ಮಡಿಕೇರಿ, ಡಿ. ೧೫: ಪ್ರತೀ ತಿಂಗಳು ನಡೆಯುವ ‘ಗ್ರಾಮ ವಾಸ್ತವ್ಯ’ ಕಾರ್ಯಕ್ರಮ ಸಂದರ್ಭದಲ್ಲಿ ಸಾರ್ವಜನಿಕರಿಂದ ಬಸ್ ಸಂಪರ್ಕ ಕಲ್ಪಿಸುವಂತೆ ಸಾಕಷ್ಟು ಮನವಿಗಳು ಸಲ್ಲಿಕೆಯಾಗುತ್ತಿದ್ದು, ಈ ಹಿನ್ನೆಲೆ ಮೋಟಾರು ವಾಹನ ಕಾಯ್ದೆ ೭೨ ಅನ್ವಯ ೨೪ ಕಿ.ಮೀ.ವರೆಗೆ ಕೆಎಸ್‌ಆರ್‌ಟಿಸಿ ಅಥವಾ ಖಾಸಗಿ ಸಂಸ್ಥೆಯವರು ಬಸ್ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಸಲಹೆ ನೀಡಿದರು.

ನಗರದ ಹೊರ ವಲಯದಲ್ಲಿ ರುವ ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೂತನವಾಗಿ ಆರಂಭವಾಗಿರುವ ನ್ಯಾಯಾಲಯ ಸಂಕೀರ್ಣ, ಕಂಬಿಬಾಣೆ, ಗೋಣಿಮರೂರು ಸೇರಿದಂತೆ ಹಲವು ಪ್ರದೇಶಗಳಿಗೆ ಬಸ್ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಿದ್ದು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಾರಿಗೆ ಸಂಪರ್ಕ ದಲ್ಲಿ ವ್ಯತ್ಯಯ ಉಂಟಾಗದAತೆ ಗಮನಹರಿಸಬೇಕು ಎಂದರು.

ಸಭೆಯ ಆರಂಭದಲ್ಲಿ ಮಾತನಾಡಿದ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಅವರು

(ಮೊದಲ ಪುಟದಿಂದ) ಕೆಎಸ್‌ಆರ್‌ಟಿಸಿ ವತಿಯಿಂದ ೫೫ ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸುತ್ತಿವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಸ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗ ದಂತೆ ಗಮನಹರಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಸಮಯ ಪಾಲನೆ ಮಾಡುವಂತಾಗಬೇಕು ಎಂದು ಕೋರಿದರು.

ಕೆಲವು ಕಡೆಗಳಲ್ಲಿ ಪ್ರತಿ ನಿತ್ಯ ಆಟೋಗಳ ಮೂಲಕ ಪ್ರಯಾಣಿ ಕರನ್ನು ಕರೆದುಕೊಂಡು ಹೋಗಲಾ ಗುತ್ತಿದೆ. ಇದರಿಂದ ಖಾಸಗಿ ಬಸ್ ಸಂಸ್ಥೆಯವರಿಗೆ ತೊಂದರೆಯಾಗಿದೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. ಮಡಿಕೇರಿ-ಭಾಗಮಂಡಲ, ಮಡಿಕೇರಿ-ಸೋಮವಾರಪೇಟೆ, ಮಡಿಕೇರಿ-ಶನಿವಾರಸಂತೆ, ಕುಶಾಲನಗರ-ಸುಂಟಿಕೊಪ್ಪ-ಕAಬಿಬಾಣೆ, ಕುಶಾಲನಗರ-ಚಿಕ್ಕಅಳುವಾರ-ಸೋಮವಾರಪೇಟೆ, ಸೋಮವಾರಪೇಟೆ-ಚಿಕ್ಕಅಳುವಾರ-ಕುಶಾಲನಗರ ಹೀಗೆ ಹಲವು ಕಡೆಗಳಲ್ಲಿ ನಿಯಮಿತವಾಗಿ ಬಸ್‌ಗಳು ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ ಮಾತನಾಡಿ, ಸಾಧ್ಯವಾದಷ್ಟು ಎಲ್ಲಾ ಕಡೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು. ನಗರದ ನೂತನ ನ್ಯಾಯಾಲಯಕ್ಕೆ ತೆರಳುವ ಮಾರ್ಗದಲ್ಲಿ ಬಸ್‌ಗಳ ಸಂಚಾರಕ್ಕೆ ಈಗಿರುವ ರಸ್ತೆ ಸಾಲದು ಎಂದು ಸಾರ್ವಜನಿಕರೊಬ್ಬರು ಗಮನ ಸೆಳೆದರು.

ಸಾರ್ವಜನಿಕರೊಬ್ಬರು ಮಾತನಾಡಿ, ಜಿಲ್ಲೆಯ ಕುಟ್ಟ ಗ್ರಾಮ ಗಡಿಭಾಗದಿಂದ ಕೇರಳಕ್ಕೆ ತೆರಳುವ ಸಂದರ್ಭದಲ್ಲಿ ಇಲ್ಲಿನ ವಾಹನಗಳನ್ನು ಪರಿಶೀಲಿಸುತ್ತಾರೆ. ಆದರೆ ನೆರೆ ರಾಜ್ಯದಿಂದ ಬರುವ ವಾಹನಗಳನ್ನು ನಮ್ಮ ಜಿಲ್ಲೆಯ ಗಡಿಭಾಗದಲ್ಲಿ ಯಾರೂ ಸಹ ತಪಾಸಣೆ ಮಾಡುವುದಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಕುಟ್ಟ-ಮಾಕುಟ್ಟ ಸೇರಿದಂತೆ ಹಲವು ಕಡೆಗಳಲ್ಲಿ ಈ ಬಗ್ಗೆ ಪರಿಶೀಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಟ್ಯಾಕ್ಸಿ ಯೂನಿಯನ್‌ನ ಪ್ರತಿನಿಧಿಯೊಬ್ಬರು ಮಾತನಾಡಿ ‘ಬಾಡಿಗೆ ಆಧಾರಿತ ಮೋಟಾರು ಬೈಕ್ ಸಂಚಾರದಿAದಾಗಿ ಟ್ಯಾಕ್ಸಿ ಮಾಲೀಕರ ಕುಟುಂಬದವರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ಕೋರಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಎನ್.ಮಧುರ ಅವರು ಜಿಲ್ಲೆಯಲ್ಲಿ ಬಾಡಿಗೆ ಆಧಾರಿತ ಮೋಟಾರ್ ಬೈಕ್‌ಗಳ ಸಂಬAಧ ೧೪೩ ಬೈಕ್‌ಗಳು ಪರವಾನಗಿ ಪಡೆದಿವೆ ಎಂದರು. ಟ್ಯಾಕ್ಸಿ ಡ್ರೆöÊವರ್ ಶಬೀರ್ ಅವರು ಮಾತನಾಡಿ ಬಾಡಿಗೆ ಆಧಾರಿತ ಮೋಟಾರ್ ಬೈಕ್‌ಗಳಿಂದಾಗಿ ಟ್ಯಾಕ್ಸಿ ಕುಟುಂಬದವರ ಬದುಕು ಕಷ್ಟಸಾಧ್ಯವಾಗಿದೆ ಎಂದರು.

ರಸ್ತೆ ಸುರಕ್ಷತಾ ಸಮಿತಿ ಸಭೆ: ಬಳಿಕ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲೆಯ ರಾಷ್ಟಿçÃಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆ ಅಗತ್ಯವಿರುವ ಕಡೆ ಜಿಬ್ರಾ ಕ್ರಾಸ್, ಮಾಹಿತಿ ಫಲಕ ಅಳವಡಿಸುವ ಸಂಬAಧ ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದು ಪ್ರಸ್ತಾವನೆ ಸಲ್ಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಸೂಚಿಸಿದರು.

ಡಿವೈಎಸ್‌ಪಿ ಗಜೇಂದ್ರ ಪ್ರಸಾದ್, ಪೊಲೀಸ್ ಇನ್ಸ್ಪೆಕ್ಟರ್ ಮೇದಪ್ಪ, ಲೋಕೋಪಯೋಗಿ ಇಲಾಖೆ ಇಇ ನಾಗರಾಜು, ಜಿ.ಪಂ.ಯೋಜನಾ ನಿರ್ದೇಶಕ ಜಗದೀಶ, ಪೌರಾಯುಕ್ತ ವಿಜಯ, ಎಂಜಿನಿಯರ್ ಸೌಮ್ಯ, ರಾಷ್ಟಿçÃಯ ಹೆದ್ದಾರಿ ವಿಭಾಗದ ಸಹಾಯಕ ಎಂಜಿನಿಯರ್ ಮುರುಗೇಶ್, ಇತರರು ಹಲವು ಮಾಹಿತಿ ನೀಡಿದರು. ಆಟೋ ಮಾಲಿಕರ ಸಂಘದ ಅಧ್ಯಕ್ಷರು ಇತರರು ಇದ್ದರು.