ಮಡಿಕೇರಿ, ಡಿ. ೧೭: ಮೂರ್ನಾಡು ಗೌಡ-ಸಮಾಜದಲ್ಲಿ ಅರೆಭಾಷೆ ದಿನವನ್ನು ಆಚರಿಸಲಾಯಿತು. ಅಂಚೆಮನೆ ದಮಯಂತಿ ಪ್ರಾರ್ಥಿಸಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಹರೀಶ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕುಂಜಿಲನ ನಂಜುAಡ ಹಾಗೂ ಬೈಲೋಳಿ ಮೇನಕಾ ನಂದ ಉಪಸ್ಥಿತರಿದ್ದರು. ಸ್ವಾಗತವನ್ನು ದಂಬೆಕೋಡಿ ಸುಬ್ರಮಣಿ ಅವರು ನೇರವೇರಿಸಿದರು. ಅಧ್ಯಕ್ಷರಾದ ಪಾಣತ್ತಲೆ ಹರೀಶ್ ಮಾತನಾಡಿ, ನಮ್ಮ ಅರೆಭಾಷೆ ಸಂಸ್ಕೃತಿ ಸಂಪ್ರದಾಯ ಉಳಿಸಿ ಬೆಳೆಸಿಕೊಂಡು ಹೋಗಬೇಕಾದರೆ ಅರೆಭಾಷೆ ದಿನಾಚರಣೆಯನ್ನು ಆಚರಿಸುವುದರೊಂದಿಗೆ ಜನಾಂಗದಲ್ಲಿ ಭಾಷೆ, ಸಂಪ್ರದಾಯ ಪದ್ಧತಿ ಆಚರಣೆಗಳನ್ನು ಉಳಿಸಿಕೊಂಡು ಹೋಗುವ ಮನೋಭಾವ ಮೂಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಗೌಡ ಸಮಾಜದ ಕಾರ್ಯಕಾರಿ ಮಂಡಳಿಯವರು ಉಪಸ್ಥಿತರಿದ್ದರು. ಮೇರ್ಕಜೆ ಲೋಹಿತ್ ಸೋಮಯ್ಯ ವಂದಿಸಿದರು.