ಸೋಮವಾರಪೇಟೆ/ಮುಳ್ಳೂರು, ಡಿ. ೧೪: ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದ ಅಪಾರ ಬೆಳೆ ನಷ್ಟದೊಂದಿಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಕಾಲಿಕ ಮಳೆ ಅವಾಂತರ ಸೃಷ್ಟಿಸಿದ್ದು, ಭತ್ತ ಹಾಗೂ ಕಾಫಿ ಬೆಳೆ ನಾಶವಾಗಿದೆ. ಕೆಲವೆಡೆ ವಿದ್ಯುತ್ ಕಂಬಗಳು ಧರಾಶಾಯಿ ಆಗಿವೆ. ಜೊತೆಗೆ ರಸ್ತೆ ಮೇಲೆ ನೀರು ನಿಂತು ಸಂಚಾರಕ್ಕೆ ತೊಡಕಾಯಿತು.

ಕಳೆದ ಮೂರು ನಾಲ್ಕು ದಿನಗಳಿಂದ ಅಕಾಲಿಕ ಮಳೆಯಾಗುತ್ತಿದ್ದು ಮಂಗಳವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಯಿಂದ ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಭಾರೀ ಹಾನಿ ಸಂಭವಿಸಿದೆ. ಹೋಬಳಿಗೆ ಸೇರಿದ ಆಲೂರು ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ದೊಡ್ಡಳ್ಳಿ ಗ್ರಾಮದ ದೊಡ್ಡಳ್ಳಿ ಕೆರೆಯಲ್ಲಿ ನೀರು ಭರ್ತಿಯಾಗಿ ಕೆರೆಯ ಕೋಡಿ ಹರಿಯುವ ನಾಲೆ ಒಡೆದು ಹೋದ ಪರಿಣಾಮ ನಾಲೆಯ ನೀರು ಗ್ರಾಮದ ರಸ್ತೆ ಮೇಲೆ ಹರಿದಿದೆ. ನೀರಿನ ರಭಸಕ್ಕೆ ರಸ್ತೆ ಕೊಚ್ಚಿಹೋಗಿದೆ.

ದೊಡ್ಡಳ್ಳಿ ಕೆರೆಗೆ ಪಕ್ಕದ ಬಾಲಕೆರೆಯ ನೀರು ಸೇರಿಕೊಳ್ಳುತ್ತಿರು ವುದರಿಂದ ಈ ಕೆರೆಯಲ್ಲಿ ನೀರು ಅಧಿಕವಾಗಿ ಸಂಗ್ರಹವಾಗುತ್ತದೆ ಹಾಗೂ ಕೆರೆಯ ಕೋಡಿಯಿಂದ ಹೆಚ್ಚುವರಿ ನೀರು ಹರಿಯಲು ನಾಲೆಯನ್ನು ನಿರ್ಮಿಸಲಾಗಿದ್ದು ಕಳೆದ ೪೦ ವರ್ಷಗಳಿಂದ ಹೂಳು ತುಂಬಿದ ನಾಲೆಯನ್ನು ದುರಸ್ತಿ ಪಡಿಸದಿರು ವುದರಿಂದ ನೀರು ರೈತರ ಗದ್ದೆ ಮೇಲೆ ಹರಿಯುವುದರ ಜೊತೆಯಲ್ಲಿ ಗ್ರಾಮದ ರಸ್ತೆ ಮೇಲೆ

(ಮೊದಲ ಪುಟದಿಂದ) ಹರಿಯುತ್ತದೆ. ಅದೆ ರೀತಿಯಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ನಾಲೆ ಒಡೆದು ಹೋಗಿದ್ದರಿಂದ ರಸ್ತೆ ಕೊಚ್ಚಿ ಹೋಗಲು ಕಾರಣವಾಗಿದೆ ಎಂದು ಗ್ರಾಮಸ್ಥರ ಪರವಾಗಿ ಧನಂಜಯ್ ಆರೋಪಿಸಿದ್ದಾರೆ.

ಧರೆಗುರುಳಿದ ವಿದ್ಯುತ್ ಕಂಬಗಳು

ಆಲೂರುಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಹೊಸಗುತ್ತಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆ ಗಾಳಿಗೆ ೧೧ ಕೆ.ವಿ.ವಿದ್ಯುತ್ ಮಾರ್ಗದ ೮ ವಿದ್ಯುತ್ ಕಂಬಗಳು ಸೇರಿದಂತೆ ೧೦೦ ಕೆವಿಎ ವಿದ್ಯುತ್ ಟ್ರಾನ್ಸ್ಫಾರ್ಮರ್ ಕಂಬಗಳು ಮುರಿದು ಬಿದ್ದಿವೆ. ಇದರಿಂದ ಹೊಸಗುತ್ತಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಇದರಿಂದ ಇಲಾಖೆಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಆಲೂರುಸಿದ್ದಾಪುರ ಸೆಸ್ಕಾಂ ಶಾಖೆಯ ಕಿರಿಯ ಇಂಜಿನಿಯರ್ ರಮೇಶ್ ಹೇಳಿದರು.ಕೂಡಿಗೆ: ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣದಲ್ಲಿದ್ದ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಸುರಿದ ಮಳೆಯಿಂದಾಗಿ ಈ ವ್ಯಾಪ್ತಿಯ ನೂರಾರು ಎಕರೆಗಳಷ್ಟು ಪ್ರದೇಶದ ಭತ್ತದ ಬೆಳೆಯು ಮಳೆಗೆ ಕೊಚ್ಚಿ ಹೋಗಿದೆ.

ಹಾರಂಗಿ ಅಚ್ಚುಕಟ್ಟು ಪ್ರದೇಶಗಳಾದ ಹುದುಗೂರು, ಮಾದಲಾಪುರ, ಹೆಬ್ಬಾಲೆ, ತೊರೆನೂರು, ಶಿರಂಗಾಲ ಸೇರಿದಂತೆ ವಿವಿಧೆಡೆ ಕಳೆದ ಎರಡು ದಿನಗಳಿಂದ ೩ ಇಂಚಿಗೂ ಅಧಿಕ ಪ್ರಮಾಣದಲ್ಲಿ ಮಳೆ ಸುರಿದುದರಿಂದಾಗಿ ಕಟಾವು ಮಾಡಿದ ಭತ್ತದ ಬೆಳೆ ನಷ್ಟವಾಗಿದೆ.ಶನಿವಾರಸಂತೆ: ಹೋಬಳಿಯಾದ್ಯಂತ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗಿನ ಜಾವದವರೆಗೂ ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆಯಾಗಿದ್ದು, ಬೆಳೆ ನೆಲಕಚ್ಚಿದೆ. ದುಂಡಳ್ಳಿ ಹಾಗೂ ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ೫ ಇಂಚು ಮಳೆಯಾಗಿದೆ.

ನಾಲ್ಕೆöÊದು ದಿನಗಳಿಂದ ಜಿಟಿಜಿಟಿ ಸುರಿಯುತ್ತಿದ್ದ ಮಳೆಯಲ್ಲೆ ಎಲ್ಲಾ ಬೆಳೆಗಾರರು ಅವಸರವಸರವಾಗಿ ಕಾಫಿ ಹಣ್ಣು ಕೊಯ್ಲು ಮಾಡಿಸುತ್ತಿದ್ದರು. ಕೊಯ್ಲು ಮಾಡಿದ ಹಣ್ಣನ್ನು ಹಾಗೂ ಪಲ್ಪರ್ ಮಾಡಿದ ಬೆಳೆಯನ್ನು ಮನೆಯಂಗಳದಲ್ಲಿ ಒಣಗಿಸುತ್ತಿದ್ದರು. ಆದರೆ, ರಾತ್ರಿ ಸುರಿದ ಧಾರಾಕಾರ ಮಳೆಗೆ ಗಿಡದಲ್ಲಿದ್ದ ಹಣ್ಣುಗಳು ಉದುರಿ ನೆಲಕಚ್ಚಿ ಮಣ್ಣು ಪಾಲಾಗಿದ್ದರೆ, ಒಣ ಹಾಕಿದ ಹಣ್ಣು ವರ್ಷವಿಡೀ ಬೆವರು ಸುರಿಸಿ ಬೆಳೆದ ಬೆಳೆ ಕೊಯ್ಲಿನ ಸಮಯದಲ್ಲಿ ರಕ್ಷಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಶೇ. ೭೦ ರಷ್ಟು ಕಾಫಿ ನೆಲಕಚ್ಚಿದ್ದರೆ ಹವಾಮಾನ ವೈಪರೀತ್ಯದಿಂದ ಉಳಿದಿರುವ ಬೆಳೆಯನ್ನೂ ರಕ್ಷಿಸಲಾಗುತ್ತಿಲ್ಲ. ಮಳೆಯಿಂದ ಹಣ್ಣಾಗಿರುವ ಕಾಫಿ ಒಮ್ಮೊಮ್ಮೆ ಮೂಡುವ ಬಿಸಿಲಿಗೆ ಒಡೆದು ಹೋಗುತ್ತಿವೆ. ಗಿಡ ಮುಟ್ಟಿದರೆ ಹಣ್ಣು ಉದುರಿ ಹೋಗುತ್ತಿವೆ. ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾಯಿತು ಎಂದು ಬೆಳೆಗಾರ ಬಿಳಾಹ ಗ್ರಾಮದ ಬಿ.ಎಸ್. ಮೋಹನ್ ಹಾಗೂ ಅಪ್ಪಶೆಟ್ಟಳ್ಳಿ ಗ್ರಾಮದ ರಕ್ಷಿತ್ ಅಳಲು ತೋಡಿಕೊಂಡಿದ್ದಾರೆ.ಕೂಡಿಗೆ: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಬಾಣವಾರ ವ್ಯಾಪ್ತಿ ಮತ್ತು ಹಾರಂಗಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಭತ್ತದ ಕಟಾವು ಮಾಡಿದ ಬೆಳೆಯು ಮಳೆಯಿಂದಾಗಿ ನಾಶವಾದ ಹಿನ್ನೆಲೆ ೨೦ಕ್ಕೂ ಹೆಚ್ಚು ರೈತರ ಜಮೀನಿಗೆ ಕೃಷಿ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಜಿಲ್ಲಾ ಕೃಷಿ ಇಲಾಖೆ ಉಪ ನಿರ್ದೇಶಕ ಬಾಲರಾಜ್ ರಂಗರಾವ್, ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಯಾದವ್ ಬಾಬು, ಕೃಷಿ ಅಧಿಕಾರಿ ನವ್ಯ ನಾಣಯ್ಯ, ಸೇರಿದಂತೆ ಇನ್ನಿತರರು ಹಾಜರಿದ್ದರು.ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕರ ಕೂಗುರು ಗ್ರಾಮದಲ್ಲಿ ಸಂದೀಪ್ ಎಂಬವರ ಕಣದಲ್ಲಿ ಪಲ್ಪಿಂಗ್ ಮಾಡಿ ಒಣಗಲು ಹಾಕಿದ್ದ ಕಾಫಿ ಬೇಳೆ ಕೊಚ್ಚಿ ಹೋಗಿದೆ. ಸೂಕ್ತ ಪರಿಹಾರಕ್ಕೆ ಬೆಳೆಗಾರರು ಒತ್ತಾಯಿಸಿದ್ದಾರೆ.ಸೋಮವಾರಪೇಟೆ: ತಾಲೂಕಿನಾದ್ಯಂತ ನಿನ್ನೆ ರಾತ್ರಿ ಹಾಗೂ ಇಂದು ಸುರಿದ ಭಾರೀ ಮಳೆಗೆ ಭತ್ತ ಹಾಗೂ ಕಾಫಿ ಬೆಳೆಗಾರರು ತತ್ತರಿಸಿದ್ದಾರೆ. ಫಸಲು ಕೈ ಸೇರುವ ಹಂತದಲ್ಲಿ ಅಕಾಲಿಕ ಮಳೆಯು ಆಘಾತ ನೀಡಿದ್ದು, ಕೈಸೇರುವ ಹಂತದಲ್ಲಿದ್ದ ಫಸಲು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.

ಪುಷ್ಪಗಿರಿ ಬೆಟ್ಟಶ್ರೇಣಿ ಸೇರಿದಂತೆ ಅರೆಮಲೆನಾಡು ಭಾಗದಲ್ಲೂ ಭಾರೀ ಮಳೆ ಸುರಿದಿದೆ. ಕೆಲವೆಡೆ ೩ ಇಂಚು ಮಳೆಯಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಗಳ ಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸಂಚಾರ ಅಸ್ತವ್ಯಸ್ತವಾಗಿದೆ.

ಅಸಮರ್ಪಕ ಚರಂಡಿಯಿAದಾಗಿ ಮಳೆ ನೀರು ರಸ್ತೆಯ ಮೇಲೆಯೇ ಹರಿದಿದೆ. ಚರಂಡಿಗಳಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯಗಳು, ಕಲ್ಲು-ಮಣ್ಣು ರಸ್ತೆಯ ಮೇಲೆ ಹರಡಿಕೊಂಡಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ.

ತಾಲೂಕಿನ ಚಿಕ್ಕಾರ ಗ್ರಾಮದಲ್ಲಿ ದಾಖಲೆಯ ೫ ಇಂಚು ಮಳೆಯಾಗಿದ್ದು, ಹಣ್ಣು ಕಾಫಿ ಹಾಗೂ ಭತ್ತ ತೀವ್ರ ನಷ್ಟವಾಗಿದೆ. ಚಿಕ್ಕಾರ ಗ್ರಾಮದ ಈರಮ್ಮ, ದಿನೇಶ್, ಬೋಜಪ್ಪ, ಚಂದನ್ ಸೇರಿದಂತೆ ಇತರ ಕೃಷಿಕರು ತಮ್ಮ ಭತ್ತದ ಗದ್ದೆಯಲ್ಲಿ ಫಸಲನ್ನು ಕೊಯ್ಲು ಮಾಡಿ ಹಾಗೆಯೇ ಬಿಟ್ಟಿದ್ದು, ನಿನ್ನೆ ಸುರಿದ ಭಾರೀ ಮಳೆಗೆ ಭತ್ತವು ಮಣ್ಣುಪಾಲಾಗಿ ನಷ್ಟ ಅನುಭವಿಸುವಂತಾಗಿದೆ.