ಸುಂಟಿಕೊಪ್ಪ, ಡಿ. ೧೩: ಇಲ್ಲಿನ ಸಂತ ಅಂತೋಣಿ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಅಮಲೋದ್ಭವ ಮಾತೆಯ ಹಬ್ಬವನ್ನು ಆಚರಿಸಲಾಯಿತು.
ಹೊಸ ಭತ್ತದ ತೆನೆಯನ್ನು ತೆಗೆದು ಕ್ರೆöÊಸ್ತ ದೇವಾಲಯಕ್ಕೆ ತರುವ ಮೂಲಕ ಕ್ರೆöÊಸ್ತ ಭಕ್ತರು ಸಡಗರದಿಂದ ಹಬ್ಬವನ್ನು ಆಚರಿಸಿಕೊಂಡರು.
ಇಲ್ಲಿನ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ರೆ.ಫಾ.ಅರುಳ್ ಸೆಲ್ವಕುಮಾರ್, ಸಂತ ಕ್ಲಾರ ಕನ್ಯಾ ಸ್ತಿçÃಯರು, ಕ್ರೆöÊಸ್ತ ಭಕ್ತರು ಸಮೀಪದ ಮಂಜಿಕೆರೆ ಗ್ರಾಮಕ್ಕೆ ತೆರಳಿ ಗದ್ದೆಯಲ್ಲಿ ಬೆಳೆದಿದ್ದ ಭತ್ತದ ಪೈರಿಗೆ ಪ್ರಾರ್ಥನೆ ಸಲ್ಲಿಸಿ ಆಶೀರ್ವಚನ ಮಾಡಿ ಧರ್ಮ ಗುರುಗಳು ಕದಿರನ್ನು ತೆಗೆದು ಹಾಡು ಹೇಳುತ್ತಾ ಮೆರವಣಿಗೆ ಮೂಲಕ ದೇವಾಲಯಕ್ಕೆ ಆಗಮಿಸಿ ಭತ್ತದ ಫೈರನ್ನು ದೇವರ ಮುಂದಿರಿಸಿ ಪ್ರಾರ್ಥನೆ ಸಲ್ಲಿಸಿದರು.
ಮೈಸೂರಿನ ಧರ್ಮಗುರು ಮೈಕಲ್ ಅಗಸ್ಟೀನ್ ಪ್ರೋ ಅವರು ವಿಶೇಷ ಪ್ರಾರ್ಥನೆ ಹಾಗೂ ಆಡಂಬರದ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ನೆರೆದಿದ್ದ ಭಕ್ತರು ಅಮಲೋದ್ಭವ ಮಾತೆಯನ್ನು ಧ್ಯಾನಿಸಿದರು. ರಾತ್ರಿ ನೆರೆದಿದ್ದ ಭಕ್ತರಿಗೆ ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳು ಕದಿರನ್ನು ವಿತರಿಸಿದರು. ಅನ್ನಸಂತರ್ಪಣೆ ನಡೆಯಿತು.