ಚೆಟ್ಟಳ್ಳಿ, ಡಿ. ೧೬: ಚೆಟ್ಟಳ್ಳಿ ಶ್ರೀ ಅಯ್ಯಪ್ಪ ದೇವಾಲಯದ ವಾರ್ಷಿಕ ಮಹೋತ್ಸವ ಹಾಗೂ ಮಂಡಳ ಪೂಜೆ ತಾ.೨೭ರ ಮಂಗಳವಾರ ವಿವಿಧ ದೈವಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ ಎಂದು ಕಾರ್ಯದರ್ಶಿ ಸುರೇಶ್ ಬಾಬು ತಿಳಿಸಿದ್ದಾರೆ. ಪೂರ್ವಾಹ್ನ ೭ ರಿಂದ ೯ ಗಂಟೆಯ ವರೆಗೆ ಗಣಪತಿ ಹವನ, ೧೦ ಗಂಟೆಯಿAದ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ, ಮಂಗಳಾರತಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೭.೩೦ ಗಂಟೆಗೆ ದೀಪಾರಾಧನೆ, ರಂಗಪೂಜೆ ಹಾಗೂ ಮಹಾ ಪೂಜೆಯ ನಂತರ ಅನ್ನಸಂತರ್ಪಣೆ ನಡೆಯಲಿದೆ.