ಗೋಣಿಕೊಪ್ಪ, ಡಿ. ೧೬: ಬೈತೂರು ದೇವಸ್ಥಾನ ಟ್ರಸ್ಟಿ ಬೋರ್ಡ್ಗೆ ಕೊಡಗು ಜಿಲ್ಲೆಯಿಂದ ಪುಗ್ಗೇರ ಪೊನ್ನಪ್ಪ, ಮಾಳೇಟಿರ ರತ್ನ ಸುಬ್ಬಯ್ಯ ಆಯ್ಕೆಯಾಗಿದ್ದಾರೆ.

ಕೇರಳ ರಾಜ್ಯದಲ್ಲಿರುವ ಬೈತೂರು ದೇವಸ್ಥಾನ ಕಮಿಟಿಗೆ ಕೋವಿಡ್ ಹಿನ್ನೆಲೆ, ೨ ವರ್ಷಗಳಿಂದ ಆಯ್ಕೆ ನಡೆದಿರಲಿಲ್ಲ. ಇದೀಗ ಆಯ್ಕೆ ನಡೆದಿದ್ದು, ಟ್ರಸ್ಟಿ ಮುಖ್ಯಸ್ಥರಾಗಿ ಕೇರಳದ ಒ.ಪಿ. ರಾಜನ್, ಕೇರಳದ ಟ್ರಸ್ಟಿಯಾಗಿ ಕೆ.ಟಿ. ಹರಿಶ್ಚಂದ್ರ ನಂಬಿಯಾರ್, ಪಿ.ಕೆ.ಹರಿದಾಸ್ ಅವರನ್ನು ಆಯ್ಕೆ ಮಾಡಲಾಯಿತು.

ಕೊಡಗು ಜಿಲ್ಲೆಯ ದೇವಾನುದೇವತೆಗಳ ಮೂಲ ಸ್ಥಾನವಾಗಿರುವ ಕೇರಳದ ಬೈತೂರು ದೇವಸ್ಥಾನದಲ್ಲಿ ವರ್ಷಕೊಮ್ಮೆ ಹಬ್ಬ ಆಚರಣೆ ನಡೆಯುತ್ತದೆ.