ಭಾಗಮಂಡಲ, ಡಿ. ೧೬: ಐತಿಹಾಸಿಕ ಹರಕೆ ಹಬ್ಬ ಎಂದು ಖ್ಯಾತಿ ಹೊಂದಿರುವ ಚೇರಂಬಾಣೆಯ ಕೊಳಗದಾಳು ಗ್ರಾಮದ ಪಾಕ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ವಾರ್ಷಿಕ ಉತ್ಸವ ವಿಜೃಂಭಣೆಯಿAದ ನಡೆಯಿತು.

ಗಂಗಾ ಪೂಜೆ ನಡೆದ ಬಳಿಕ ಮುಕ್ಕಾಟಿ ಐನ್‌ಮನೆಗೆ ತೆರಳಿ ದುರ್ಗಾಪರಮೇಶ್ವರಿಗೆ ತೊಡಿಸುವ ಅಲಂಕಾರದ ವಸ್ತುಗಳನ್ನು ತಂದು ದೇವರ ಅಲಂಕಾರ ಪೂಜೆ ನಡೆಸಲಾಯಿತು. ಮುಕ್ಕಾಟಿ ಐನ್‌ಮನೆಯಿಂದ ಉತ್ಸವ ಭಂಡಾರ, ಹರಕೆ ಸಾಮಗ್ರಿ ಹಾಗೂ ಭಂಡಾರವನ್ನು ದೇವಾಲಯಕ್ಕೆ ತಂದು ಮೂರು ಬಾರಿ ಪ್ರದಕ್ಷಿಣೆ ಹಾಕಿ ಭಂಡಾರ ಡಬ್ಬಿ ಇರಿಸಲಾಯಿತು.

ನಂಬಿಕೆಯ ಪ್ರತೀಕವಾಗಿರುವ ಪಾಕ ನದಿಯ ಮೀನುಗಳಿಗೆ ಭಕ್ತರು ಅಕ್ಕಿಯನ್ನು ಹಾಕಿ ದೇವಾಲಯಕ್ಕೆ ಬಂದು ಹರಕೆಯನ್ನು ಸಲ್ಲಿಸಿದರು. ಬಳಿಕ ಮಹಾಪೂಜೆ ನಡೆಯಿತು ಊರಿನವರು ತಂದ ಅಕ್ಕಿಯನ್ನು ಪಾಯಸ ಮಾಡಿ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಯಿತು. ಈ ವರ್ಷ ಭಕ್ತರ ಸಂಖ್ಯೆ ಹೆಚ್ಚಾಗಿ ಕಂಡುಬAತು. ತಕ್ಕ ಮುಖ್ಯಸ್ಥರಾಗಿ ಮುಕ್ಕಾಟಿ ಕುಟುಂಬಸ್ಥರು, ಮುದ್ರಣಿಯಂಡ ಕುಟುಂಬಸ್ಥರು ಕಾರ್ಯನಿರ್ವಹಿಸಿದರು. ತಾ. ೧೭ ರಂದು (ಇಂದು) ಕಳಸ ಪೂಜೆ ಊರಿನವರು ಹರಿಕೆ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ.