ಗುಡ್ಡೆಹೊಸೂರು, ಡಿ. ೧೫: ಇಲ್ಲಿಗೆ ಸಮೀಪದ ನಂಜರಾಯ ಪಟ್ಟಣದ ಸಮುದಾಯಭವನದಲ್ಲಿ ರಾಷ್ಟç ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸ್ಥಳೀಯ ಕ್ರೀಡಾಪಟುಗಳಿಗೆ ಸನ್ಮಾನ ಮಾಡಲಾಯಿತು. ಅಂತರರಾಷ್ಟಿçÃಯ ಸೆಸ್ಟೋಬಾಲ್ ಚಾಂಪಿಯನ್ಶಿಪ್ನ ವಿಜೇತರಾದ ನಂದಿನಿ ಸಿ.ಪಿ, ಮತ್ತು ಶಾಹಿಲ್, ರಾಷ್ಟಿçÃಯ ಕುಸ್ತಿ ಕ್ರೀಡೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ವಿಜೇತರಾದ ಅಸ್ನಾಸರೀನ್ ಮತ್ತು ಧನ್ಯರನ್ನು, ರಾಷ್ಟಿçÃಯ ಹಾಕಿ ಪಟು ಅಚ್ಚಂಡಿರ ದೀಕ್ಷಿತ್ ಮತ್ತು ನಂಜರಾಯಪಟ್ಟಣದ ದೈಹಿಕ ಶಿಕ್ಷಕರಾದ ಪ್ರಸಾದ್ ಹೆಚ್.ಕೆ. ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಎಸ್.ಎಸ್.ಎನ್ ಬ್ಯಾಂಕಿನ ಅಧ್ಯಕ್ಷ ಮುರಳಿಮಾದಯ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಂಜರಾಯ ಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ವಿಜು ಚಂಗಪ್ಪ, ಗಣ್ಯರಾದ ಪ್ರೇಮಾನಂದ ಉಪಸ್ಥಿತರಿದ್ದು ಕ್ರೀಡಾಪಟುಗಳಿಗೆ ಶುಭ ಕೋರಿದರು. ಈ ಸಂದರ್ಭ ನಂಜರಾಯಪಟ್ಟಣದ ಗೆಳೆಯರ ಬಳಗದ ಸಂಚಾಲಕ ಕೋಟುಮಾಡ ನವೀನ್, ಚೆಟ್ಟಡ್ಕ ಸುನೀಲ್, ಐಮಂಡ ಗಣಪತಿ, ಮುಂತಾದವರು ಹಾಜರಿದ್ದರು, ಐಯಂಡ್ರ ಸೂರ್ಯಕುಮಾರ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕ ಪ್ರಸಾದ್ ಸರ್ವರನ್ನು ಸ್ವಾಗತಿಸಿದರು. ನಡುಮನೆ ಪವನ್ ವಂದಿಸಿದರು.