ವೀರಾಜಪೇಟೆ, ಡಿ. ೧೬: ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿ ರಾಜ್ಯ ಪ್ರಶಸ್ತಿ ಪಡೆದುಕೊಂಡ ಹಿನ್ನೆಲೆಯಲ್ಲಿ ವೀರಾಜಪೇಟೆ ಗಾಂಧಿನಗರ ನಿವಾಸಿ ಮುಂಡ್ಯೋಳAಡ ಸನ್ನಿ ಬೋಪಯ್ಯ ಅವರನ್ನು ಮಾಜಿ ಸೈನಿಕರ ಸಹಕಾರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬೋಪಯ್ಯ ಅವರು ೧೭ ವರ್ಷಗಳ ಕಾಲ ಭೂಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ೧೯೭೧ ರಲ್ಲಿ ಜನವರಿ ೧೧ರಿಂದ ೨೦ ರಂದು ಓಪಿ ಕ್ಯಾಕ್ಟಸ್ ಲಿಲ್ಲಿ ಎಂಬ ಪಡೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ಇವರ ಸಾಧನೆಯನ್ನು ಪರಿಗಣಿಸಿ ಭೂಸೇನೆ ೦೧.೦೭.೨೨ ರಂದು ಪ್ರಶಸ್ತಿ ಪತ್ರ ನೀಡಿ ಗೌರವಿಸಿತ್ತು. ೧೯೮೬ ರಲ್ಲಿ ಪಿಪಿಎಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಶಿಕ್ಷಣ ಇಲಾಖೆಗೆ ಸೇರ್ಪಡೆಗೊಂಡರು. ೯೬-೯೭ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ೨೦೧೬ರಲ್ಲಿ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಕರ್ನಾಟಕ ರತ್ನ ಪ್ರಶಸ್ತಿ, ರಕ್ಷಣಾ ಹಾಗೂ ಶಿಕ್ಷಣ ಕ್ಷೇತ್ರವನ್ನು ಪರಿಗಣಿಸಿ ಭಾರತ ವಿಕಾಸ ರತ್ನ ಪ್ರಶಸ್ತಿ, ಪರ್ಸನಲ್ ಸರ್ವಿಸ್ ಬಿರುದು, ೨೦೨೨ರಲ್ಲಿ ಹಿರಿಯ ನಾಗರಿಕರ ದಿನದಂದು ಕರ್ನಾಟಕ ರಾಜ್ಯ ಪ್ರಶಸ್ತಿ, ಇತ್ತೀಚೆಗೆ ಮಡಿಕೇರಿಯಲ್ಲಿ ಮಾಜಿ ಸೈನಿಕರ ಸಹಕಾರ ಸಂಘದ ವತಿಯಿಂದ ಜಿಲ್ಲಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇವರನ್ನು ಗೌರವಿಸಲಾಯಿತು.