ಸೋಮವಾರಪೇಟೆ, ಡಿ. ೧೭: ಮೀನುಗಾರಿಕಾ ಇಲಾಖೆಯ ವತಿಯಿಂದ ರಾಜ್ಯ ಹಾಗೂ ಜಿಲ್ಲಾ ವಲಯದ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ತಾಲೂಕಿನ ೨೩ ಮಂದಿ ಫಲಾನುಭವಿಗಳಿಗೆ ಮೀನುಗಾರಿಕಾ ಪರಿಕರಗಳನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ವಿತರಿಸಿದರು. ಶಾಸಕರ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ವಲಯ ಯೋಜನೆಯ ೧೩ ಹಾಗೂ ರಾಜ್ಯ ವಲಯ ಯೋಜನೆಯ ೧೦ ಮಂದಿ ಫಲಾನುಭವಿಗಳಿಗೆ ಎಳೆ ಬಲೆ, ಬೀಸು ಬಲೆ, ಹರಿಗೋಲು ಸೇರಿದಂತೆ ಇತರ ಪರಿಕರಗಳನ್ನು ವಿತರಿಸಲಾಯಿತು. ಈ ಸಂದರ್ಭ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಎಂ. ಸಚಿನ್, ಸಿಬ್ಬಂದಿ ನಿರ್ವಾಣಿ, ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯ ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.