ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ತೊಡಗಿಸುವಿಕೆ ಯನ್ನು ಗುರುತಿಸುವುದಾದರೆ, ಆಧುನಿಕ ಪೂರ್ವ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯ, ವಚನ ಸಾಹಿತ್ಯ, ವೈಷ್ಣವ ಸಾಹಿತ್ಯ ಮತ್ತು ಒಡೆಯರ ಕಾಲದ ಸಾಹಿತ್ಯದಲ್ಲಿ ಗುರುತಿಸಬಹುದು. ಇಡೀ ಸಾಹಿತ್ಯ ಚರಿತ್ರೆಯಲ್ಲಿ ಲೆಕ್ಕ ಹಾಕಿದರೆ ಸ್ತಿçà ಧ್ವನಿ ಪ್ರಮಾಣದ ದೃಷ್ಟಿಯಿಂದ ಇತ್ತ ಕಡಿಮೆಯೆಂದೇ ಹೇಳಬಹುದು.

ಈ ನಿಟ್ಟಿನಲ್ಲಿ ಇಪ್ಪತ್ತನೆಯ ಶತಮಾನದ ಆದಿಭಾಗ ಹೊಸಗನ್ನಡ ನವೋದಯ ಸಾಹಿತ್ಯದ ಪರ್ವಕಾಲ, ಸ್ವಾತಂತ್ರö್ಯ ಚಳುವಳಿಯ ಕಾವು, ಸಮಾಜ ಸುಧಾರಣೆಯ ಹುರುಪು, ಆಧುನಿಕ ವಿಚಾರಗಳ ಸೆಳೆತ ಎಲ್ಲವನ್ನೂ ತನ್ನಲ್ಲಿ ಹುದುಗಿಸಿಕೊಂಡು ಸಾಹಿತ್ಯ ಕೃಷಿಗೆ ತೊಡಗಿದ ಎಳೆಯ ಜೀವವೊಂದು ಬೆಳೆದ ಫಸಲು ಸ್ವಲ್ಪವೇ ಆದರೂ, ಸತ್ತ÷್ವದಲ್ಲಿ ಗಟ್ಟಿಯಾಗಿತ್ತು. ಈ ಕೃಷಿಕಳು ಮತ್ತಾರು ಅಲ್ಲ ಕೊಡಗಿನ ಗೌರಮ್ಮ. ಅವರ ಸಾಹಿತ್ಯ ಚಿಗುರು ವೃಕ್ಷವಾಗುವ ಮೊದಲೇ ಅದು ಕಂಬನಿಯ ಕಡಲ ಪಾಲಾಗಿತ್ತು. ಅಂದು ಅವರು ಮೂಡಿಸಿದ ಹೆಜ್ಜೆ ಗುರುತುಗಳು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಾಸದಂತಹವು.

ಹವ್ಯಕ ಬ್ರಾಹ್ಮಣ ಸಂಪ್ರದಾಯದ ಶ್ರೀಮತಿ ನಂಜಕ್ಕ ಮತ್ತು ವಕೀಲ ಎನ್. ಎಸ್. ರಾಮಯ್ಯನವರ ಕೊನೆಯ ಮಗಳಾಗಿ ೧೯೧೨ ಮಾರ್ಚ್ ೫ ರಂದು ಮಡಿಕೇರಿಯಲ್ಲಿ ಜನಿಸಿದರು. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು ತಂದೆಯ ನೆರಳಲ್ಲಿ ಬೆಳೆದರು. ಇವರು ಮಡಿಕೇರಿಯ ಸೆಂಟ್ರಲ್ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ.ಯವರೆಗೆ ಓದಿದ್ದು ೧೯೨೯ ರಲ್ಲಿ ಸುಂಟಿಕೊಪ್ಪದ ಬಿ. ಟಿ. ಗೋಪಾಲಕೃಷ್ಣರವರನ್ನು ವಿವಾಹವಾಗಿ ಶ್ರೀಮತಿ ಬಿಟಿಜಿ ಕೃಷ್ಣ ಎಂದು ನಾಮಾಂಕಿತರಾದರು. ೧೯೩೬ರಲ್ಲಿ ಹಿಂದಿ ಕಲಿತು ಅದರಲ್ಲಿ ‘ವಿಶಾರದ' ಪರೀಕ್ಷೆ ಪಾಸಾದರು, ಇವರ ಮಗ ವಸಂತ.

ಸೋಮವಾರಪೇಟೆ ತಾಲೂಕು ಮಾದಾಪುರ ಸಮೀಪದ ಗುಂಡುಗುಟ್ಟಿ ಮಂಜುನಾಥಯ್ಯನವರ ಕಾಫಿ ತೋಟದಲ್ಲಿ ಮ್ಯಾನೇಜರ್ ಆಗಿ ಬಿ. ಟಿ. ಗೋಪಾಲಕೃಷ್ಣ ಅವರು ದುಡಿಯುತ್ತಿದ್ದರು. ತಾಯಿ ಮನೆಯಲ್ಲಿ ಕಲಿಕೆಗೆ ತೊಂದರೆಯಿಲ್ಲದ ಗೌರಮ್ಮ ಅವರಿಗೆ ಗಂಡನ ಮನೆಯಲ್ಲಿಯೂ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ಗುಂಡುಗುಟ್ಟಿ ಮಂಜುನಾಥಯ್ಯನವರು ಇಡೀ ಊರಿಗೆ ಹೆಸರುವಾಸಿಯಾದ ಕಾರಣ ಊರಿಗೆ ಬರುವ ಗಣ್ಯವ್ಯಕ್ತಿಗಳು ಮಂಜುನಾಥಯ್ಯನವರ ಮನೆಗೆ ಬಂದೇ ಬರುತ್ತಿದ್ದರು. ಗಾಂಧೀಜಿ, ಶಿವರಾಮಕಾರಂತ, ಮಾಸ್ತಿವೆಂಕಟೇಶ ಅಯ್ಯಂಗಾರ್, ದ. ರಾ. ಬೇಂದ್ರೆಯವರAತಹ ಮಹಾನ್ ವ್ಯಕ್ತಿಗಳು ಅಲ್ಲಿಗೆ ಆಗಮಿಸುತ್ತಿದ್ದರು. ಇವರೆಲ್ಲರ ಪ್ರಭಾವ ಗೌರಮ್ಮನವರ ಮೇಲಾಗಿದೆ. ಆದರೆ ಅದು ಎಲ್ಲಿಯೂ ವ್ಯಕ್ತಗೊಂಡಿರು ವುದು ಮೇಲ್ನೋಟಕ್ಕೆ ಕಂಡುಬರುವುದಿಲ್ಲ. ಆದರೆ ಒಳಹೊಕ್ಕು ನೋಡಿದಾಗ ನವೋದಯ ಸಂದರ್ಭದ ಆಶಯಗಳು ಮೇಳೈಸಿಕೊಂಡಿ ರುವುದನ್ನು ಕಾಣಬಹುದು. ಗೌರಮ್ಮನವರಿಗೆ ಹಿಂದಿ, ಇಂಗ್ಲೀಷ್, ಕನ್ನಡದಲ್ಲಿ ಕೃತಿ ರಚಿಸುತ್ತಿದ್ದ ಪದ್ಮಾವತಿ ರಸ್ತೋಗಿ ಇವರೊಂದಿಗೆ ಆಪ್ತಗೆಳೆತನವಿತ್ತು. ಆರ್. ಕಲ್ಯಾಣಮ್ಮ ಗಾಯಕಿ ಶಕುಂತಲಾಚಾರ್‌ರವರ ಒಡನಾಟವಿತ್ತು.

೧೯೩೩ ರಲ್ಲಿ ಗಾಂಧೀಜಿ ಮಡಿಕೇರಿಗೆ ಭೇಟಿ ನೀಡಿದ್ದಾಗ ಅವರನ್ನು ತಮ್ಮ ಮನೆಗೆ ಬರಬೇಕೆಂದು ಹಟಹಿಡಿದು ಗೌರಮ್ಮ ಉಪವಾಸ ಕೈಗೊಂಡರು. ಮೊದಲಿನಿಂದಲೂ ಸ್ವಾತಂತ್ರö್ಯ ಚಳುವಳಿಯ ಬಗ್ಗೆ ಕಾಳಜಿ ವಹಿಸಿದ್ದ ಗೌರಮ್ಮ ಗಾಂಧೀಜಿ ತಮ್ಮ ಮನೆಗೆ ಬರಲೇಬೇಕು ಎಂದು ಸತ್ಯಾಗ್ರಹವನ್ನೇ ಆರಂಭಿಸಿ ಮಹಾತ್ಮರ ಮನಸ್ಸನ್ನು ಗೆದ್ದರು. ಗಾಂಧೀಜಿ ಯವರ ಆಗಮನದಿಂದ ಹರ್ಷಚಿತ್ತರಾದ ಗೌರಮ್ಮ ಅವರು ತಮ್ಮಲ್ಲಿದ್ದ ಆಭರಣವನ್ನೆಲ್ಲಾ ದಾನ ನೀಡಿ ಇನ್ನು ಮುಂದೆ ಕರಿಮಣಿಸರ, ಓಲೆ ಮತ್ತು ಮೂಗಿನ ನತ್ತು ಬಿಟ್ಟರೆ ಬೇರೆ ಒಡವೆಯನ್ನು ಧರಿಸುವುದಿಲ್ಲ ವೆಂದು ಗಾಂಧೀಜಿಯವರ ಎದುರು ಪ್ರತಿಜ್ಞೆ ಮಾಡಿ ಅದರಂತೆ ನಡೆದ ದಿಟ್ಟ ಮಹಿಳೆ. ಈ ವಿಚಾರ ೧೯೩೪ರ ಮಾರ್ಚ್ ೨ ರ ಪತ್ರಿಕೆಯೊಂದರಲ್ಲಿ ಉಲ್ಲೇಖಿಸಲಾಗಿದೆ.

ಟೆನ್ನಿಸ್ ಮತ್ತು ಈಜು ಇವರ ಹವ್ಯಾಸಗಳಾಗಿದ್ದವು. ೧೯೩೯ ಏಪ್ರಿಲ್ ೧೩ ರಂದು ಸುಂಟಿಕೊಪ್ಪ ಬಳಿಯ ಹರದೂರು ನದಿಗೆ ಈಜಲು ಹೋದ ಗೌರಮ್ಮ ನೀರಿನ ಸುಳಿಗೆ ಸಿಕ್ಕಿ ಅಕಾಲಿಕ ಮರಣಕ್ಕೆ ತುತ್ತಾದರು. ಬೇಂದ್ರೆಯವರು ‘ತಂಗಿ ಗೌರಮ್ಮ’ ಎಂಬ ಪದ್ಯದಲ್ಲಿ ಬರೆಯುತ್ತಾ, ಗೌರವಸ್ಥಿತ, ಗೌರವದಿ ಗೌರಿ ಮಿಂಚಿದಳೊ ಬಾನಂಚಿಗೆ ಕಾವೇರಿ ಕುವರಿ ಎಂದು ಹೊಗಳಿದ್ದಾರೆ.

ಕೊಡಗಿನ ಗೌರಮ್ಮನವರು ೧೯೩೧ ರಿಂದ ೧೯೩೯ ರ ಅವಧಿಯಲ್ಲಿ ಬರೆದದ್ದು ೨೧ ಕಥೆಗಳು, ಸದಭಿರುಚಿಯ, ಮನದಾಳದ, ಅನಿಸಿಕೆಯ ಚಿತ್ರಣ ಕೊಡುವ ಗಟ್ಟಿ ಅನುಭವಗಳೇ ಇಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇವರು ಬರೆದ ಕಥೆಗಳ ಮೂಲದ್ರವ್ಯ ಅಂದಿನ ಕಾಲಘಟ್ಟದ ಸುಶಿಕ್ಷಿತ, ಸಂಪ್ರದಾಯಸ್ಥ ಮಹಿಳೆಯರು ಎದುರಿಸುತ್ತಿದ್ದ ಸಮಸ್ಯೆಗಳು, ವಿಧವಾ ಸಮಸ್ಯೆ, ಹದಿಹರೆಯದ ಪ್ರೇಮ, ಕೌಟುಂಬಿಕ ಪ್ರೀತಿ, ಮಾನವೀಯ ಸಂಬAಧಗಳು, ಶಿಕ್ಷಣ, ವರದಕ್ಷಿಣೆ, ಸೌಂದರ್ಯ ಪ್ರಜ್ಞೆ, ಜಾತಿ ಸಂಘರ್ಷ ಮುಂತಾದ ವಿಷಯಗಳ ನವಿರಾದ ಚಿತ್ರಣ ಮುಖ್ಯವಾಗುತ್ತದೆ.

ಗೌರಮ್ಮನವರ ಕತೆಗಳು : ೧) ವಾಣಿಯ ಸಮಸ್ಯೆ ೨) ಸನ್ಯಾಸಿ ರತ್ನ ೩) ಒಂದು ಪುಟ್ಟ ಚಿತ್ರ ೪) ಅವಳ ಭಾಗ್ಯ ೫) ಕೌಸಲ್ಯಾನಂದನ ೬) ನಾಲ್ಕು ಘಟನೆಗಳು ೭) ಪ್ರಾಯಶ್ಚಿತ್ತ ೮) ಅಪರಾಧಿ ಯಾರು ೯) ಸುಳ್ಳು ಸ್ವಪ್ನ ೧೦) ಹೋಗಿಯೇ ಬಿಟ್ಟ ೧೧) ಯಾರು? ೧೨) ಮನುವಿನ ರಾಣಿ ೧೩) ಪುನರ್ವಿವಾಹ ೧೪) ಕೆಲವು ಕಾಗದಗಳು ೧೫) ಆಹುತಿ ೧೬) ಒಂದು ಚಿತ್ರ ೧೭) ಪಾಪನ ಮದುವೆ ೧೮) ಅದೃಷ್ಟದ ಆಟ ೧೯) ನನ್ನ ಮದುವೆ ೨೦) ಮರದಬೊಂಬೆ ೨೧) ಮುನ್ನಾದಿನ.

ಗೌರಮ್ಮನವರ ಕಥೆಗಳಲ್ಲಿ ಸ್ತಿçà ಸಂವೇದನೆ: ಮನುವಿನ ರಾಣಿ: ಬಹಳಷ್ಟು ಸಂದರ್ಭಗಳಲ್ಲಿ ನಾವು ಯಾರೋ ವ್ಯಕ್ತಿ ವಸ್ತು ಅಥವಾ ಘಟನೆಯ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತೇವೆ. ಆದರೆ ಕೆಲವು ಬಾರಿ ನಮ್ಮ ತೀರ್ಮಾನಗಳು, ಅಭಿಪ್ರಾಯಗಳು ತಪ್ಪಾಗುತ್ತದೆ ಎಂಬುದು ಈ ಕಥೆಯಲ್ಲಿ ವ್ಯಕ್ತವಾಗುತ್ತದೆ. ಈ ಕಥೆಯಲ್ಲಿ ಬರುವ ರಾಜಮ್ಮ ವೇಶ್ಯೆ ಎಂಬ ಕಾರಣಕ್ಕಾಗಿ ಆಕೆಯನ್ನು ಊರ ಜನ ನಿರ್ಲಕ್ಷö್ಯದಿಂದ ನೋಡುತ್ತಿದ್ದರು. ಒಂದು ದಿನ ರಾತ್ರಿ ಪುಟ್ಟ ಹುಡುಗ ಸುಬ್ಬು ಬಂದು ವೈದ್ಯರೊಂದಿಗೆ “ರಾಜಮ್ಮನವರ ಮನೆಲ್ಲಿ ಬಾಳಾ ಕಾಯ್ಲೆ ಅಂತೆ, ಈಗೇ ರ‍್ಬೇಕಂತೆ" ಎಂದು ಕರೆದಾಗ ವೈದ್ಯರು ಹೋಗಲು ಮನಸ್ಸಾಗದೆ ಮನೆಯಲ್ಲಿ ಉಳಿದರು. ವೈದ್ಯರ ಹೆಂಡತಿ ಪಾರ್ವತಿಯು ಅವಳಿಗೇನು ಕೇಡು ಬೆಳಿಗ್ಗೆ ಹೋದರೆ, ಸಾಲದೇನೋ, ಇಷ್ಟಕ್ಕೂ ಸತ್ತು ಹೋದರೆ ಭೂಮಿ ಭಾರವೇ ಕಮ್ಮಿಯಾಯ್ತು ಎಂದಳು.

ತದನಂತರ ಸುಬ್ಬು ಮತ್ತೆ ಬಂದು ಕರೆದಾಗ ಡಾಕ್ಟರ ಮಾನವೀಯತೆ ಎಚ್ಚರಗೊಂಡು ಆಕೆಯ ಮನೆಗೆ ಬರುತ್ತಾರೆ. ಮಂಚದ ಮೇಲಿದ್ದ ರೋಗಿಯನ್ನು ಕಂಡು ಆತ ಬದುಕುವುದಿಲ್ಲವೆಂದು ಸೂಚನೆ ದೊರೆಯಿತು. ರಾಜಮ್ಮನ ಮೂಕರೋದನ ಮೌನದಲ್ಲಿ ತುಂಬಿದ ನೋವಿನ ಎಳೆಯನ್ನು ಗುರುತಿಸಲಾಗದಷ್ಟು ಸೂಕ್ಷö್ಮವಾಗಿತ್ತು. ಕೊನೆಗೆ ರಾಜಮ್ಮ ಡಾಕ್ಟರ ಹೆಸರಿಗೆ ಬರೆದ ಪತ್ರದಲ್ಲಿ ಆಕೆಯ ಮನದಾಳದ ನೋವು ತೆರೆದಿಟ್ಟಿರುತ್ತದೆ. ಮನು ಆಕೆಯನ್ನು ಪ್ರೀತಿಸಿದಾತ ಆದರೆ ರಾಜಮ್ಮನ ತಾಯಿಯ ಕುತಂತ್ರದಿAದ ಇಬ್ಬರೂ ಬೇರೆ-ಬೇರೆಯಾಗು ತ್ತಾರೆ. ಮನು ಹುಚ್ಚನಾಗುತ್ತಾನೆ. ಅವನ ಆರೋಗ್ಯ ಕೆಡುತ್ತದೆ ಅವನ ಹತ್ತಿರ ಕಾಸು ಇಲ್ಲದೆ ನರಳಾಡುತ್ತಾನೆ. ಇದನ್ನೆಲ್ಲಾ ನೋಡಿದ ರಾಜಮ್ಮ ಮನುವಿನ ಯೋಗಕ್ಷೇಮ ನೋಡಿಕೊಳ್ಳುತ್ತಾರೆ. ಬೇರೆಯವರ ದೃಷ್ಟಿಯಲ್ಲಿ ಕೆಟ್ಟ ಪಟ್ಟ ಇದ್ದರೂ ಅವರಿಬ್ಬರ ಮಧ್ಯೆ ಉತ್ತಮ ಬಾಂಧವ್ಯವಿತ್ತು. ಮನು ಸತ್ತ ನಂತರ ರಾಜಮ್ಮ ಊರುಬಿಡುತ್ತಾಳೆ.

ವಾಣಿಯ ಸಮಸ್ಯೆ: ಚಿಕ್ಕ ವಯಸ್ಸಿನಲ್ಲಿ ವಿಧೆವೆಯಾಗಿ ನಗರದ ಮನೆಯಲ್ಲಿ ವಾಸವಿರುವವಳು ಇಂದು ಗಂಡ ಮಾಡಿಟ್ಟ ಮನೆ ಮತ್ತು ಕೂಡಿಟ್ಟ ಹಣ ಅವಳಿಗೆ ಜೀವನಾಧಾರವಾಗಿತ್ತು. ಹೀಗಿದ್ದಾಗ ಪಕ್ಕದ ಮನೆಗೆ ಒಂದು ಸಂಸಾರ ಬಂದಾಗ ಇವಳಿಗೆ ಇರಿಸು-ಮುರುಸು, ನಂತರದಲ್ಲಿ ರತ್ನ ಮತ್ತು ವಾಣಿ ದಂಪತಿಗಳು ಇಂದುವಿಗೆ ಆಪ್ತರಾದರು. ಇಂದು ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು. ಅದಕ್ಕೆ ತದ್ವಿರುದ್ಧವಾಗಿ ಆಕೆ ಬಹಳ ಸೋಮಾರಿಯಾಗಿದ್ದು, ಮನೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದವು. ಇಂದುವಿಗೆ ವಾಣಿಯ ಗಂಡ ರತ್ನನ ಒಳ್ಳೆಯತನದ ಬಗ್ಗೆ ಮೆಚ್ಚುಗೆ ಇತ್ತು. ಪತ್ನಿ ಇಷ್ಟೊಂದು ಸೋಮಾರಿಯಾದರೂ ಎಲ್ಲ ಸಹಿಸಿಕೊಂಡು ಸಹಬಾಳ್ವೆ ಮಾಡುತ್ತಾರಲ್ಲ ಇದನ್ನೆಲ್ಲ ಇಂದು ದೂರದಿಂದ ಗಮನಿಸುತ್ತಿದ್ದಳು. ಹಾಗೆಯೇ ಡಾ. ರತ್ನನಿಗೆ ತನ್ನ ಹೆಂಡತಿ ಇಂದುವಿನAತೆ ರುಚಿರುಚಿಯಾದ ಅಡುಗೆ ಮಾಡುತ್ತಾ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಯೋಚಿಸುತ್ತಿದ್ದ. ಈ ಭಾವನೆ ಇಬ್ಬರಲ್ಲೂ ಸುಪ್ತವಾಗಿ ಬೆಳೆಯುತ್ತದೆ, ಕೊನೆಗೆ ವಾಣಿ ತವರಿಗೆ ಹೋದಾಗ ರತ್ನನ ಕೈಬರಹವುಳ್ಳ ಪತ್ರ ಇಂದುವಿಗೆ ಬರುತ್ತದೆ. ಅದರಲ್ಲಿ ಏನಿರಬಹುದೆಂದು ಊಹಿಸಿದ ಇಂದು ಮನೆಬಿಟ್ಟು ಹೊರಟು ಹೋಗುತ್ತಾಳೆ. ಸ್ತಿçà ಸಂವೇದನೆಯ ಅನೇಕ ಹೊಳಹು ಈ ಕಥೆಯಲ್ಲಿ ಕಂಡು ಬಂದರೂ ಅದನ್ನು ವ್ಯಕ್ತಪಡಿಸುವಲ್ಲಿ ಇಂದುವಿಗೆ ಸಾಂಪ್ರದಾಯಿಕ ಚೌಕಟ್ಟು ತಡೆಯಾಗಿದೆ ಅಥವಾ ಅವಳಲ್ಲಿ ಪಾಪ ಪ್ರಜ್ಞೆಯ ಭೀತಿ ಕಾಡಿರಬಹುದು, ವಯೋಸಹಜವಾದ ಆಸೆ ಆಕಾಂಕ್ಷೆಗಳಿದ್ದರೂ, ಇದು ಅವೆಲ್ಲವನ್ನು ಒತ್ತಾಯಪೂರ್ವಕವಾಗಿ ಹಿಡಿದಿಟ್ಟು ಸಮಾಜಕ್ಕೆ ಹೆದರಿ ಬದುಕುವ ರೀತಿ ಇಲ್ಲಿ ಮುಖ್ಯವಾಗುತ್ತದೆ.

ಅವಳ ಭಾಗ್ಯ: ವಿಡಂಬನೆಯ ರೀತಿಯಾದರೂ ಜನರಿಗೆ ತಿಳುವಳಿಕೆ ನೀಡುವ ಕತೆ ಹೊರ ನೋಟಕ್ಕೆ ಕಾಣುವ ಸೌಂದರ್ಯ ಮಾತ್ರ ಸೌಂದರ್ಯವಲ್ಲ ಬಾಹ್ಯ ಸೌಂದರ್ಯಕ್ಕಿAತ ಆಂತರಿಕ ಸೌಂದರ್ಯ ಮುಖ್ಯ ಎಂಬುದು ಇಲ್ಲಿ ಪಾರುವಿನ ಪಾತ್ರ ಚಿತ್ರಣದ ಮೂಲಕ ಹೊರಹಾಕಲಾಗಿದೆ. ಪಾರು ನೋಡಲು ಕುರೂಪಿ. ಆದರೆ ದನಿ ಎತ್ತಿ ಹಾಡಲು ಪ್ರಾರಂಭಿಸಿದರೆ ಆಕೆಯನ್ನು ಮೀರಿಸುವವರು ಯಾರು ಇಲ್ಲ. ಸುಂದರವಾದ ರೂಪದ ಒಳಗೂ ಅತ್ಯಂತ ಸುಂದರವಾದ ಹೃದಯಗಳಿರುವುವು ಎಂಬ ಸಾಲು ಇಲ್ಲಿ ಮುಖ್ಯ.

ಹೋಗಿಯೇ ಬಿಟ್ಟಿದ್ದ: ದಿಕ್ಕಿಲ್ಲದ ಬಾಲಕ ಜೀತದಾಳಿನಂತೆ ದುಡಿದು ಯೌವನಾವಸ್ಥೆಗೆ ಬಂದಾಗ ಮುಸಲ್ಮಾನರ ಹುಡುಗಿ ಲತೀಫಳನ್ನು ಪ್ರೀತಿಸುತ್ತಾನೆ. ಪ್ರೇಮಕ್ಕೆ ಜಾತಿ ಕುಲಗಳನ್ನು ಕಟ್ಟಿಕೊಂಡು ಮಾಡ ಬೇಕಾದುದೇನು ? ಅದು ಕುರುಡು ಅದರಲ್ಲೂ ನಿಜವಾದ ಪ್ರೇಮ ವಾದರೆ ಹಾದಿ ಎಂದೆAದಿಗೂ ನಿಷ್ಕಂಟಕವಲ್ಲ" ಎಂದು ಮುಂದುವರಿದ ಪ್ರೀತಿ ಆಕೆಯ ಚಿಕ್ಕಪ್ಪನು ಬೇರೆ ಹುಡುಗನೊಂದಿಗೆ ಲತೀಫಳ ಮದುವೆ ಮಾಡ ಹೊರಟಾಗ ಲತೀಫಳು ಮನಸ್ಸಿಲ್ಲದೇ ಬೇರೆಯವರನ್ನ ಮದುವೆ ಯಾಗುವುದಕ್ಕಿಂತ ಸಾಯುವುದೇ ಒಳಿತೆಂದು ಆಯ್ದುಕೊಳ್ಳು ತ್ತಾಳೆ. ಕೊನೆಗೆ ಪ್ರೀತಿಸಿದವನಿಂದಲೇ ಸಾವನ್ನು ಬಯಸಿ ಶವವಾಗುತ್ತಾಳೆ ಕೊನೆಗೆ ಆತನು ಬಾವಿಗೆ ಹಾರಲು ಹೋದರೂ ಸಾಯದೆ ಹುಚ್ಚು ಎಂಬ ಪಟ್ಟ ಪಡೆದು ಹುಚ್ಚಾಸ್ಪತ್ರೆಯಲ್ಲಿ ೩೦ ವರ್ಷ ಕಳೆದು ಬಿಡುಗಡೆ ಯಾಗಿ ಈ ರೈಲಿನಲ್ಲಿ ಪ್ರಯಾಣ ಬೆಳೆಸುವಾಗ ತನ್ನ ಕತೆಯನ್ನು ಹೇಳಿ ರೈಲಿನಿಂದ ನೆಗೆಯುತ್ತಾನೆ. ಇಲ್ಲಿಯೂ ಪ್ರೀತಿಗಾಗಿ ನಡೆದ ಕಸರತ್ತು ಹಾಗೂ ಅಂತರ್ಜಾತಿ ವಿವಾಹಗಳಿಗಿದ್ದ ಕಟ್ಟುಪಾಡುಗಳು ಒತ್ತಾಯದ ಮದುವೆ ಪ್ರಯತ್ನ ತರುವ ದುರಂತ ಎಲ್ಲವೂ ಹೆಣ್ಣಿನ ಮನಸ್ಸಿನ ತಲ್ಲಣಗಳಿಗೆ ಕಾರಣವಾಗುತ್ತದೆಂಬುದನ್ನು ನಿರೂಪಿಸಲಾಗಿದೆ.

-ಡಾ. ಕೋರನ ಸರಸ್ವತಿ ಪ್ರಕಾಶ್

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಮಡಿಕೇರಿ.