ಕೂಡಿಗೆ, ಡಿ. ೧೭: ರಾಜ್ಯ ಸರಕಾರವು ಈ ಸಾಲಿನಲ್ಲಿ ರೈತರಿಂದ ಕನಿಷ್ಟ ಬೆಂಬಲ ಯೋಜನೆ ಯಡಿಯಲ್ಲಿ ಕುಶಾಲನಗರ ತಾಲೂಕು ವ್ಯಾಪ್ತಿಯ ರೈತರು ಬೆಳೆದ ಭತ್ತ ಮತ್ತು ರಾಗಿಯನ್ನು ಖರೀದಿಸಲು ಅನುಕೂಲ ಕಲ್ಪಿಸುವ ಹಿನ್ನೆಲೆ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆಯ ಸಭಾಂಗಣದಲ್ಲಿ ಖರೀದಿಗೆ ಸಂಬAಧಿಸಿದAತೆ ರೈತರ ನೋಂದಣಿ ಕಾರ್ಯ ಆರಂಭಗೊAಡಿದೆ.
ಕೃಷಿ ಮಾರಾಟ ಇಲಾಖೆ ವತಿಯಿಂದ ೨೦೨೨-೨೩ನೇ ಸಾಲಿಗೆ ತಾಲೂಕು ವ್ಯಾಪ್ತಿಯಲ್ಲಿ ಬೆಳೆದ ಭತ್ತ ಬೆಳೆ ಮತ್ತು ರಾಗಿಯನ್ನು ಇಲಾಖೆಯ ನಿಯಮಾನುಸಾರ ಖರೀದಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ಅದರಂತೆ ರೈತರು ಸಮರ್ಪಕವಾದ ದಾಖಲೆಗಳ ಮಾಹಿತಿಯನ್ನು ಒದಗಿಸುವ ಮೂಲಕ ಯೋಜನೆಯ ಪ್ರಯೋ ಜನವನ್ನು ಪಡೆದುಕೊಳ್ಳಬೇಕು ಎಂದು ಇಲಾಖೆಯ ಅಧಿಕಾರಿ ಸೋಮಯ್ಯ ತಿಳಿಸಿದ್ದಾರೆ.
ಹಾರಂಗಿ ಅಚ್ಚುಕಟ್ಟು ಪ್ರದೇಶ ಗಳಾದ ಹೆಬ್ಬಾಲೆ, ತೊರೆನೂರು, ಹುದುಗೂರು, ಮಾದಲಾಪುರ, ಕೂಡಿಗೆ ಸೇರಿದಂತೆ ಮತ್ತು ಮಳೆ ಆಧಾರಿತ ಅನೇಕ ಪ್ರದೇಶದಲ್ಲಿ ಈ ಸಾಲಿನಲ್ಲಿ ಹೆಚ್ಚು ಭತ್ತದ ಬೆಳೆಯನ್ನು ಬೆಳೆಯಲಾಗಿದೆ.
ಈಗಾಗಲೇ ಈ ವ್ಯಾಪ್ತಿಗಳಲ್ಲಿ ಭತ್ತದ ಬೆಳೆಯ ಕಟಾವು ಆರಂಭಗೊAಡಿದ್ದು, ರೈತರು ಕೊಯ್ಲು ಮಾಡಿದ ಭತ್ತ ಬೆಳೆಯನ್ನು ಕಣಗಳಲ್ಲಿ ಸಂಗ್ರಹಣೆ ಮಾಡಿ ನಂತರ ಭತ್ತವನ್ನು ಸಿದ್ಧತೆ ಮಾಡಿ, ಕೃಷಿ ಮಾರಾಟ ಇಲಾಖೆಗೆ ಖರೀದಿ ಕೇಂದ್ರಕ್ಕೆ ನೀಡಲು ಸಿದ್ಧರಾಗಿದ್ದಾರೆ.
ಕೃಷಿ ಮಾರಾಟ ಇಲಾಖೆಯ ಮೂಲಕ ಸರಕಾರದ ಬೆಂಬಲ ಬೆಲೆಯಾಗಿ ಈ ಸಾಲಿನಲ್ಲಿ ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್ಗೆ ೨,೦೪೦ ಗ್ರೇಡ್ ಎ, ಭತ್ತಕ್ಕೆ ೨,೦೬೦ ರಾಗಿಗೆ ೩೫೭೮ ರೂ. ಕ್ವಿಂಟಾಲ್ನAತೆ ಖರೀದಿ ಮಾಡಲಾಗುವುದು. ತಾ. ೧೫ ರಿಂದ ೩೧ ರವರೆಗೆ ನೋಂದಣಿ ಮಾಡಿ ನಂತರ ಮುಂದಿನ ತಿಂಗಳಲ್ಲಿ ಖರೀದಿಗೆ ಸಂಬAಧಿಸಿದAತೆ ಪ್ರಕ್ರಿಯೆ ನಡೆಯುತ್ತದೆ ಎಂದು ಸಂಬAಧಿಸಿದ ಅಧಿಕಾರಿ ತಿಳಿಸಿದ್ದಾರೆ.