ವೀರಾಜಪೇಟೆ, ಡಿ. ೧೬: ಐತಿಹಾಸಿಕ ಹಿನ್ನೆಲೆ ಇರುವ ಕಾಕೋಟುಪರಂಬು ಕಾಲಬೈರವ ದೇವರ ಉತ್ಸವವು ಮೂರು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಜರುಗಿ ಬೇತ್ರಿಯ ಕಾವೇರಿ ನದಿಯಲ್ಲಿ ಜಳಕ ಮಾಡುವುದರೊಂದಿಗೆ ತಾ. ೧೭ ರಂದು (ಇಂದು) ತೆರೆ ಬೀಳಲಿದೆ.

ತಾ. ೧ ರಂದು ದೇವರ ಕಟ್ಟು ಬಿದ್ದು ೧೪ ರವರೆಗೆ ಪೀಲಿಮಂದ್‌ನಲ್ಲಿ ರಾತ್ರಿ ಪೀಲಿಯಾಟ್ ನಡೆದವು. ತಾ. ೧೫ ರಂದು ಮರತತೆರೆ ನಡೆದ ನಂತರ ಅದೇ ದಿನ ರಾತ್ರಿ ತಕ್ಕಮುಖ್ಯಸ್ಥರಾದ ತೋಣೂರು ಕೇರಿಯ ಅಮ್ಮಂಡಿರ ಕುಟುಂಬದಿAದ ದೇವರ ಭಂಡಾರವನ್ನು ದೇವಾಲಯಕ್ಕೆ ತಂದ ನಂತರ ತಾ. ೧೬ ರಂದು ಮುಂಜಾನೆ ಇರುಳು ಬೆಳಕು, ಬೊಳಕಾಟುವಿನೊಂದಿಗೆ ನೆರೆದಿದ್ದ ಭಕ್ತಾದಿಗಳು ದೇವರ ದರ್ಶನ ಪಡೆದುಕೊಂಡರು.

ತಾ. ೧೬ ರಂದು ಅಪರಾಹ್ನ ೧ ಗಂಟೆಗೆ ಮೂಗೂರುಕೇರಿಯಿಂದ ದೇವರ ಕೊಡೆ, ಪಾಂಡಿಮಾಡುಕೇರಿ ಯಿಂದ ದೇವರ ಚೌರಿ ಹಾಗೂ ಪೆಮ್ಮಾಡುಕೇರಿಯಿಂದ ದೇವರ ಬೆತ್ತದ ಕುದುರೆಯನ್ನು ತಂದು ದೇವಾಲಯಕ್ಕೆ ಒಪ್ಪಿಸಿ ದೇವರ ದರ್ಶನ ಪಡೆಯಲಾಯಿತು. ಕುಟುಂಬದಿAದ ದೇವರ ಭಂಡಾರವನ್ನು ದೇವಾಲಯಕ್ಕೆ ತಂದ ನಂತರ ತಾ. ೧೬ ರಂದು ಮುಂಜಾನೆ ಇರುಳು ಬೆಳಕು, ಬೊಳಕಾಟುವಿನೊಂದಿಗೆ ನೆರೆದಿದ್ದ ಭಕ್ತಾದಿಗಳು ದೇವರ ದರ್ಶನ ಪಡೆದುಕೊಂಡರು.

ತಾ. ೧೬ ರಂದು ಅಪರಾಹ್ನ ೧ ಗಂಟೆಗೆ ಮೂಗೂರುಕೇರಿಯಿಂದ ದೇವರ ಕೊಡೆ, ಪಾಂಡಿಮಾಡುಕೇರಿ ಯಿಂದ ದೇವರ ಚೌರಿ ಹಾಗೂ ಪೆಮ್ಮಾಡುಕೇರಿಯಿಂದ ದೇವರ ಬೆತ್ತದ ಕುದುರೆಯನ್ನು ತಂದು ದೇವಾಲಯಕ್ಕೆ ಒಪ್ಪಿಸಿ ದೇವರ ದರ್ಶನ ಪಡೆಯಲಾಯಿತು. ೧೫ ದಿನಗಳ ಕಾಲ ಕಟ್ಟು ಪಾಡುಗಳೊಂದಿಗೆ ಆಚರಿಸುವ ಈ ಹಬ್ಬದಲ್ಲಿ ನೂರಾರು ಭಕ್ತರು ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ಪಾಲ್ಗೊಂಡಿದ್ದರು. ಹಿಂದೆ ಈ ಹಬ್ಬದಲ್ಲಿ ವಧುವರರ ಅನ್ವೇಷಣೆ ಕೂಡ ನಡೆಯತ್ತಿತ್ತು ಎಂದು ಹಿರಿಯರು ತಿಳಿಸಿದ್ದಾರೆ.

-ಪಾರ್ಥ ಚಿಣ್ಣಪ್ಪ