ಕುಶಾಲನಗರ, ಡಿ. ೧೬: ಕುಶಾಲನಗರ ತಾಲೂಕು ಅಕ್ರಮ ಸಕ್ರಮ ಸಮಿತಿ ಸಭೆ ಕುಶಾಲನಗರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.

ಸಮಿತಿಯ ಅಧ್ಯಕ್ಷ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ೧೫ ಅರ್ಜಿಗಳ ಪೈಕಿ ೧೩ ಅರ್ಜಿಗಳ ಮಂಜೂರಾತಿಗೆ ಸಭೆ ಒಪ್ಪಿಗೆ ನೀಡಿತು. ಉಳಿದಂತೆ ೨ ಅರ್ಜಿಗಳಿಗೆ ತಕರಾರು ಇದ್ದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸುವಂತೆ ಸಭೆ ನಿರ್ಣಯ ಕೈಗೊಂಡಿದೆ.

ಸಭೆಯಲ್ಲಿ ತಾಲೂಕು ತಹಶೀಲ್ದಾರ್ ಪ್ರಕಾಶ್, ಸದಸ್ಯರಾದ ಎಂ.ಎನ್ ಕುಮಾರಪ್ಪ, ಕೆಂಚೇಶ್ವರ ಇದ್ದರು.