ಕುಶಾಲನಗರ, ಡಿ. ೧೬: ಕುಶಾಲನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಕೊಠಡಿಗೆ ಕ್ಷೇತ್ರ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಚಾಲನೆ ನೀಡಿದÀರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಐಸಿಟಿ ಯೋಜನೆಯಡಿ ಸುಮಾರು ೬ ಲಕ್ಷ ವೆಚ್ಚದಲ್ಲಿ ಅಳವಡಿಸಿದ ಯೋಜನೆ ಯಲ್ಲಿ ಒಟ್ಟು ೧೦ ಕಂಪ್ಯೂಟರ್‌ಗಳು ಮತ್ತು ೧ ಪ್ರೊಜೆಕ್ಟರ್ ಕಲ್ಪಿಸಲಾಗಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ರಂಜನ್ ತಿಳಿಸಿದರು.

ಕ್ಷೇತ್ರದಲ್ಲಿ ವಿವಿಧ ಶಾಲೆಗಳಲ್ಲಿ ೪ ಕೋಟಿ ರೂ. ಗಳ ಕಾಮಗಾರಿ ಮೂಲಕ ಶಾಲೆಯ ಅಭಿವೃದ್ಧಿ ನಡೆಸಲಾಗುತ್ತಿದೆ ಎಂದ ರಂಜನ್, ಎಲ್ಲಾ ಶಾಲೆಗಳಿಗೂ ಮೂಲಭೂತ ವ್ಯವಸ್ಥೆ ಕಲ್ಪಿಸುವ ಯೋಜನೆ ನಡೆದಿದೆ ಎಂದರು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಉಪಾಧ್ಯಕ್ಷೆ ಸುರಯ್ಯಭಾನು, ಸದಸ್ಯರಾದ ಅಮೃತ್‌ರಾಜ್, ಇಲಾಖೆಯ ಉಪನಿರ್ದೇಶಕರಾದ ಸಿ. ರಂಗಧಾಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ ಸುರೇಶ್, ಮುಖ್ಯಶಿಕ್ಷಕಿಯರಾದ ಕೆ.ಆರ್ ರಾಣಿ, ಬಿ,ಎನ್ ಪುಷ್ಪ, ಎಸ್‌ಡಿಎಂಸಿ ಅಧ್ಯಕ್ಷ ಅವಿನಾಶ್, ಶಿಕ್ಷಕರ ಸಂಘದ ಪ್ರಮುಖರಾದ ಹೆಚ್.ಎನ್ ಮಂಜುನಾಥ್, ಟಿ.ಕೆ ಬಸವರಾಜು, ಹೆಚ್.ಕೆ ಕುಮಾರ್ ಮತ್ತಿತರರು ಇದ್ದರು.