ಚೆಟ್ಟಳ್ಳಿ, ಡಿ. ೧೬: ಸಿದ್ದಾಪುರದಿಂದ ಚೆಟ್ಟಳ್ಳಿ ಹಾಗೂ ಕುಶಾಲನಗರದ ಕಡೆಗೆ ವಿಭಜಿಸುವ ಒಂಟಿಯAಗಡಿಯ ಕಿರುಸೇತುವೆಯಲ್ಲಿ ರಸ್ತೆ ಸಂಚಾರವನ್ನು ಸೂಚಿಸುವ ಫಲಕದಿಂದ ಸಮಸ್ಯೆ ಉಂಟಾಗಿದೆ.

ಕಳೆದ ಏಳು ತಿಂಗಳ ಹಿಂದೆ ಒಂಟಿಯAಗಡಿ ಎಂಬಲ್ಲಿ ನೂತನವಾಗಿ ನಿರ್ಮಿಸಿದ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಪಕ್ಕದ ಹಳೆ ಸೇತುವೆಯ ಎರಡುಬದಿಗಳಲ್ಲಿ ರಸ್ತೆ ಸಂಚಾರವನ್ನು ಸೂಚಿಸುವ ಸೂಚನಾ ಫಲಕವನ್ನು ಅಳವಡಿಸಲಾಗಿದೆ. ಆದರೆ, ಸೂಚನಾ ಫಲಕಗಳು ಅದಲು ಬದಲುಗೊಂಡಿವೆ.

ಬದಲಾದ ಸೂಚನಾ ಫಲಕದಿಂದಾಗಿ ವಾಹನ ಸವಾರರು ರಸ್ತೆಮಧ್ಯೆ ನಿಂತು ಪರದಾಡುವಂತಾಗಿದೆ. ಎದುರುಬದಿಯ ವಾಹನ ಸಂಚರಿಸಿ ಅಪಘಾತ ಸಂಭವಿಸುವAತಾಗಿದೆ. -ಕರುಣ್ ಕಾಳಯ್ಯ