ಮಡಿಕೇರಿ, ಡಿ. ೧೫: ಗಂಟಲು ಸಂಬAಧಿತ ಕಾಯಿಲೆಯಿಂದ ಬಳಲುತ್ತಿದ್ದ ಬಾಳೆಲೆ ವಿಜಯಲಕ್ಷಿö್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ೧೦ನೇ ತರಗತಿ ವಿದ್ಯಾರ್ಥಿ ಸಂಜು ತಾ. ೧೫ ರಂದು ಮೃತಪಟ್ಟಿದ್ದಾನೆ.
ವಿದ್ಯಾರ್ಥಿಯ ನಿಧನಕ್ಕೆ ಬಾಳೆಲೆ ಸೆಂಟರ್ ಎಜ್ಯುಕೇಶನ್ ಸೊಸೈಟಿ ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳು ಸಂತಾಪ ಸಭೆ ನಡೆಸಿ ಮೃತನ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಾಳೆಲೆ ಸೆಂಟರ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಸಹ ಕಾರ್ಯದರ್ಶಿ ಪೊಡಮಾಡ ಮೋಹನ್, ನಿರ್ದೇಶಕ ಅಡ್ಡೇಂಗಡ ಸಜನ್, ಪ್ರಾಂಶುಪಾಲರಾದ ಪ್ರಭು ಎನ್.ಕೆ., ಅಧ್ಯಾಪಕರು ಹಾಜರಿದ್ದರು.