ಮಡಿಕೇರಿ, ಡಿ. ೧೫: ಮಡಿಕೇರಿ ಕೊಡವ ಸಮಾಜದ ವತಿಯಿಂದ ಪುತ್ತರಿ ನಮ್ಮೆಯ ಪ್ರಯುಕ್ತ ಪುತ್ತರಿ ಊರೊರ್ಮೆ ಇದೇ ತಾ.೧೭ರಂದು ಸಮಾಜದ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆಯಲಿದೆ. ಪೂರ್ವಾಹ್ನ ೧೧ ಗಂಟೆಗೆ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್‌ನ ಸದಸ್ಯರಾದ ಮಂಡೇಪAಡ ಸುಜಾ ಕುಶಾಲಪ್ಪ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಹೆಚ್ಚು ಅಂಕಪಡೆದ ಮಕ್ಕಳಿಗೆ ಬಹುಮಾನ ನೀಡಲಾಗುತ್ತದೆ.

ಮಧ್ಯಾಹ್ನದ ಭೋಜನದ ನಂತರ ಕೊಡವ ಸಮಾಜದಿಂದ ಕೋಲ್ ಮಂದ್‌ನವರೆಗೆ ಸಾಂಪ್ರದಾಯಿಕ ಮೆರವಣಿಗೆ ತೆರಳಿ ಕೋಲಾಟ್, ಬೊಳಕಾಟ್, ಉಮ್ಮತಾಟ್ ಪ್ರದರ್ಶನ ನೆರವೇರಲಿದೆ.