ಕುಶಾಲನಗರ, ಡಿ. ೧೭: ಮನುಷ್ಯ ತನ್ನೊಳಗೆ ದ್ವೇಷ, ಅಸೂಯೆ, ಹೊಟ್ಟೆಕಿಚ್ಚುಗಳನ್ನು ತುಂಬಿಸಿಕೊಳ್ಳದೇ ದಯೆ, ಕರುಣೆ, ಜ್ಞಾನ, ಅಂತಃ ಕರಗಳನ್ನು ತುಂಬಿಸಿಕೊಳ್ಳಬೇಕೆAದು ಕರ್ನಾಟಕ ರಾಜ್ಯ ಗಡಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಹೇಳಿದರು.
ಕುಶಾಲಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸ್ಥಳೀಯ ದೇವರಾಜು ಅರಸು ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಆಯೋಜಿಸಿದ್ದ, ಸಾಹಿತಿ ಆರ್. ಸಮತಾ ರಚಿತ ‘ಪರಿಮಳಗಳ ಮಾಯೆ’ ಪ್ರಬಂಧ ಸಂಕಲನಗಳ ಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮನುಷ್ಯನಿಗೆ ಹೊಟ್ಟೆಕಿಚ್ಚು ಅನಾರೋಗ್ಯ ತಂದೊಡ್ಡಿದರೆ, ಅಜ್ಞಾನ ಆತನ ಪಥನಕ್ಕೆ ಕಾರಣವಾಗುತ್ತದೆ. ಹಾಗಾಗಿ ಜ್ಞಾನಾಭಿವೃದ್ಧಿಗೆ ಹೆಚ್ಚಾಗಿ ಪುಸ್ತಕಗಳು ಹಾಗೂ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಸಾಹಿತಿ ಸುನಿತಾ ಲೋಕೇಶ್ ಮಾತ ನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ನಿರ್ದೇಶಕರಾದ ಮೆ.ನಾ. ವೆಂಕಟ ನಾಯಕ್, ರಮ್ಯಾ ಮೂರ್ನಾಡು, ಟಿ.ಜಿ. ಪ್ರೇಮ ಕುಮಾರ್, ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ಮೂರ್ತಿ, ಕಾರ್ಯದರ್ಶಿ ಎಸ್. ನಾಗರಾಜು, ಕೋಶಾಧಿಕಾರಿ ಕೆ.ವಿ. ಉಮೇಶ್, ನಿರ್ದೇಶಕ ಕಾಳಪ್ಪ, ವಸತಿ ನಿಲಯದ ಮೇಲ್ವಿಚಾರಕಿ ಶಕುಂತಲಾ ಇದ್ದರು. ಇಂಜಿನಿ ಯರಿಂಗ್ ಕಾಲೇಜು ವಿದ್ಯಾರ್ಥಿನಿ ಸ್ನೇಹಾ ನಿರೂಪಿಸಿದರು. ಕಾವ್ಯ ಸ್ವಾಗತಿಸಿ, ರಮ್ಯಾ ವಂದಿಸಿದರು.