ಸೋಮವಾರಪೇಟೆ, ಡಿ. ೧೯: ತಾಲೂಕು ಕಾರ್ಮಿಕ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ನೀಡಲಾಗುವ ವಿವಿಧ ಸಾಧನ-ಸಲಕರಣೆಗಳನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ವಿತರಿಸಿದರು.
ಇಲ್ಲಿನ ಶಾಸಕರ ಕಚೇರಿ ಎದುರು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ೫೦ ಮಂದಿ ಫಲಾನುಭವಿಗಳಿಗೆ ಗಾರೆ ಕೆಲಸದ ಮೇಷನ್ ಕಿಟ್, ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿರುವ ಪರಿಕರಗಳು, ಹೆಣ್ಣುಮಕ್ಕಳಿಗೆ ಬೂಸ್ಟರ್ ಕಿಟ್ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಹಿರಿಯ ಕಾರ್ಮಿಕ ನಿರೀಕ್ಷಕಿ ಲೀನಾ, ಡಿಇಓ ಪವಿತ್ರ, ದರ್ಶನ್, ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯ ಬಿ.ಆರ್. ಮಹೇಶ್ ಸೇರಿದಂತೆ ಫಲಾನುಭವಿಗಳು ಉಪಸ್ಥಿತರಿದ್ದರು.