ಮಡಿಕೇರಿ, ಡಿ. ೧೭: ಕೊಡಗು ಜಿಲ್ಲಾ ಅಥ್ಲೆಟಿಕ್ಸ್ ಅಸೋಷಿಯೇಷನ್ ಆಶ್ರಯದಲ್ಲಿ ತಾ. ೨೦ ಮತ್ತು ೨೧ ರಂದು ಜಿಲ್ಲಾಮಟ್ಟದ ೧೪ ಮತ್ತು ೧೬ ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ ಮತ್ತು ಆಯ್ಕೆ ಪ್ರಕ್ರಿಯೆ ಕೂಡಿಗೆ ಸರ್ಕಾರಿ ಕ್ರೀಡಾ ಶಾಲಾ ಮೈದಾನದಲ್ಲಿ ಆಯಾಯ ದಿನಗಳಂದು ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ.

ಈ ಕ್ರೀಡಾಕೂಟವು ೨೦೨೩ ರ ಜನವರಿ ೧೨ ರಿಂದ ೧೪ ರವರೆಗೆ ಬಿಹಾರ ರಾಜ್ಯದ ಪಾಟ್ನಾದಲ್ಲಿ ನಡೆಯುವ ರಾಷ್ಟçಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ತಮ್ಮ ನೋಂದಾಣಿಯನ್ನು ತಾ. ೧೮ ರ ಸಂಜೆ ೫ ಗಂಟೆಯೊಳಗೆ ಕಾರ್ಯದರ್ಶಿಗಳು/ ಖಜಾಂಚಿ ಇವರಿಗೆ ವಾಟ್ಸಾಪ್ ಮೂಲಕ ಸಲ್ಲಿಸಲು ಕೋರಿದೆ (೯೪೪೮೫೮೮೧೩೯, ೯೮೪೫೧೬೨೮೫೧).

೧೪ ವರ್ಷದೊಳಗಿನ ಬಾಲಕ-ಬಾಲಕಿಯರಿಗೆ- ಟ್ರಯಾಥ್ಲಾನ್-ಎ-೬೦ ಮೀ. ಸ್ಟಾಂಡಿAಗ್ ಬ್ರಾಡ್ ಜಂಪ್, ಗುಂಡು ಎಸೆತ, ಟ್ರಾಯಾಥ್ಲಾನ್-ಬಿ-೬೦ ಮೀ. ಸ್ಟಾಂಡಿAಗ್ ಬ್ರಾಡ್ ಜಂಪ್, ಎತ್ತರ ಜಿಗಿತ, ಟ್ರಯಾಥ್ಲಾನ್-ಸಿ-೬೦ ಮೀ. ಸ್ಟಾಂಡಿAಗ್ ಬ್ರಾಡ್ ಜಂಪ್, ೬೦೦ ಮೀ.

೧೬ ವರ್ಷದೊಳಗಿನ ಬಾಲಕ-ಬಾಲಕಿಯರಿಗೆ-೮೦ ಮೀ., ೬೦೦ ಮೀ., ೧೬೦೦ ಮೀ, ೮೦ ಮೀ. ಹರ್ಡಲ್ಸ್, ಎತ್ತರ ಜಿಗಿತ, ಉದ್ದ ಜಿಗಿತ, ಜಾವಲಿನ್ ಎಸೆತ, ಎಕ್ಸಾಥ್ಲಾನ್ (೬ ಸ್ಪರ್ಧೆಗಳು ೧ನೇ ದಿನ ೬೦ ಮೀ. ಉದ್ದ ಜಿಗಿತ, ಗುಂಡು ಎಸೆತ, ೨ನೇ ದಿನ ಎತ್ತರ ಜಿಗಿತ, ಜಾವಲಿನ್ ಎಸೆತ, ೧೦೦ಒ ಮೀ.).

ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಕಡ್ಡಾಯವಾಗಿ ಯೂಐಡಿ ಸಂಖ್ಯೆಯನ್ನು ಹೊಂದಿರಬೇಕು. (ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್‌ನಲ್ಲಿ ನೊಂದಾಯಿಸಿರಬೇಕು. ೧೪ ವರ್ಷದೊಳಗಿನ ಬಾಲಕ, ಬಾಲಕಿಯರು ೨೦೦೯ ರ ಜನವರಿ ೧೫ ರಿಂದ ೨೦೧೧ ರ ಜನವರಿ ೧೪ ರೊಳಗೆ ಜನಿಸಿರಬೇಕು. ೧೬ ವರ್ಷದೊಳಗಿನ ಬಾಲಕ, ಬಾಲಕಿಯರಿಗಾಗಿ ೨೦೦೭ರ ಜನವರಿ ೧೫ ರಿಂದ ೨೦೦೯ ರ ಜನವರಿ ೧೪ ರೊಳಗೆ ಜನಿಸಿರಬೇಕು. ಸಂಘಟಿತರ ತೀರ್ಮಾನವೇ ಅಂತಿಮವಾಗಿದೆ ಎಂದು ಪ್ರಕಟಣೆ ತಿಳಿಸಿದೆ.