ವರದಿ- ಚಂದ್ರಮೋಹನ್

ಕುಶಾಲನಗರ, ಡಿ. ೧೩: ಕುಶಾಲನಗರ ಪಟ್ಟಣ ಮತ್ತು ನೆರೆಯ ಕೆಲವು ಗ್ರಾಮಗಳನ್ನು ಒಳಪಟ್ಟಂತೆ ನೂತನವಾಗಿ ಕುಶಾಲನಗರ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿ ಸುವ ಸಂಬAಧ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಗೊಂಡಿದ್ದು, ಕಳೆದ ಒಂದು ವರ್ಷಗಳ ಕಾಲ ಕಂಡುಬAದಿದ್ದ ಗೊಂದಲಗಳಿಗೆ ತೆರೆಬಿದ್ದಿದೆ.

ಕುಶಾಲನಗರ ಪಟ್ಟಣ ಪಂಚಾಯಿತಿ, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಪೂರ್ಣ ಕಂದಾಯ ಗ್ರಾಮದ ಪ್ರದೇಶಗಳು ಮತ್ತು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಮಾದಪಟ್ಟಣ ವ್ಯಾಪ್ತಿಯನ್ನು ಒಳಗೊಂಡAತೆ ಕುಶಾಲನಗರ ಪುರಸಭೆ ಮಾಡುವ ಪ್ರಸ್ತಾವನೆಗೆ ಸರ್ಕಾರ ರಾಜ್ಯ ಪತ್ರದಲ್ಲಿ ಅಧಿಕೃತ ಪ್ರಕಟಣೆಗೊಂಡಿದೆ. ಈ ಹಿಂದೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರ ಆಕ್ಷೇಪಣೆಗಳನ್ನು ಹಿಂಪಡೆಯಲಾಗಿದ್ದು, ಸರಕಾರ ಡಿಸೆಂಬರ್ ೮ ರಂದು ಅಧಿಸೂಚನೆ ಹೊರಡಿಸಿದೆ.

ಕುಶಾಲನಗರ ಪುರಸಭೆ ಬಗ್ಗೆ ಪುನರ್‌ಪರಿಶೀಲನೆ ನಡೆಸಿದ ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಪಟ್ಟಣದ ೧೬ ವಾರ್ಡ್ಗಳು ಸೇರಿದಂತೆ ಮುಳ್ಳುಸೋಗೆ ಸಂಪೂರ್ಣ ಕಂದಾಯ ಗ್ರಾಮ, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಗೆ ಒಳಪಟ್ಟ ಮಾದಪಟ್ಟಣ ಗ್ರಾಮದ ಬಹುತೇಕ ಸರ್ವೇ ನಂ. ೧೦೫/೧, ೧೦೨, ೧೦೫/೮, ೧೦೫/೯, ೯೪, ೯೩, ೯೬, ೫೭/೨, ೬೩/೨೯, ೬೯/೨೬, ೬೩/೨೫, ೬೩/೧೮, ೬೩/೧೯, ೬೩/೨೧, ೬೩/೨೦, ೩೭/೩, ೩೭/೨, ೩೭/೧, ೩೮/೨, ೩೯/೨,೧೧/೧, ೧೧/೧೦, ೧೧/೯ ಮತ್ತು ೧೧/೨ ಸೇರಿದಂತೆ ೧೧.೧೨ ಚದರ ಕಿ.ಮೀ ಪ್ರದೇಶವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಮಾದಪಟ್ಟಣ ಬಳಿ ಇರುವ ಸರಕಾರಿ ಪಾಲಿಟೆಕ್ನಿಕ್ ಮತ್ತು ಸರ್ಕಾರಿ ಇಂಜಿನಿಯರಿAಗ್ ಕಾಲೇಜನ್ನು ಪುರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ.

ಸಂಬAಧಪಟ್ಟ ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ನಡಾವಳಿಗಳು, ೨೦೧೧ರ ಜನಗಣತಿಯ ಮಾಹಿತಿ, ಜನಸಾಂದ್ರತೆ, ವಿಸ್ತೀರ್ಣ, ತೆರಿಗೆಯೇತರ ಸ್ವೀಕೃತಿ, ವಾರ್ಷಿಕ ತಲಾ ಆದಾಯ ಮತ್ತು ಪ್ರದೇಶದ ಆರ್ಥಿಕ ಮಹತ್ವ ಹಾಗೂ ಸರಹದ್ದನ್ನು ವಿಸ್ತರಿಸಿರುವ ಗಡಿಯನ್ನು ಒಳಗೊಂಡ ನಕ್ಷೆ ವಿವರ ಸಲ್ಲಿಸಲಾಗಿತ್ತು. ೨೯ ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಒಳಗೊಂಡAತೆ ಪುರಸಭೆಯಾಗಿ ಮೇಲ್ದರ್ಜೆಗೇರಲು ಎಲ್ಲಾ ಮಾನದಂಡಗಳನ್ನು ಪರಿಗಣಿಸಲಾಗಿದೆ.

ಮುಳ್ಳುಸೋಗೆಯಿಂದ ನಾಮನಿರ್ದೇಶನ

ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರು ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದು, ಕುಶಾಲನಗರ ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಎಲ್ಲಾ ರೀತಿಯ ತಾಂತ್ರಿಕ ಅಂಶಗಳನ್ನು ಪರಿಗಣಿಸಲಾಗಿದೆ. ಈ ಹಿಂದೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಕೆಲ ಸದಸ್ಯರ ಆಕ್ಷೇಪಣೆ ಹಿನ್ನೆಲೆಯಲ್ಲಿ ವಿಳಂಬಗೊಳ್ಳಲು ಕಾರಣವಾಗಿತ್ತು. ಸದÀ್ಯದಲ್ಲಿಯೇ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯಿAದ ಕೆಲವು ಸದಸ್ಯರನ್ನು ಕುಶಾಲನಗರ ಪುರಸಭೆಗೆ ನಾಮ ನಿರ್ದೇಶನ ಮಾಡುವ ಪ್ರಕ್ರಿಯೆ ನಡೆಯಲಿದೆ ಎಂದಿದ್ದಾರೆ. ನಿಯಮಾನುಸಾರ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ. ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ ಈಗಾಗಲೇ ಚುನಾಯಿತ ೧೬ ಮಂದಿ ಮತ್ತು ನಾಮ ನಿರ್ದೇಶಿತ ೩ ಮಂದಿ ಸದಸ್ಯರಿದ್ದಾರೆ. ಪುರಸಭೆಯಾಗಿ ಮೇಲ್ದರ್ಜೆಗೇರಿರುವ ಕುಶಾಲನಗರ ಪುರಸಭೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಶಾಸಕರ ಮುತುವರ್ಜಿಯಿಂದ ಈ ಎಲ್ಲಾ ಬೆಳವಣಿಗೆ ನಡೆದಿದೆ. ಕುಶಾಲನಗರ ತಾಲೂಕು ರಚನೆ ಮತ್ತು ಪುರಸಭೆಯಾಗಿ ಮೇಲ್ದರ್ಜೆಗೇರಿರುವುದು ಸಂತಸದ ವಿಷಯ ಎಂದಿದ್ದಾರೆ.

ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಒಳಗೊಂಡು ಕುಶಾಲನಗರ ಪುರಸಭೆಯಾಗಿರುವುದು ಹೆಚ್ಚಿನ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳನ್ನು ಪಡೆಯಲು ಅನುಕೂಲಕರವಾಗಲಿದೆ ಎಂದು ಮುಳ್ಳುಸೋಗೆ ಮಾಜಿ ಉಪಾಧ್ಯಕ್ಷ ಎಂ.ಎಸ್. ರಾಜೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜಕೀಯ ರಹಿತವಾಗಿ ಜನಪರ ಅಭಿವೃದ್ಧಿ ಕಾರ್ಯಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಿಂದ ವಿಜಯೋತ್ಸವ

ಕುಶಾಲನಗರ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೇಗೇರಿಸಿ ಸರ್ಕಾರದಿಂದ ಅಂತಿಮ ಆದೇಶ ಬಂದಿರುವ ಹಿನ್ನೆಲೆಯಲ್ಲಿ ಕುಶಾಲನಗರ ಬಿಜೆಪಿಯಿಂದ ವಿಜಯೋತ್ಸವ ನಡೆಯಿತು. ನಗರ ಅಧ್ಯಕ್ಷ ಉಮಾಶಂಕರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ, ಬಿಜೆಪಿ ಬೆಂಬಲಿತ ಸದಸ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಇದ್ದರು.