ಸುಂಟಿಕೊಪ್ಪ, ಡಿ. ೧೪: ಎಮ್ಮೆಗುಂಡಿಯ ನಾಟಿ ವೈದ್ಯ ಹೊಸೊಕ್ಲು ರಾಮಯ್ಯ ಗೌಡ ಅವರ ಭತ್ತದ ಗದ್ದೆಯಲ್ಲಿ ನೆರೆಕಟ್ಟಿ ಕದಿರು ತೆಗೆಯುವ ಮೂಲಕ ಮನೆಗೆ ಧಾನ್ಯಲಕ್ಷಿö್ಮಯನ್ನು ಬರಮಾಡಿಕೊಳ್ಳಲಾಯಿತು.

ಈ ಭಾಗದ ಗ್ರಾಮಸ್ಥರು ಅಕ್ಕ ಪಕ್ಕದ ನಿವಾಸಿಗಳು ಹೊಸೊಕ್ಲು ಕುಟುಂಬಸ್ಥರು ಹುತ್ತರಿ ಹಬ್ಬದ ಅಂಗವಾಗಿ ರಾತ್ರಿ ೭.೩೦ಕ್ಕೆ ನೆರೆ ಕಟ್ಟಿ ೮.೩೦ ಗಂಟೆಗೆ ಭತ್ತದ ಗದ್ದೆಯಲ್ಲಿ ಕದಿರನ್ನು ತೆಗೆಯಲಾಯಿತು. ಆ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭ ಹೊಸೊಕ್ಲು ಮನೆ ಚಂದ್ರಮ್ಮ ರಾಮಯ್ಯ, ಸುಬ್ರಮಣಿ (ಶಾಂತು), ಹೆಚ್.ಎಸ್. ವೀಣಾ, ಜಲಜಾಕ್ಷಿ, ಗಗನ್, ಹೊನ್ನಪ್ಪ ಪೂಜಾರಿ ಮನೆ ಬಾಲಕೃಷ್ಣ, ಗುತ್ತಿಮುಂಡನ ದಯಾನಂದ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.