ಮಡಿಕೇರಿ, ಡಿ. ೧೫: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿ ೧೨ ವರ್ಷಗಳಾಗಿದ್ದು, ನಾಲ್ಕು ಅಧ್ಯಕ್ಷರುಗಳ ತಂಡ ಉತ್ತಮ ಕಾರ್ಯಗಳನ್ನು ಮಾಡಿದೆ. ಮುಂದಿನ ದಿನಗಳಲ್ಲಿ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅರಿವಿರುವವರನ್ನು ನೇಮಕ ಮಾಡಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಅಭಿಪ್ರಾಯಪಟ್ಟರು.
ಕೊಡಗು ಗೌಡ ಸಮಾಜಗಳ ಒಕ್ಕೂಟ, ಕೊಡಗು ಗೌಡ ಸಮಾಜ ಹಾಗೂ ವಿವಿಧ ಗೌಡ ಸಂಘಟನೆಗಳ ಸಹಯೋಗದಲ್ಲಿ ಗೌಡ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಅರೆಭಾಷೆ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅರೆಭಾಷೆ ಅಕಾಡೆಮಿ ಸ್ಥಾಪನೆಯಾದ ದಿನವನ್ನು ಅರೆಭಾಷೆ ದಿನಾಚರಣೆಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಅಕಾಡೆಮಿ ಹುಟ್ಟಿಗೆ ಬಹಳಷ್ಟು ಮಂದಿಯ ಕೊಡುಗೆ ಇದೆ. ಮುಂದಿನ ದಿನಗಳಲ್ಲಿ ಸಂಸ್ಕೃತಿ, ಸಾಹಿತ್ಯದ ಬಗ್ಗೆ ಅರಿವು ಹೊಂದಿರುವ, ರಾಜಕೀಯ ರಹಿತವಾದ ಅಧ್ಯಕ್ಷರು, ಹಾಗೂ ಸದಸ್ಯರುಗಳನ್ನು ನೇಮಕ ಮಾಡಬೇಕು, ಅರ್ಜಿ ಹಾಕಿ ಅವಕಾಶ ಗಿಟ್ಟಿಸಿಕೊಳ್ಳುವದಲ್ಲ. ಇದು ಸ್ಪೆöÊಸಸ್ ಬೋರ್ಡ್ ಅಲ್ಲ. ಅರ್ಹರನ್ನು ಗುರುತಿಸಿ ಅವಕಾಶ ನೀಡಬೇಕು. ಇದು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿಯುಳ್ಳ ಅಕಾಡೆಮಿ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಅಕಾಡೆಮಿ ಅಧ್ಯಕ್ಷ ಸ್ಥಾನ ನೀಡಿದರೆ ಕೊಡಗಿನ ಸಂಸ್ಕೃತಿ ಬೆಳವಣಿಗೆ ಯಾಗಲು
(ಮೊದಲ ಪುಟದಿಂದ) ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಅವರು; ಕಳೆದ ಅವಧಿಯಲ್ಲಿ ಒಂದೇ ಒಂದು ಕಾರ್ಯಕ್ರಮದಲ್ಲೂ ಕೂಡ ಯಾರೂ ಕೂಡ ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡಿಲ್ಲ. ಇಂದಿನ ಕಾರ್ಯಕ್ರಮದಲ್ಲಿ ಕೊಡಗು ಗೌಡ ಯುವ ವೇದಿಕೆಯವರು ಹಾಗೂ ಮಹಿಳೆಯರು ಸಾಂಪ್ರದಾಯಿಕ ಉಡುಪಿನಲ್ಲಿ ಭಾಗವಹಿಸಿರುವದು ಶ್ಲಾಘನೀಯ. ಎಲ್ಲರೂ ಕೂಡ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗವಹಿಸುವಂತಾಗಬೇಕೆAದು ಕರೆ ನೀಡಿದರು. ನಾವುಗಳು ಎಲ್ಲ ಸಮುದಾಯದವರೊಂದಿಗೆ ಸಹ ಬಾಳ್ವೆಯೊಂದಿಗೆ ಬೆರೆಯುವದ ರೊಂದಿಗೆ ಎಲ್ಲ ಸಮುದಾಯದ ವರನ್ನು ಗುರುತಿಸಿ, ಗೌರವಿಸಬೇಕೆಂದು ಹೇಳಿದರು.
ಕುಡಿಯ ಹೋರಾಟಗಾರರ ಪ್ರತಿಮೆ
ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದ ಮಡಿಕೇರಿ ತಾಲೂಕು ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಮಿಟ್ಟು ರಂಜಿತ್, ಅರೆಭಾಷೆಯನ್ನು ಎಲ್ಲ ಸಮುದಾಯದವರು ಇಷ್ಟಪಡುತ್ತಾರೆ. ಅರೆಭಾಷೆಯ ಬಳಕೆ ಹೆಚ್ಚಿಸುವಲ್ಲಿ ಇಂತಹ ಕಾರ್ಯಕ್ರಮ ಗಳು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು. ನಗರ ಪ್ರದೇಶಗಳಲ್ಲಿ ಸಂಸ್ಕೃತಿ ನಶಿಸುತ್ತಿದೆ, ಆದರೆ, ಗ್ರಾಮೀಣ ಪ್ರದೇಶದಲ್ಲಿ ಪಾರದರ್ಶಕವಾಗಿ ಕಲಿಸುತ್ತಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಸಮುದಾಯದ ಪಾತ್ರ ಬಹಳಷ್ಟಿದೆ, ಯುವ ಪೀಳಿಗೆಗೆ ಕಲಿಸುವ ಕಾರ್ಯವಾಗಬೇಕು ಎಂದರು. ತಾನು ಕುಡಿಯ ಜನಾಂಗ ದವನಾಗಿದ್ದು, ಗೌಡ ಜನಾಂಗದ ಸುಬೆದಾರ್ ಗುಡ್ಡೆಮನೆ ಅಪ್ಪಯ್ಯಗೌಡ, ಕೆದಂಬಾಡಿ ರಾಮಯ್ಯ ಗೌಡ ಮುಂದಾಳತ್ವದ ಸ್ವಾತಂತ್ರö್ಯ ಹೋರಾಟ ದಲ್ಲಿ ನಮ್ಮ ಜನಾಂಗದ ಕರ್ತು ಕುಡಿಯ ಹಾಗೂ ಚೆತ್ತು ಕುಡಿಯ ಅವರುಗಳೂ ಕೂಡ ಭಾಗಿಯಾಗಿ ದ್ದರು. ಆದರೆ ನಮ್ಮದು ಸಣ್ಣ ಸಮುದಾಯ ಆಗಿರುವದರಿಂದ ಅವರುಗಳನ್ನು ಬೆಳಕಿಗೆ ತರಲು ಸಾಧ್ಯವಾಗಿಲ್ಲ. ಇದೀಗ ಮಡಿಕೇರಿಯ ಅಪ್ಪಯ್ಯ ಗೌಡರ ಪ್ರತಿಮೆ ಆಸುಪಾಸಿ ನಲ್ಲಿ ಈರ್ವರ ಪ್ರತಿಮೆ ಸ್ಥಾಪನೆ ಮಾಡಲು ಪ್ರಯತ್ನ ಸಾಗುತ್ತಿದೆ. ಸಮಾಜದಲ್ಲಿ ಎಲ್ಲರೂ ಸಹಬಾಗಿತ್ವ ದಿಂದ, ಹೊಂದಾಣಿಕೆಯಿAದ ಬಾಳ್ವೆ ಸಾಗಿಸಬೇಕೆಂದು ಅಭಿಪ್ರಾಯಪಟ್ಟರು.
ಕೊಡಗು ಗೌಡ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಕ ಅಧ್ಯಕ್ಷ ತುಂತಜೆ ಗಣೇಶ್ ಅಕಾಡೆಮಿ ನಡೆದು ಬಂದ ಹಾದಿಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ನಮ್ಮಲ್ಲಿ ಅರೆಭಾಷೆ ಮಾತನಾಡಲು ಹಿಂಜರಿಕೆ ಇತ್ತು, ಅಕಾಡೆಮಿ ಸಾಂಸ್ಕೃತಿಕ ಅಕಾಡೆಮಿ ಸ್ಥಾಪನೆ ಆದ ಬಳಿಕ ಎಲ್ಲ ಸಮಾಜಗಳಿಗೆ ತೆರಳಿ ಜಾಗೃತಿ ಮೂಡಿಸಿದ ಬಳಿಕ ಒಂದಿಷ್ಟು ಜಾಗೃತಿ ಮೂಡಿದೆ. ಹುತ್ತರಿ, ಕೈಲ್ ಮುಹೂರ್ತ ಆಚರಣೆ ಯಾವುದೇ ಆಚರಣೆ ಕೂಡ ಇರಲಿಲ್ಲ. ಅಕಾಡೆಮಿ ಮೂಲಕ ಅದಕ್ಕೆ ಚಾಲನೆ ನೀಡಲಾಯಿತು. ನಂತರದಲ್ಲಿ ಕ್ರೀಡಾಕೂಟದ ಮೂಲಕ ಜನಾಂಗ ಬಾಂಧವರನ್ನು ಒಗ್ಗೂಡಿಸುವ ಕಾರ್ಯಕ್ಕೆ ಮುನ್ನುಡಿ ಹಾಡಲಾಯಿ ತೆಂದು ಹೇಳಿದರು. ನಮ್ಮ ಭಾಷೆ ಮಾತ ನಾಡಲು ಹಿಂಜರಿಕೆ ಇರಬಾರದು. ಮನೆಯಲ್ಲಿ ಮಕ್ಕಳಿಗೆ ಮೊದಲು ನಮ್ಮ ಭಾಷೆ ಕಲಿಸಿದರೆ ಬೆಳೆಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಪ್ರತಿ ಮನೆಯಲ್ಲಿ ಶಬ್ಧಕೋಶ
ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಮಾತನಾಡಿ; ಸಾಂಸ್ಕೃತಿಕ ಅಕಾಡೆಮಿಯಿಂದ ಕ್ರಿಡಾಕೂಟ, ಹಬ್ಬಾಚರಣೆ ಮಾಡಲಾಗಿದೆ. ಅರೆಭಾಷೆ ಅಕಾಡೆಮಿಗಳ ಅಧ್ಯಕ್ಷರು ಗಳು ಉತ್ತಮ ಕೆಲಸ ಮಾಡಿದ್ದಾರೆ. ಅಕಾಡೆಮಿಯಿಂದ ಹೊರತರಲಾಗಿ ರುವ ಶಬ್ಧಕೋಶದಲ್ಲಿ ಅರೆಭಾಷೆ ಪದಗಳ ಶಬ್ಧ ಭಂಡಾರವೇ ಇದ್ದು, ಎಲ್ಲರೂ ಪಡೆದುಕೊಳ್ಳಬೇಕು, ಎಲ್ಲರ ಮನೆಯಲ್ಲಿಯೂ ಶಬ್ಧಕೋಶ ಇರಲೇಬೇಕೆಂದು ಹೇಳಿದರು. ಈಗಿನ ಮಕ್ಕಳಿಗೆ ಐನ್ಮನೆಗಳ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲವೆಂದು ಹೇಳಿದ ಅವರು, ಅವರುಗಳಿಗೆ ಪರಿಚಯಿಸುವ ಕಾರ್ಯವಾಗಬೇಕು. ನಮ್ಮ ಭಾಷೆಯನ್ನು ಮರೆಯಬಾರ ದೆಂದು ಹೇಳಿದರು.
ಅಂತರರಾಷ್ಟಿçÃಯ ಮಟ್ಟದಲ್ಲಿ ಬೆಳೆದಿದೆ
ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ ಮಾತನಾಡಿ, ಅರೆಭಾಷೆ ಇಂದು ನಾಡು, ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಧೈರ್ಯವಾಗಿ ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಅರ್ಥ ಮಾಡಿಕೊಂಡು ಭಾಷೆಯ ಬೆಳವಣಿಗೆಗೆ ಕೈಜೋಡಿಸಬೇಕೆಂದು ಹೇಳಿದರು. ಸಮಾಜದಲ್ಲಿ ವಿಧವೆಯರನ್ನು ಕೀಳಾಗಿ ಕಾಣುವ ಪರಿಸ್ಥಿತಿ ಮರೆಯಾಗಿ ಆ ಒಂದು ಶಬ್ಧ ಬಳಕೆ ಕಡಿಮೆಯಾಗ ಬೇಕು. ಎಲ್ಲರನ್ನು ಒಂದಾಗಿ ಸೇರಿಸಿಕೊಂಡು ಹೋಗಬೇಕೆಂದು ಸಲಹೆ ಮಾಡಿದರು.
ಒಂದೇ ವೇದಿಕೆಯಡಿ ಕಾರ್ಯಕ್ರಮ
ಕೊಡಗು ಗೌಡ ಯವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಮಾತನಾಡಿ, ೨೦೦೩ರಲ್ಲಿ ಆರಂಭ ಗೊಂಡ ಕೊಡಗು ಗೌಡ ಯುವ ವೇದಿಕೆ ಯುವ ಪೀಳಿಗೆಯನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ನಂತರದಲ್ಲಿ ಕೆಲವೊಂದು ಕಾರಣದಿಂದ ಸ್ಥಗಿತಗೊಂಡ ಬಳಿಕ ೨೦೧೨ರಿಂದ ತನ್ನ ಅಧ್ಯಕ್ಷತೆಯಲ್ಲಿ ಮರುಚಾಲನೆ ನೀಡಿ ಹಲವಾರು ಕಾರ್ಯಕ್ರಮಗಳೊಂದಿಗೆ ಯುವ ಪೀಳಿಗೆಯಲ್ಲಿ ಸಂಸ್ಕೃತಿಯ ಅರಿವು ಮೂಡಿಸುವದಲ್ಲದೆ, ಜನಾಂಗದ ವರನ್ನು ಒಗ್ಗೂಡಿಸುವ ಕಾರ್ಯವನ್ನು ನಡೆಸಿಕೊಂಡು ಬರಲಾಗುತ್ತಿದೆ. ಕೇವಲ ಆಟೋಟ ಮಾತ್ರವಲ್ಲದೆ, ಸಾಂಸ್ಕೃತಿಕ ಚಟುವಟಿಕೆಗಳನ್ನೂ ಹಮ್ಮಿಕೊಳ್ಳುತ್ತಾ ಹಳ್ಳಿಯಿಂದ ಡೆಲ್ಲಿಯವರೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲ ಸಮಾಜಗಳನ್ನು ಒಂದೇ ವೇದಿಕೆಯಡಿ ಸೇರಿಸಿ ದೊಡ್ಡ ಪ್ರಮಾಣದ ಕಾರ್ಯಕ್ರಮ ನಡೆಸುವ ಉದ್ದೇಶ ವೇದಿಕೆ ಹೊಂದಿದೆ ಎಂದು ಹೇಳಿದರು.
ಒಗ್ಗಟ್ಟಿನ ಶಕ್ತಿ ತೋರಿಸಬೇಕು
ಬೆಂಗಳೂರಿನ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಪಳಂಗಪ್ಪ ಮಾತನಾಡಿ; ಹಿಂದೆ ಕಾರ್ಯಕ್ರಮಗಳಲ್ಲಿ ಸಾಕಷ್ಟು ಮಂದಿ ಸೇರುತ್ತಿದ್ದರು. ಇದೀಗ ಕಡಿಮೆ ಯಾಗುತ್ತಿದೆ. ರಾಜ್ಯದ ಶೇ.೭೫ರಷ್ಟು ಮಂದಿಗೆ ಅರೆಭಾಷೆ ಜನಾಂಗದ ಬಗ್ಗೆ ಅರಿವಾಗಿದೆ. ನಾವು ಒಗ್ಗಟ್ಟಿನ ಶಕ್ತಿ ಪ್ರದರ್ಶನದೊಂದಿಗೆ ಯಶಸನ್ನು ಕಾಣಬೇಕು. ಎಲ್ಲರೂ ಒಟ್ಟಾಗಿ ಸೇರಿ ಇಂತಹ ಕಾರ್ಯಕ್ರಮ ಗಳನ್ನು ವಿಜೃಂಭಣೆಯಿAದ ಆಚರಿಸು ವಂತಾಗಬೇಕೆAದು ಅಭಿಪ್ರಾಯಪಟ್ಟರು.
ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ತುಂತಜೆ ದಯಾನಂದ, ಮಕ್ಕಂದೂರು ಗೌಡ ಸಮಾಜದ ಅಧ್ಯಕ್ಷ ತೂಟೆರ ವೆಂಕಟರಮಣ, ಸುಂಟಿಕೊಪ್ಪ ಗೌಡ ಸಮಾಜದ ಅಧ್ಯಕ್ಷ ಯಂಕನ ಉಲ್ಲಾಸ್ ಇದ್ದರು. ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯೆ ಬೈತಡ್ಕ ಜಾನಕಿ ಬೆಳ್ಯಪ್ಪ ಪ್ರಾರ್ಥಿಸಿದರೆ, ಮಾಜಿ ಸದಸ್ಯ ಆಗೋಳಿಕಜೆ ಧನಂಜಯ ನಿರೂಪಿಸಿದರೆ, ಗೌಡ ಸಮಾಜಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪೇರಿಯನ ಉದಯ ಸ್ವಾಗತಿಸಿದರು. ಉಪಾಧ್ಯಕ್ಷ ಪೊನ್ನಚನ ಮೋಹನ್ ವಂದಿಸಿದರು.