ವೀರಾಜಪೇಟೆ, ಡಿ. ೧೫: ಆರಾಯಿರ ನಾಡ್ನ ವಾರ್ಷಿಕ ಪುತ್ತರಿ ಕೋಲಾಟವು ವಿವಿಧ ಜನಪದ ಕಲೆಗಳ ಪ್ರದರ್ಶನದೊಂದಿಗೆ ಸಂಪನ್ನಗೊAಡಿತ್ತು.
ವೀರರಾಜೇAದ್ರಪೇಟೆಯ ಆರಾಯಿರ ನಾಡ್ ಬೈರನಾಡ್, ಎಡೆನಾಡ್, ಬೇಟೋಳಿನಾಡ್ ಮತ್ತು ಪೆರುವನಾಡ್ ಎಂಬ ನಾಲ್ಕು ನಾಡುಗಳಾಗಿ ವಿಂಗಡಣೆಗೊAಡು ೧೭ ಗ್ರಾಮಗಳ ಒಕ್ಕೂಟದ ನಾಡಿನ ಗ್ರಾಮಸ್ಥರು ಭಾಗವಹಿಸಿದ್ದ ಪುತ್ತರಿ ಕೋಲಾಟವು ವೀರಾಜಪೇಟೆ ಕೊಡವ ಸಮಾಜದ ಬಳಿಯ ಪೂಮಾಲೆ ಮಂದ್ನಲ್ಲಿ ಜರುಗಿತು.
ಕೊಡಗಿನ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಆಲದ ಮರಕ್ಕೆ ಹಿರಿಯರಿಂದ ಪ್ರಥಮ ಪೂಜೆ ಸಲ್ಲಿಸಲಾಯಿತು. ಸಾಂಪ್ರದಾಯಿಕ ಕೋಲಾಟ ಪ್ರದರ್ಶನದೊಂದಿಗೆ, ಪೂಮಾಲೆ ಮಂದ್ನಲ್ಲಿ ಪರಿಯಕಳಿ, ವಾಲಗತ್ತಾಟ್ ನಡೆಯಿತು. ಈ ಬಾರಿ ಪರಿಯ ಕಳಿ ಸ್ಪರ್ಧೆಯಲ್ಲಿ ಆರ್ಜಿ ಗ್ರಾಮದ ಕೀತಿಯಂಡ ಚಿಂತಮ್ ಪೊನ್ನಣ್ಣ, ಮತ್ತು ಕ್ರಿಶ್ ಕಾರ್ಯಪ್ಪ ಎಂಬ ಬಾಲಕರು ನೀಡಿದ ಪ್ರದರ್ಶನವು ಜನಮನ್ನಣೆ ಪಡೆಯಿತು. ವಿವಿಧ ಕೋಲಾಟ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಸಮಿತಿಯಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಆಗಮಿಸಿದ ಮಹಿಳೆಯರಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು.
ಪೂಮಾಲೆ ಮಂದ್ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರಾದ ವಾಟೇರಿರ ಶಂಕರಿ ಪೂವಯ್ಯ, ಅಜ್ಜಿನಿಕಂಡ ಸುಧೀರ್, ಕಾರ್ಯದರ್ಶಿ ಮಾಚೆಟ್ಟೀರ ತಮ್ಮಯ್ಯ, ಮರಣ ಫಂಡ್ ಅಧ್ಯಕ್ಷರಾದ ಚೇಂದAಡ ಪೊನ್ನಪ್ಪ ಮತ್ತು ಸಮಿತಿಯ ಸದಸ್ಯರು ಸೇರಿದಂತೆ ಬೈರನಾಡ್ ಭಾಗದ ಹಾಲುಗುಂದ, ಒಂಟಿಯAಗಡಿ, ದೇವಣಗೇರಿ, ತಲಗಟ್ಟಕೇರಿ ಮತ್ತು ಹಚ್ಚಿನಾಡು ಗ್ರಾಮಗಳು, ಎಡೆನಾಡು ಭಾಗದ ಕುಕ್ಲೂರು, ಚೆಂಬೆಬೆಳ್ಳೂರು, ಐಮಂಗಲ, ಮಗ್ಗುಲ ಮತ್ತು ವೈಪಡ ಗ್ರಾಮಗಳು ಬೇಟೊಳಿನಾಡ್ ಭಾಗದ ಆರ್ಜಿ, ಬೇಟೋಳಿ ಗ್ರಾಮಗಳು ಪೆರುವನಾಡ್ ಭಾಗದ ಬಿಟ್ಟಂಗಾಲ-ನಾAಗಾಲ ಮತ್ತು ಬಾಳುಗೋಡು ಗ್ರಾಮಗಳ ಗ್ರಾಮಸ್ಥರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.