ವರದಿ: ಚಂದ್ರಮೋಹನ್

ಕುಶಾಲನಗರ, ಡಿ.೧೯: ಕುಶಾಲನಗರ ಪುರಸಭೆಯಾಗಿ ಮೇಲ್ದರ್ಜೆಗೇರಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತನೆಗೊಂಡಿರುವ ಸಂಬAಧ ಮುಳ್ಳುಸೋಗೆ ಕಂದಾಯ ಗ್ರಾಮ ಮತ್ತು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಮಾದಪಟ್ಟಣ ವ್ಯಾಪ್ತಿಯ ಆಯ್ದ ಪ್ರದೇಶಗಳನ್ನು ಕುಶಾಲನಗರ ಪುರಸಭೆಗೆ ವರ್ಗಾಯಿಸುವುದು ಮತ್ತು ಹಸ್ತಾಂತರಿಸಬೇಕಾದ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.

೧೯೯೩ರಿಂದ ಇದುವರೆಗೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮಾಹಿತಿಗಳನ್ನು ಒಳಗೊಂಡAತೆ ಕಟ್ಟಡ, ಸರ್ಕಾರಿ ಆಸ್ತಿ, ದಾಖಲೆಗಳನ್ನು ತಕ್ಷಣದಿಂದಲೇ ಹಸ್ತಾಂತರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತಾ.೮ ರಂದು ಕುಶಾಲನಗರ ಪುರಸಭೆಯ ಬಗ್ಗೆ ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಟ ಬೆನ್ನಲ್ಲೇ ಕೇವಲ ೨೨ ತಿಂಗಳ ಅಧಿಕಾರವಧಿ ಯನ್ನು ಮುಗಿಸಿರುವ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ೨೩ ಸದಸ್ಯರ ಅಧಿಕಾರ ರದ್ದುಗೊಂಡಿದೆ. ಪುರಸಭೆಗೆ ಹಸ್ತಾಂತರಿಸುವ ಮುನ್ನ ಸ್ಥಳೀಯ ಲೆಕ್ಕಪರಿಶೋಧನೆ ನಡೆಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ

(ಮೊದಲ ಪುಟದಿಂದ) ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ತಾ. ೨೩ರ ತನಕ ಲೆಕ್ಕಪತ್ರಗಳಿಗೆ ಸಹಿ ಹಾಕುವ ಅವಕಾಶವನ್ನು ಕಲ್ಪಿಸಲಾಗಿದೆ.

ವಾರ್ಷಿಕ ಅಂದಾಜು ೧ ಕೋಟಿ ರೂ. ಗಳ ಆದಾಯ ತರುವ ಮುಳ್ಳುಸೋಗೆ ಕಂದಾಯ ಗ್ರಾಮ ಪುರಸಭೆಗೆ ಸೇರ್ಪಡೆಗೊಂಡ ನಂತರ ಇನ್ನು ಹೆಚ್ಚಿನ ಆದಾಯ ಗಳಿಸುವ ಎಲ್ಲಾ ಅವಕಾಶ ಪುರಸಭೆಗೆ ದೊರಕಲಿದೆ.

ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಕಚೇರಿ ಸುಮಾರು ೭೭ ಸೆಂಟ್ ವಿಸ್ತೀರ್ಣದ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರ, ಸೋಲಾರ್ ವ್ಯವಸ್ಥೆಯನ್ನು ಒಳಗೊಂಡ ೨ ಸಭಾಂಗಣಗಳನ್ನು ಹೊಂದಿರುವ ಸ್ವಂತ ಕಟ್ಟಡದ ಆವರಣದಲ್ಲಿ ಅಧಿಕಾರಿ ಸಿಬ್ಬಂದಿಗಳ ೫ ಕೊಠಡಿಗಳು, ಅಂಚೆÀ ಕಚೇರಿ, ಶುದ್ಧ ಕುಡಿಯುವ ನೀರಿನ ಘಟಕ, ಆರೋಗ್ಯ ಉಪಕೇಂದ್ರ, ಶಿಶು ವಿಹಾರ, ಮಕ್ಕಳ ಒಳಾಂಗಣ ಕ್ರೀಡಾಂಗಣ, ಪುಸ್ತಕಾಲಯ, ಸೇವಾ ಕೇಂದ್ರ, ಟ್ಯಾçಕ್ಟರ್ ಶೆಡ್ ಸೇರಿದಂತೆ ವೈಜ್ಞಾನಿಕ ಕಸ ವಿಲೇವಾರಿ ಘಟಕ, ಉದ್ಯಾನವನ ಮತ್ತು ಕಚೇರಿಯಲ್ಲಿ ಕಂಪ್ಯೂಟರ್‌ಗಳು, ಯುಪಿಎಸ್ ವ್ಯವಸ್ಥೆ ಒಟ್ಟಾರೆ ಜಿಲ್ಲೆಗೆ ಮಾದರಿಯಾಗಿರುವ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಕಟ್ಟಡ ಸೇರಿದಂತೆ ಕಂದಾಯ ಗ್ರಾಮ ಕುಶಾಲನಗರ ಪುರಸಭೆಗೆ ಹಸ್ತಾಂತರವಾಗಲು ಕ್ಷಣಗಣನೆ ಎಣಿಸುತ್ತಿದೆ.

ಸದಾ ಸುದ್ದಿಯಲ್ಲಿರುತ್ತಿದ್ದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಇದುವರೆಗೂ ೯ ಅಧ್ಯಕ್ಷರನ್ನು ಹಾಗೂ ಹಲವು ಅಧಿಕಾರಿಗಳನ್ನು ಕಂಡಿದೆ. ಹಲವು ಹಗರಣಗಳನ್ನು ಕಂಡ ಪಂಚಾಯಿತಿ ಇದೀಗ ಪುರಸಭೆಯೊಂದಿಗೆ ವಿಲೀನಗೊಳ್ಳಲಿದೆ. ಕಂದಾಯ ಗ್ರಾಮದಲ್ಲಿ ಬಾಕಿ ಇರುವ ೮ ವ್ಯಾಜ್ಯಗಳು ಇನ್ನಷ್ಟೇ ವಿಲೇವಾರಿಯಾಗಬೇಕಾಗಿದೆ.

ಮುಳ್ಳುಸೋಗೆ ಗ್ರಾಮದಲ್ಲಿ ೩ ಸರ್ಕಾರಿ ಪ್ರಾಥಮಿಕ ಶಾಲೆಗಳು, ೧ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶೈಕ್ಷಣಿಕ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಿ ಕಟ್ಟಡಗಳಾದ ವಾಲ್ಮೀಕಿ ಭವನ, ಅಂಬೇಡ್ಕರ್ ಭವನಗಳು ಕೂಡ ಪುರಸಭೆಗೆ ಸೇರ್ಪಡೆಗೊಳ್ಳಲಿವೆ. ೨೦೧೧ ರ ಜನಗಣತಿ ಪ್ರಕಾರ ಗ್ರಾಮದಲ್ಲಿ ಅಂದಾಜು ೯೯೦೦ ರಷ್ಟು ಜನಸಂಖ್ಯೆ ದಾಖಲೆ ಕಂಡುಬAದಿದೆ.

ಗ್ರಾಮ ಪಂಚಾಯಿತಿಯಲ್ಲಿ ಓರ್ವ ಪಿಡಿಓ ಸೇರಿದಂತೆ ೩ ಮಂದಿ ಸರ್ಕಾರಿ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಉಳಿದಂತೆ ೯ ಮಂದಿ ಪೌರಕಾರ್ಮಿಕರು, ೪ ಮಂದಿ ದಿನಗೂಲಿ, ಓರ್ವ ಚಾಲಕ ಸೇರಿದಂತೆ ೧೫ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ನೌಕರರು ಬೇರೆಡೆಗೆ ವರ್ಗಾವಣೆಯಾಗಲಿದ್ದು, ಉಳಿದಂತೆ ಎಲ್ಲ ಸಿಬ್ಬಂದಿಗಳು ಪುರಸಭೆಗೆ ಒಳಪಡಲಿದ್ದಾರೆ ಎಂದು ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಯಣ್ಣ ‘ಶಕ್ತಿ’ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧೫ನೇ ಹಣಕಾಸು ಯೋಜನೆಯಡಿಯಲ್ಲಿ ಪ್ರಸಕ್ತ ೩೫ ಲಕ್ಷ ರೂ. ವೆಚ್ಚದಲ್ಲಿ ೮ ಕಾಮಗಾರಿಗಳು ನಡೆಯುತ್ತಿದ್ದು, ಕೆಲವು ಕಾಮಗಾರಿಗಳಿಗೆ ಮಾತ್ರ ಪಂಚಾಯಿತಿ ಮೂಲಕ ಹಣ ಪಾವತಿಸುವ ಸಾಧ್ಯತೆ ಇದ್ದು, ಸುಮಾರು ೧೫ ಲಕ್ಷ ರೂ. ಗಳ ಕಾಮಗಾರಿ ಇನ್ನೂ ಅಪೂರ್ಣ ಹಂತದಲ್ಲಿದೆ.

ಮುಳ್ಳುಸೋಗೆ ಗ್ರಾಮ ಪಂಚಾಯಿತಿಗೆ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಸೇವೆಗಾಗಿ ಹಲವು ಪ್ರಶಸ್ತಿಗಳು ಲಭ್ಯವಾಗಿದ್ದು, ರಾಜ್ಯಮಟ್ಟದ ಗಾಂಧಿ ಗ್ರಾಮ ಪ್ರಶಸ್ತಿ ಹಾಗೂ ಜಿಲ್ಲಾಮಟ್ಟದ ಪ್ರಶಸ್ತಿಗಳು ಲಭ್ಯವಾಗಿವೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಆರ್. ಸುಮೇಶ್ ತಿಳಿಸಿದ್ದು, ಗ್ರಾಮ ಪಂಚಾಯಿತಿಯ ೯ ವಿಭಾಗಗಳಲ್ಲಿ ರಾಷ್ಟç ಮಟ್ಟದ ಪ್ರಶಸ್ತಿಗೆ ಕೂಡ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪುರಸಭೆಗೆ ಸೇರ್ಪಡೆಗೊಂಡ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯ್ದ ಭಾಗಗಳು ಒಳಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿನ ಸದಸ್ಯರ ಅಧಿಕಾರವಧಿ ಮುಂದುವರೆಯಲಿದೆ. ಸದ್ಯದಲ್ಲಿಯೇ ಮಾದಪಟ್ಟಣದ ಆಯ್ದ ಭಾಗಗಳ ಏರಿಯಲ್ ಸರ್ವೇ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿಗಳು ನಗರ ಸ್ಥಳೀಯ ಸಂಸ್ಥೆಗಳಾದಾಗ ಪಂಚಾಯಿತಿಗಳಿAದ ನಗರ ಪ್ರದೇಶಕ್ಕೆ ವರ್ಗಾಯಿಸಲ್ಪಡುವ ಮತ್ತು ಹಸ್ತಾಂತರಿಸುವ ವಿಷಯಗಳಿಗೆ ಸಂಬAಧಿಸಿದAತೆ ಅನುಸರಿಸುವ ಕಾರ್ಯಾಚರಣೆ ಅಂಗವಾಗಿ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಾ. ೨೧ ರಂದು ಮಡಿಕೇರಿಯಲ್ಲಿ ಸಭೆ ಕರೆದಿದ್ದು, ಕುಶಾಲನಗರ ತಾಲೂಕು ತಹಶೀಲ್ದಾರ್, ಭೂ ದಾಖಲೆಗಳ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಗುಡ್ಡೆಹೊಸೂರು ಮತ್ತು ಮುಳ್ಳುಸೋಗೆ ಪಂಚಾಯಿತಿ ಅಧಿಕಾರಿಗಳ ಸಭೆ ನಡೆಯಲಿದೆ.