ಮಡಿಕೇರಿ, ಡಿ. ೧೩: ಬಲಮುರಿ ಗ್ರಾಮದ ನೆಬ್ಬುರು ಗೌಡ ಸಂಘದ ವತಿಯಿಂದ ಹುತ್ತರಿ ಪ್ರಯುಕ್ತ ಆಚರಿಸುತ್ತಿರುವ ಊರೋರ್ಮೆಯು ವಿಜೃಂಭಣೆಯಿAದ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕಟ್ರತನ ಬಿ. ಲೋಕನಾಥ ಭರತ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೆಚ್.ಎಂ.ಟಿ. ಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಟ್ರತನ ದಿನೇಶ್ ಕುಮಾರ್ ಮತ್ತು ಸೇನೆಯಲ್ಲಿ ಸೇವೆ ಸಲ್ಲಿಸಿ ಈಗ ಕೃಷಿಕರಾಗಿರುವ ಕೊಟ್ಟಕೇರಿಯನ ಡಿ. ಬಾಲಕೃಷ್ಣ ಅವರು ಭಾಗವಹಿಸಿದ್ದರು. ಈ ಸಂದರ್ಭ ಅವರುಗಳ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ಕೊಟ್ಟಕೇರಿಯನ ಡಿ. ಮೋನಿಕಾ ಶೈಕ್ಷಣಿಕ ಕೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅತಿಥಿಗಳು ಹುತ್ತರಿ ಹಬ್ಬದ ಶುಭಾಶಯಗಳನ್ನು ಕೋರಿದರು. ದಿನೇಶ್ ಕುಮಾರ್ ಮಾತನಾಡಿ, ಊರೋರ್ಮೆ ಆಚರಿಸುವುದರಿಂದ ನೆರೆಮನೆಯವರೆಲ್ಲರೂ ಒಟ್ಟಿಗೆ ಸೇರುವ ಅವಕಾಶ ಸಿಗುತ್ತದೆ ಮತ್ತು ಪರಸ್ಪರ ಪ್ರೀತಿ ವಿಶ್ವಾಸ ಮೂಡಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಹಾಯವಾಗುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ವಕೀಲ ಕೆ.ಡಿ. ದಯಾನಂದ ಮಾತನಾಡಿ, ನಮ್ಮ ಹಿರಿಯರು ಒಳ್ಳೆಯ ಉದ್ದೇಶ ಇಟ್ಟುಕೊಂಡು ಆಚರಿಸು ತ್ತಿರುವ ಇಂತಹ ಹಬ್ಬಗಳು ಜನರಲ್ಲಿ ಪರಸ್ಪರ ಸಾಮರಸ್ಯ ಮೂಡಿಸಲು ಸಹಕಾರಿಯಾಗುತ್ತದೆ ಮತ್ತು ನಾವುಗಳು ಎಲ್ಲೇ ಇರಲಿ, ಎಷ್ಟೇ ದೊಡ್ಡ ಹುದ್ದೆಗೆ ಹೋದರೂ ಹುಟ್ಟಿದ ಊರನ್ನು ಮತ್ತು ನಾವು ಆಚರಿಸುವ ಸಾಂಪ್ರದಾಯಿಕ ಹಬ್ಬಗಳನ್ನು ಮರೆಯಬಾರದು ಎಂದು ಹೇಳಿದರು. ಸಂಘದ ಅಧ್ಯಕ್ಷ ಲೋಕನಾಥ ಮಾತನಾಡಿ, ನಾವೆಲ್ಲರೂ ಅನೋನ್ಯತೆಯಿಂದ ಎಲ್ಲಾ ಕಷ್ಟ ಸುಖಗಳಲ್ಲಿ ಪಾಲ್ಗೊಂಡು ಸಮಾಜದಲ್ಲಿ ಮಾದರಿಯಾಗಿ ಬದುಕಬೇಕಾಗಿ ತಿಳಿಸಿದರು. ಕೊಟ್ಟಕೇರಿಯನ ಮೋನಿಕಾ ಪ್ರಾರ್ಥಿಸಿದರು. ಪೊನ್ನಚನ ಹರೀಶ್ ಸ್ವಾಗತಿಸಿದರು. ಸಂಘದ ಕಾರ್ಯ ದರ್ಶಿ ಪೊನ್ನಚನ ರೋಹಿತ್ ವರದಿ ವಾಚನ ಮಾಡಿ, ಪೊನ್ನಚನ ಅಂಜನಾ ಮಾದಪ್ಪ ಅತಿಥಿಗಳ ಪರಿಚಯ ಮಾಡಿದರು. ಕೊಟ್ಟಕೇರಿಯನ ಧರ್ಮೇಂದ್ರ ಕಾರ್ಯಕ್ರಮ ನಿರೂಪಿಸಿ, ಕಟ್ರತನ ರೇಣು ವಂದಿಸಿದರು. ಸಭೆಯಲ್ಲಿ ಸಂಘದ ಜಂಟಿ ಕಾರ್ಯದರ್ಶಿ ಕೊಟ್ಟಕೇರಿಯನ ನವೀನ್, ನಿರ್ದೇಶಕರಾದ ಪಿ.ಪಿ. ತಿಮ್ಮಯ್ಯ, ತಾರಾಪ್ರಸಾದ್, ಲೋಹಿತ್, ತೇಜ್ ಕುಮಾರ್, ಮಹೇಶ್, ಲಿಖಿನ್ ಬೆಳ್ಳಿಯಪ್ಪ, ಕೆ.ಎಸ್. ಸಾವಿತ್ರಿ, ಪಿ.ಹೆಚ್. ಅನಿತಾ, ಕೆ.ಈ. ಲೋಕನಾಥ್, ಪ್ರಮುಖರಾದ ಪಿ.ಕೆ. ಮಾದಪ್ಪ, ಕೆ.ಎ. ಸೋಮಣ್ಣ ಕೆ.ಎ. ಭೋಜಪ್ಪ, ಕೆ.ಜಿ. ಬೋಪಯ್ಯ, ಕೃಷ್ಣರಾಜು, ವಿನೋದ್ ಭೋಜಪ್ಪ, ಕೆ.ಎಸ್. ಜಗದೀಶ್, ಕೆ.ಸಿ. ಆನಂದ, ಕೆ.ಜಿ. ಪೂಣಚ್ಚ, ಕರುಣಾಕರ, ಮೀನಾ, ಸಂದ್ಯಾ, ಸುಚಿತ್ರ, ಸುಲೋಚನಾ, ಶೋಭಾ ಹಾಗೂ ಕೊಟ್ಟಕೇರಿಯನ, ಕಟ್ರತನ, ಪೊನ್ನಚನ ಕುಟುಂಬಸ್ಥರು ಹಾಜರಿದ್ದರು. ಕೊನೆಯಲ್ಲಿ ರಾಷ್ಟçಗೀತೆಯೊಂದಿಗೆ ಸಭೆಯನ್ನು ಮುಕ್ತಯಗೊಳಿಸಲಾಯಿತು. ನಂತರ ಗ್ರಾಮೀಣ ಕ್ರೀಡಾಕೂಟ ನಡೆಯಿತು.