ಸುಂಟಿಕೊಪ್ಪ, ಡಿ. ೧೩: ಕೊಡ್ಲಿಪೇಟೆಯಿಂದ ಮಡಿಕೇರಿ ಯವರೆಗೆ ಲೋಕೋ ಪಯೋಗಿ ಇಲಾಖೆಗೆ ಸೇರಿದ ರಸ್ತೆ ಕಾಮಗಾರಿಯನ್ನು ೨೧ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುವುದೆಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.

ಮಾದಾಪುರ ಮುಖ್ಯ ರಸ್ತೆಯಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಡಿಕೇರಿ ಕ್ಷೇತ್ರಕ್ಕೆ ಸರಕಾರದ ವಿಶೇಷ ಪ್ಯಾಕೇಜಿನಡಿಯಲ್ಲಿ ೫೦ ಕೋಟಿ ರೂ ಬಿಡುಗಡೆಯಾಗಿದ್ದು, ಅದರಲ್ಲಿ ೩೦ ಕೋಟಿ ರೂ ಪಿಡಬ್ಲುö್ಯಡಿ ಇಲಾಖೆ ಕಾಮಗಾರಿಗೆ ೨೦ ಕೋಟಿ ರೂ. ಜಿಲ್ಲಾ ಪಂಚಾಯಿತಿ ರಸ್ತೆ ಕಾಮಗಾರಿಗೆ ವಿನಿಯೋಗಿಸಲಾಗುತ್ತಿದೆ. ಸರ್ವಋತು ರಸ್ತೆಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಮಾದಾಪುರ - ಜಂಬೂರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆಯಲ್ಲಿ ಸುಸಜ್ಜಿತವಾದ ಸಮುದಾಯ ಭವನಕ್ಕೆ ಭೂಮಿ ಪೂಜೆ ಮಾಡಿ ಮಾತನಾಡಿ, ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಮೂಲಭೂತ ಸೌಕರ್ಯ ಕಲ್ಪಿಸಲು ಸರಕಾರ ಬದ್ಧವಾಗಿದೆ. ೧ಕೋಟಿ ೪೦ ಲಕ್ಷರೂ ವೆÀಚ್ಚದಲ್ಲಿ ಸಮುದಾಯ ಭವನ ನಿರ್ಮಾಣವಾಗಲಿದೆ ಎಂದು ಹೇಳಿದರು. ಈ ಸಂದರ್ಭ ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರೂಪ, ಉಪಾಧ್ಯಕ್ಷೆ ಜ್ಯೋತಿ, ಸದಸ್ಯರುಗಳಾದ ಪಿ.ಡಿ.ಅಂತೋಣಿ, ಗೋಪಿ ಭೀಮಯ್ಯ, ಸುರೇಶ್ ಭಾವೆ, ಮಾನಸ, ಗಿರೀಶ್,ಸೋಮಣ್ಣ, ಮಾದಾಪುರ ಬಿ.ಜೆ.ಪಿ.ಸ್ಥಾನೀಯ ಸಮಿತಿ ಅಧ್ಯಕ್ಷ ಸತೀಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಎಂ.ಹನೀಫ್, ಹಿರಿಯ ನಾಗರಿಕರಾದ ಕಾವೇರಪ್ಪ, ನಳಿನಿ ಹಾಜರಿದ್ದರು.