ಮುಳ್ಳೂರು, ಡಿ. ೧೬: ಸಮೀಪದ ಶನಿವಾರಸಂತೆ ಬೈಪಾಸ್ ರಸ್ತೆಯಲ್ಲಿ ಬ್ರೆöÊಟ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಪೋಷಕರಿಗೆ ವಿದ್ಯಾಸಂಸ್ಥೆ ವತಿಯಿಂದ ಮಂಗಳವಾರ ವಿವಿಧ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾಸಂಸ್ಥೆ ಅಧ್ಯಕ್ಷ ಪರಮೇಶ್ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹೇಮಾ ಪರಮೇಶ್, ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಚೈತ್ರ, ಹಂಡ್ಲಿ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಬ್ದುಲ್ ನಜಿರ್ ಮುಂತಾದವರು ಹಾಜರಿದ್ದರು. ವಿದ್ಯಾಸಂಸ್ಥೆಯ ಪುರುಷ ಮತ್ತು ಮಹಿಳಾ ಪೋಷಕರು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.