ಸೋಮವಾರಪೇಟೆ, ಡಿ. ೧೯: ರಾಜ್ಯದ ಹಲವೆಡೆ ವಕೀಲರ ಮೇಲೆ ಹಲ್ಲೆ ಮತ್ತು ದೌರ್ಜನ್ಯ ನಡೆಯುತ್ತಿರುವ ಕಾರಣ ಸರ್ಕಾರ ಕೂಡಲೇ ‘ವಕೀಲ ರಕ್ಷಣಾ ಕಾಯ್ದೆಯನ್ನು’ ಜಾರಿಗೊಳಿಸುವಂತೆ ಆಗ್ರಹಿಸಿ ಸ್ಥಳೀಯ ವಕೀಲರ ಸಂಘದ ವತಿಯಿಂದ ತಹಸೀಲ್ದಾರ್ ನರಗುಂದ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಬಾರಿಯ ಚಳಿಗಾಲದ ಅಧಿವೇಶನದಲ್ಲೇ ಕಾಯ್ದೆ ಅಂಗೀಕರಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭ ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಪದ್ಮನಾಭ, ಕಾರ್ಯದರ್ಶಿ ಹೇಮಚಂದ್ರ, ಪದಾಧಿಕಾರಿಗಳಾದ ಪಿ.ಜಿ. ಮುತ್ತಣ್ಣ, ಬಿ.ಇ. ಜಯೇಂದ್ರ, ಕಾಟ್ನಮನೆ ಹೆಚ್. ವಿಠಲ್ ಗೌಡ, ಮಹಾಂತೇಶ್, ಸಿ.ಕೆ. ರಾಜೀವ್ ಉಪಸ್ಥಿತರಿದ್ದರು.