ಶ್ರೀಮಂಗಲ, ಡಿ. ೧೬: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಪೊರಾಡ್ ಮಂದ್‌ನಲ್ಲಿ ತಕ್ಕ ಮುಖ್ಯಸ್ಥರ ನೇತೃತ್ವದಲ್ಲಿ ಸಾಂಪ್ರದಾಯಿಕ ಪುತ್ತರಿ ಕೋಲ್ ಮಂದ್ ಆಚರಣೆ ನಡೆಯಿತು.

ಅಣ್ಣೀರ ಮತ್ತು ಮಲ್ಲೇಂಗಡ ಐನ್‌ಮನೆಯಿಂದ ಒಡ್ಡೋಲಗದೊಂದಿಗೆ ತಕ್ಕರನ್ನು ಮಂದ್‌ಗೆ ಕರೆತರಲಾಯಿತು.

ಮಂದ್‌ನಲ್ಲಿ ಹಿರಿಯರು, ಕಿರಿಯರು ಪುತ್ತರಿ ಕೋಲಾಟ್ ಮತ್ತು ವಾಲಗತಾಟ್‌ನಲ್ಲಿ ಭಾಗವಹಿಸಿ ಸಂಭ್ರಮಿಸಿದರು.