ಗೋಣಿಕೊಪ್ಪ ವರದಿ, ಡಿ. ೧೭: ಗೋಣಿಕೊಪ್ಪ ರೋಟರಿ ಸಂಸ್ಥೆ ವತಿಯಿಂದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತç ಕೊಡುಗೆಯಾಗಿ ನೀಡಲಾಯಿತು. ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲೆಯ ೪೨೫ ವಿದ್ಯಾರ್ಥಿಗಳು ಸಮವಸ್ತç ಸ್ವೀಕರಿಸಿದರು.
ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳಲ್ಲಿ ಶಿಕ್ಷಣದತ್ತ ಒಲವು ಮೂಡಿಸಲು ವಾರದ ಒಂದು ದಿನ ನೀಲಿ ಬಣ್ಣದ ಟಿ. ಶರ್ಟ್ ನೀಡಲು ಆಡಳಿತ ಮಂಡಳಿ ನಿರ್ಧರಿಸಿತ್ತು. ಇದರಂತೆ ಈಗಾಗಲೇ ದಾನಿಗಳ ಸಹಕಾರದಲ್ಲಿ ವಿತರಿಸಲಾಗಿತ್ತು. ಇದರಿಂದ ಮಕ್ಕಳಲ್ಲಿನ ಉತ್ಸಾಹ ಇಮ್ಮಡಿಗೊಂಡಿದ್ದು, ರೋಟರಿ ಸಂಸ್ಥೆ ನೀಡಿರುವ ಸಮವಸ್ತçವನ್ನು ವಾರದ ಮತ್ತೊಂದು ದಿನ ತೊಟ್ಟು ಬರಲು ಸಹಕಾರಿಯಾಗಿದೆ ಎಂದರು.
ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಮಾತನಾಡಿ, ದೇಶಕ್ಕೆ ಸಾಕಷ್ಟು ಸಂಪನ್ಮೂಲ ವ್ಯಕ್ತಿಗಳನ್ನು ನೀಡುವಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಹೆಚ್ಚಿದೆ. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ಸಹಾಯಕ ಗವರ್ನರ್ ರತನ್ ತಮ್ಮಯ್ಯ, ಆಡಳಿತ ಕಾರ್ಯದರ್ಶಿ ಕೆ. ನಾರಾಯಣ ಹೆಗ್ಡೆ, ವಲಯ ಸೇನಾನಿ ನವೀನ್ ಬೆಳ್ಯಪ್ಪ, ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷೆ ಜೆ.ಕೆ. ಶುಭಾಷಿಣಿ, ಕಾರ್ಯದರ್ಶಿ ಅರುಣ್ ತಮ್ಮಯ್ಯ, ಹಿರಿಯರಾದ ಡಾ. ಚಂದ್ರಶೇಖರ್, ಇಮ್ಮಿ ಉತ್ತಪ್ಪ, ಮೂಕಳೇರ ಬೀಟಾ, ಬಲ್ಲಣಮಾಡ ರೀಟಾ, ಪೊಕ್ಕಳಿಚಂಡ ಬಿ. ಪೂಣಚ್ಚ ಇದ್ದರು.