ಕೂಡಿಗೆ, ಡಿ. ೧೮: ಕೂಡಿಗೆಯಲ್ಲಿರುವ ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ನಿರುದ್ಯೋಗಿ ಯುವಕ - ಯುವತಿಯರಿಗೆ ಸಂಪೂರ್ಣ ಉಚಿತವಾಗಿ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿ ಸಂಬAಧಿಸಿದAತೆ ನುರಿತ ಹೈನುಗಾರಿಕೆಯ ವೈದ್ಯರಿಂದ ಮತ್ತು ಸಾವಯುವ ಕೃಷಿ ಬಗ್ಗೆ ತರಬೇತಿಯನ್ನು ೧೦ ದಿನಗಳವರೆಗೆ ನೀಡಲಾಗುತ್ತದೆ. ಅಲ್ಲದೆ ಬ್ಯೂಟಿ ಪಾರ್ಲರ್, ಕಂಪ್ಯೂಟರ್ಗೆ ಸಂಬAಧಿಸಿದ ತರಬೇತಿ, ಕೃಷಿ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಗಳು, ಉತ್ಪಾದನಾ ಉದ್ಯಮಶೀಲತಾ ತರಬೇತಿ, ಪ್ರೋಸೆಸ್ ಉದ್ಯಮ ಶೀಲತಾ ತರಬೇತಿ, ಸಾಮಾನ್ಯ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಗಳನ್ನು ನೀಡಲಾಗುತ್ತದೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ನಿರ್ದೇಶಕ ಕೆ. ಪ್ರಕಾಶ್ ಕುಮಾರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. ೯೬೮೬೪೦೬೧೮೧, ೯೪೪೯೪೦೨೦೮೧, ೭೬೭೬೪೦೭೭೯೨ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.