ಮಡಿಕೇರಿ, ಡಿ. ೧೯: ಕೊಡಗು ಮೂಲನಿವಾಸಿ ಅರಮನೆ ಪಾಲೆ ಸಮಾಜದ ಕ್ರೀಡಾಕೂಟ ಭಾನುವಾರದಂದು ಮೂರ್ನಾಡು ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಸಂಭ್ರಮದಿAದ ಜರುಗಿತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಹಿರಿಯ ವಕೀಲರು, ಕರ್ನಾಟಕ ಹೈಕೋರ್ಟ್, ಡಾ. ಮಂಥರ್‌ಗೌಡ, ಸಮಾಜ ಸೇವಕರು ಮತ್ತು ಕಾಂಗ್ರೆಸ್ ಯುವ ಮುಖಂಡರು, ಬಿ.ಜಿ. ಅನಂತಶಯನ, ಸಲಹಾ ಸಂಪಾದಕರು, ಶಕ್ತಿ ದಿನಪತ್ರಿಕೆ ಮತ್ತು ಅಧ್ಯಕ್ಷರು ಜಾನಪದ ಅಕಾಡೆಮಿ, ಕೊಡಗು ಜಿಲ್ಲೆ ಹಾಗೂ ಮಂಞÂÃರ ಸಾಬು ತಿಮ್ಮಯ್ಯ, ಮಡಿಕೇರಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಅಧ್ಯಕ್ಷರು ವ್ಯವಸಾಯ ಸಹಕಾರ ಬ್ಯಾಂಕ್ ಹಾಕತ್ತೂರು ಇವರುಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಮನೆಪಾಲೆ ಸಮಾಜದ ಅಧ್ಯಕ್ಷರಾದ ಪಿ.ಜಿ. ಚೆನಿಯಾ ನಾಪೋಕ್ಲು ಇವರು ವಹಿಸಿದ್ದರು. ಸಮಾಜದ ಸಂಘಟಕ ರಾದ ಮಂದಣ್ಣ ಪಿ.ಕೆ. ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ವಿದ್ಯಾರ್ಥಿಗಳಾದ ವರ್ಷ ಮತ್ತು ನಿತ್ಯ ಹಾಕತ್ತೂರು ಇವರು ಪ್ರಾರ್ಥನೆ ನೆರವೇರಿಸಿದರೆ, ಹಾಕತ್ತೂರು ಕಾರ್ಯದರ್ಶಿ

(ಮೊದಲ ಪುಟದಿಂದ) ಹರಿಣಿ ವಂದಿಸಿದರು.

ವಾರ್ಷಿಕ ಕ್ರೀಡಾಕೂಟ ಪ್ರಯುಕ್ತ ಸಮಾಜ ಬಾಂಧವರಿಗೆ ಫುಟ್ಬಾಲ್ ಪಂದ್ಯಾಟ, ಕಬಡ್ಡಿ ಪಂದ್ಯಾಟಗಳನ್ನು ಪುರುಷರಿಗೆ ಮತ್ತು ಮಹಿಳೆಯರಿಗೆ ಥ್ರೋಬಾಲ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳಿಗೆ ಮತ್ತು ವಯಸ್ಕರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ಸಮಾರೋಪ

ಬಹುಮಾನ ವಿತರಣಾ ಸಮಾರಂಭ ಸಂಜೆ ಜರುಗಿತು. ಮುಖ್ಯ ಅತಿಥಿಗಳಾಗಿ ಕೊಂಪುಳೀರ ಅಶೋಕ್ ಅಧ್ಯಕ್ಷರು ಮಡಿಕೇರಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಕಪಿಲ್‌ಕುಮಾರ್ ದುಗ್ಗಳ ವಕೀಲರು ಮತ್ತು ಪ್ರಧಾನ ಕಾರ್ಯದರ್ಶಿಗಳು ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮತ್ತು ಕೋಚನ ತೇಜಸ್ ಮಾಜಿ ಅಂತರರಾಷ್ಟಿçÃಯ ಮ್ಯಾರಥಾನ್ ಓಟಗಾರರು, ಮಂಜು ದೈಹಿಕ ಶಿಕ್ಷಣ ನಿರ್ದೇಶಕರು ಪ.ಪೂ. ಕಾಲೇಜು, ಮೂರ್ನಾಡು ಮತ್ತು ಶಿವ, ದೈಹಿಕ ಶಿಕ್ಷಕರು ರಾಜೇಶ್ವರಿ ವಿದ್ಯಾಸಂಸ್ಥೆ, ಅರಮನೆಪಾಲೆ ಸಮಾಜದ ಕಾರ್ಯದರ್ಶಿಗಳಾದ ಪಿ.ಬಿ. ದೇವಯ್ಯ ಹಾಕತ್ತೂರು ಮತ್ತು ಸಮಾಜದ ಪದಾಧಿಕಾರಿಗಳಾದ ಯತೀಶ್ ಬಿದ್ದಪ್ಪ ಬಾಳುಗೋಡು, ಸುಬ್ಬಯ್ಯ ನಾಪೋಕ್ಲು, ಮಂಜುನಾಥ ಕುಂಜಿಲ, ಪ್ರವೀಣ್ ಮುತ್ತಾರ್ಮುಡಿ, ರಘು ಹಾಕತ್ತೂರು, ವಿನಯ್ ನಾಪೋಕ್ಲು ಇವರುಗಳು ಪಾಲ್ಗೊಂಡಿದ್ದರು. ಥಸ್ವೀಕಾ ತಂಗಮ್ಮ ಮಡಿಕೇರಿ ಪ್ರಾರ್ಥಿಸಿದರು.

ವಿಜೇತರು

ಪುರುಷರ ಫುಟ್ಬಾಲ್ ವಿಭಾಗದಲ್ಲಿ ಜಿಲ್ಲಾ ಸಮಿತಿ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಪೇರೂರು, ನಾಪೋಕ್ಲು ಗ್ರಾಮ ಸಮಿತಿಯವರು ಪಡೆದುಕೊಂಡರೆ, ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪೇರೂರು, ನಾಪೋಕ್ಲು ಗ್ರಾಮ ಸಮಿತಿ ಮತ್ತು ದ್ವಿತೀಯ ಸ್ಥಾನವನ್ನು ಮಾದಾಪುರ ಗ್ರಾಮ ಸಮಿತಿಯವರು ಪಡೆದುಕೊಂಡರು.

ಮಹಿಳೆಯರ ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ ಪೇರೂರು, ನಾಪೋಕ್ಲು, ಗ್ರಾಮ ಸಮಿತಿ, ದ್ವಿತೀಯ ಸ್ಥಾನವನ್ನು ಚೆಯ್ಯಂಡಾಣೆ ಗ್ರಾಮ ಸಮಿತಿಯವರು ಪಡೆದುಕೊಂಡರು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ಪೇರೂರು, ನಾಪೋಕ್ಲು ಗ್ರಾಮ ಸಮಿತಿ, ದ್ವಿತೀಯ ಸ್ಥಾನವನ್ನು ಚೆಯ್ಯಂಡಾಣೆ ಗ್ರಾಮ ಸಮಿತಿಯವರು ಪಡೆದುಕೊಂಡರು.

ವಯಸ್ಕರ ಕ್ರೀಡೆಯಲ್ಲಿ ಪ್ರಥಮ ಸ್ಥಾನವನ್ನು ಪಾರ್ವತಿ ಪಿ.ಬಿ. ಚೆಯ್ಯಂಡಾಣೆ, ದ್ವಿತೀಯ ಸ್ಥಾನವನ್ನು ದಮಯಂತಿ ಪಿ.ಬಿ. ಬಾಡಗ ಪಡೆದುಕೊಂಡರು. ೧ ರಿಂದ ೪ನೇ ತರಗತಿ ವಿದ್ಯಾರ್ಥಿಗಳ ಓಟದ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ತೇಜಸ್ ಲಕ್ಷö್ಮಣ್ ಪ್ರಥಮ ಸ್ಥಾನ, ರೀತೇಶ್ ಅನಿತಾ ಪಾಲೆಮಾಡು ದ್ವಿತೀಯ ಸ್ಥಾನ, ಬಾಲಕಿಯರ ವಿಭಾಗದಲ್ಲಿ ತಕ್ಷö್ಮಪೊನ್ನಪ್ಪ ಪ್ರಥಮ, ನವ್ಯ ಸಾನ್ವಿ ದ್ವಿತೀಯ ಸ್ಥಾನ, ೫ ರಿಂದ ೭ನೇ ತರಗತಿ ವಿಭಾಗದಲ್ಲಿ ಬಾಲಕರ ವಿಭಾಗದಲ್ಲಿ ಸೋಮಯ್ಯ ಮೇದಪ್ಪ ಪ್ರಥಮ, ರಾಜೇಶ್ ಗಂಗಾಧರ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಸಿಂಚನಾ ಪೂವಣ್ಣ ಪ್ರಥಮ, ಥಸ್ಮಾ ಸುನಿಲ್ ದ್ವಿತೀಯ ಸ್ಥಾನ, ೮ ರಿಂದ ೧೦ನೇ ತರಗತಿ ಬಾಲಕರ ವಿಭಾಗದಲ್ಲಿ ದೇವಯ್ಯ ಗಣೇಶ್ ಪ್ರಥಮ, ಕಿರಣ್ ಸುನಿಲ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಹಂಶಿಕಾ ರಮೇಶ್ ಪ್ರಥಮ, ಧನ್ಯಾ ಶಂಭು ದ್ವಿತೀಯ ಸ್ಥಾನ ಪಡೆದುಕೊಂಡರು. ಕಾಳು ಎಕ್ಕುವ ಸ್ಪರ್ಧೆಯಲ್ಲಿ ಸಮಂತ್ ಆನಂದ ಪ್ರಥಮ, ಸಾನ್ವಿ ಲೋಕೇಶ್ ದ್ವಿತೀಯ ಸ್ಥಾನ ಪಡೆದುಕೊಂಡರು.