ವೀರಾಜಪೇಟೆ, ಡಿ. ೧೫: ಅಪಘಾತ ವಾಗುವುದು ಆಕಸ್ಮಿಕವಾದರೂ ಅದು ಕೂಡ ಅಪರಾಧದ ಒಂದು ಭಾಗವೇ ಆಗಿದೆ. ಮುಂಜಾಗ್ರತೆಯಿAದ ಅಪರಾಧ ತಡೆಯುವ ಪ್ರಯತ್ನ ಮಾಡಬಹುದು. ವಿದ್ಯಾರ್ಥಿಗಳು ಮುಂದೆ ಹೆಜ್ಜೆಯಿಡುವ ಮೊದಲು ಸರಿಯಾಗಿ ಯೋಚಿಸಿ ನಿರ್ಧರಿಸಿ ಎಂದು ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ ಸಲಹೆಯಿತ್ತರು.
ಕೊಡಗು ಜಿಲ್ಲಾ ಪೊಲೀಸ್, ವೀರಾಜಪೇಟೆ ನಗರ ಪೊಲೀಸ್ ಠಾಣೆ, ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ವೀರಾಜಪೇಟೆ ತಾಲೂಕು ಸಂಯುಕ್ತ ಆಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ಸರಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಅಪರಾಧ ತಡೆ ಮುಂಜಾಗ್ರತಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ ಅವರು, ಡಿಸೆಂಬರ್ ತಿಂಗಳಲ್ಲಿ ಈ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಮಾಡುತ್ತಾ ಬರುತ್ತಿದ್ದೇವೆ. ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸುವ ನಿಟ್ಟಿನಲ್ಲಿ, ಮಾದಕ ದ್ರವ್ಯ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಮೋಟಾರ್ ವಾಹನ ಚಾಲನೆ ಮಾಡುವಾಗ ಅನುಸರಿಸುವ ಕ್ರಮಗಳ ಬಗ್ಗೆ, ವಾಹನ ಕಾಯ್ದೆ ಬಗ್ಗೆ ಅರಿವು ಮತ್ತು ಇಆರ್ಎಸ್ಎಸ್ ೧೧೨ ವೆಹಿಕಲ್ ಬಗ್ಗೆ ಅದರ ಅನುಕೂಲಗಳ ಬಗ್ಗೆ ಕಾನೂನು ಅರಿವನ್ನು ಮೂಡಿಸಿದರು.
ಸೈಬರ್ ಕ್ರೆöÊಂ ಬಗ್ಗೆ ಮಾಹಿತಿ ನೀಡಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಸಂಬAಧಿತ ಅಪರಾಧಗಳ ಬಗ್ಗೆ, ಆಸೆ ಆಮಿಷ ಒಡ್ಡುವ ಮೂಲಕ ಆನ್ಲೈನ್ ಮೂಲಕ ವಂಚಿಸುವ ಅಪರಾಧಗಳ ಬಗ್ಗೆ, ಮೋಸದ ಜಾ¯ಕ್ಕೆ ಬಲಿಯಾಗದಂತೆ ಸೂಚಿಸಿ ಅಂತಹ ಪ್ರಕರಣಗಳು ಕಂಡುಬAದಲ್ಲಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ತಿಳಿಸಿದರು. ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಮಾತನಾಡಿ, ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಹಾಕುವಂತೆ, ವಾಹನ ಚಲಾಯಿಸುವಾಗ ಎಚ್ಚರ ವಹಿಸಲು ಸೂಚಿಸಿದರಲ್ಲದೆ ಯುವಜನತೆ ಅಪರಾಧಕ್ಕೆ ಗುರಿಯಾದರೆ ದೇಶಕ್ಕೆ ಮಾರಕ, ಯುವಜನತೆ ಅಪರಾಧ ನಡೆಯುವುದು ಕಂಡು ಬಂದರೆ ಪೊಲೀಸರಿಗೆ ಸಹಕರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರಾದ ತಾತಂಡ ಜ್ಯೋತಿ ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಮೊದಲು ತಮ್ಮನ್ನು ತಾವು ರಕ್ಷಣೆ ಮಾಡಿಕೊ ಳ್ಳುವುದನ್ನು ಕಲಿಯಬೇಕು. ನಿಮ್ಮತನ ಕಾಪಾಡಿಕೊಂಡು ಒಳ್ಳೆಯವರ ಸಹವಾಸ ಮಾಡಬೇಕು. ಒಂದು ಕೆಲಸ ಮಾಡುವಾಗ ಎರಡು ಬಾರಿ ಯೋಚಿಸಿ ಗಟ್ಟಿ ನಿರ್ಧಾರ ಮಾಡಿಕೊಳ್ಳಬೇಕು ಎಂದರು.
ವೀರಾಜಪೇಟೆ ನಗರ ಠಾಣಾಧಿಕಾರಿ ಶ್ರೀಧರ್ ವೇದಿಕೆಯಲ್ಲಿದ್ದರು. ಈ ಸಂದರ್ಭ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪುತ್ತಂ ಪ್ರದೀಪ್, ಕಾರ್ಯದರ್ಶಿ ರಜಿತ ಕಾರ್ಯಪ್ಪ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗಳು, ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಅಧಿಕ ಸಂಖ್ಯೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿದ್ಯಾರ್ಥಿನಿ ಸಾನಿಧ್ಯ ಪ್ರಾರ್ಥಿಸಿ, ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮುಸ್ತಾಫ ನಿರೂಪಿಸಿದರೆ, ನಿರ್ದೇಶಕ ಡಿ. ಮಂಜುನಾಥ್ ಸ್ವಾಗತಿಸಿ, ಕಿಶೋರ್ ಕುಮಾರ್ ವಂದಿಸಿದರು.