ಮಡಿಕೇರಿ, ಡಿ.೧೫: ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಹಿನ್ನೆಲೆಯಲ್ಲಿ ಮಡಿಕೇರಿ ಉಪ ವಿಭಾಗದ ಕರಿಕೆ, ನಾಪೋಕ್ಲು ಗ್ರಾ.ಪಂ. ಸಭಾಂಗಣ, ಗೋಣಿಕೊಪ್ಪಲು ಉಪ ವಿಭಾಗದ ನಲ್ಲೂರು ಗ್ರಾಮದ ಪ್ರಾಥಮಿಕ ಶಾಲೆ ಸಭಾಂಗಣ, ವಿರಾಜಪೇಟೆ ಉಪ ವಿಭಾಗದ ಚೆನ್ನಯ್ಯನಕೋಟೆ ಗ್ರಾ.ಪಂ.ಸಭಾAಗಣ, ಕುಶಾಲನಗರದ ಕೆದಕಲ್ ಗ್ರಾಮದ ಹಾಲೇರಿ ಭದ್ರಕಾಳಿ ದೇವಸ್ಥಾನ ಸಭಾಂಗಣ, ಚೆಟ್ಟಳ್ಳಿ ಗ್ರಾ.ಪಂ. ಸಭಾಂಗಣ ಹಾಗೂ ಸೋಮವಾರಪೇಟೆ ಉಪ ವಿಭಾಗದ ಯಡೇಹಳ್ಳಿ ಅಂಗನವಾಡಿ ಕೇಂದ್ರ ಸಭಾಂಗಣದಲ್ಲಿ ತಾ. ೧೭ ರಂದು ಬೆಳಿಗ್ಗೆ ೧೧ ಗಂಟೆಯಿAದ ವಿದ್ಯುತ್ ಅದಾಲತ್ ನಡೆಯಲಿದೆ. ಆದ್ದರಿಂದ ಈ ವ್ಯಾಪ್ತಿಯ ಸಾರ್ವಜನಿಕರು, ವಿದ್ಯುತ್ ಗ್ರಾಹಕರು ಸಭೆಗೆ ಹಾಜರಾಗಿ ತಮ್ಮ ಅಹವಾಲುಗಳÀನ್ನು ಸಲ್ಲಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ಅವರು ಕೋರಿದ್ದಾರೆ.