಗಾಗಿ ನೋಂದಣಿ ಮಾಡಿಸುವ ರೈತರು ತಮ್ಮ ನೋಂದಣಿಗಾಗಿ ಫ್ರೂಟ್ಸ್ ಐಡಿ ಹಾಗೂ ಆಧಾರ್ ಕಾರ್ಡ್ನೊಂದಿಗೆ ಕುಶಾಲನಗರ ಎಪಿಎಂಸಿ ಆವರಣ, ಸೋಮವಾರಪೇಟೆ ಉಪಮಾರುಕಟ್ಟೆ ಆವರಣ, ಮಡಿಕೇರಿ ಎಪಿಎಂಸಿ ಆವರಣ ಮತ್ತು ಗೋಣಿಕೊಪ್ಪ ಎಪಿಎಂಸಿ ಆವರಣದಲ್ಲಿ ನೋಂದಣಿ ಮಾಡಿಸಬಹುದು. ನೋಂದಣಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ.

ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ರೈತರು ತಮ್ಮ ಹತ್ತಿರದ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಮಾಡಿಕೊಂಡು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಸಹಾಯಕ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.