ಮಡಿಕೇರಿ, ಡಿ. ೧೫: ಕಾಡಾನೆ ಹಾವಳಿ ತಡೆಗಟ್ಟುವ ಸಲುವಾಗಿ ವಿಶೇಷ ಆನೆ ಕಾರ್ಯಪಡೆ ಅನ್ನು ಸರಕಾರ ರಚಿಸಿದ್ದು, ಇದರಂತೆ ಮಡಿಕೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆಗಳಲ್ಲಿ ಉಪಕೇಂದ್ರಗಳನ್ನು ತೆರೆಯಲಾಗಿದೆ.
ಪ್ರತಿ ಕಾರ್ಯಪಡೆಗೆ ೧ ಉಪ ಅರಣ್ಯ ಸಂರಕ್ಷಣಾಧಿಕಾರಿ, ೧ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ೧ ವಲಯ ಅರಣ್ಯಾಧಿಕಾರಿ, ೪ ಉಪ ವಲಯರಣ್ಯಾಧಿಕಾರಿ, ೮ ಅರಣ್ಯ ರಕ್ಷಕರು ಹಾಗೂ ೩೨ ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಆನೆ ಕಾರ್ಯಪಡೆಗೆ ಸಾರ್ವಜನಿಕರು ಸಂಪರ್ಕಿಸಲು ಸಹಾಯವಾಣಿಯನ್ನು ಸ್ಥಾಪಿಸಲಾಗಿದ್ದು, ಸಹಾಯವಾಣಿ ಸಂಖ್ಯೆ ೮೨೭೭೧೨೪೪೪೪ ಆಗಿದ್ದು, ಕಾಡಾನೆಗಳು
(ಮೊದಲ ಪುಟದಿಂದ) ರೈತರ ಜಮೀನುಗಳಿಗೆ, ತೋಟಗಳಿಗೆ, ಸಾರ್ವಜನಿಕ ಪ್ರದೇಶಗಳಿಗೆ ಬಂದಾಗ ಸಾರ್ವಜನಿಕರು ಕೂಡಲೇ ಸಹಾಯ ವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕಾರ್ಯಪಡೆಯ ವಲಯ ಅರಣ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.