ಶನಿವಾರಸಂತೆ, ಡಿ. ೧೪: ಸ್ಥಳೀಯ ಪೊಲೀಸ್ ಠಾಣೆಗೆ ಆಲೂರು-ಸಿದ್ದಾಪುರ ಗ್ರಾಮದ ಸರಕಾರಿ ಪ್ರೌಢಶಾಲೆಯ ಸ್ಟೂಡೆಂಟ್ ಪೊಲೀಸ್ ಕೆಡೆಟ್ಗಳಾದ ೪೪ ವಿದ್ಯಾರ್ಥಿಗಳು ಭೇಟಿ ನೀಡಿ ಅಪರಾಧ ತಡೆ ಕುರಿತು ತರಬೇತಿ ಪಡೆದರು.
ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಮಾತನಾಡಿ, ಡಿಸೆಂಬರ್ ತಿಂಗಳಲ್ಲಿ ನಡೆಸುವ ಅಪರಾಧ ತಡೆ ಮಾಸಾಚರಣೆ, ಪೊಲೀಸ್ ಠಾಣೆಯ ಕಾರ್ಯವೈಖರಿ, ಪೊಲೀಸರ ದೈನಂದಿನ ಕರ್ತವ್ಯ ಹಾಗೂ ಬಾಲಪರಾಧಗಳ ಕುರಿತು ಮಾಹಿತಿ ನೀಡಿದರು.
ತರಬೇತುದಾರ ಎ.ಆರ್.ಎ. ಎಸ್.ಐ. ರಂಗ, ಶಾಲಾ ಮುಖ್ಯ ಶಿಕ್ಷಕಿ ಶ್ರುತಿ, ಶಿಕ್ಷಕ ಧರ್ಮಪ್ಪ, ಹೆಡ್ಕಾನ್ಸ್ಟೇಬಲ್ಗಳಾದ ಬೋಪಣ್ಣ, ಪ್ರದೀಪ್ ಕುಮಾರ್, ನಿಶಾ, ಸಿಬ್ಬಂದಿ ಪೂರ್ಣಿಮಾ, ತೇಜಸ್ವಿನಿ, ಕುಮಾರ್ ಇತರರು ಹಾಜರಿದ್ದರು.