ಮಡಿಕೇರಿ, ಡಿ. ೧೪: ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಹತ್ವದ ಯೋಜನೆಯಾದ ಬಂಗಾರದ ಎಲೆಗಳು-ಸಾಹಿತಿ ಮಾಹಿತಿ ಕೋಶದಲ್ಲಿ ೭೨೦೦ಕ್ಕೂ ಹೆಚ್ಚು ಸಾಹಿತಿಗಳ ಮಾಹಿತಿ ಇದ್ದು, ಈ ಮಾಹಿತಿಯು ಆಧುನಿಕ ತಂತ್ರಜ್ಞಾನದ ಮೂಲಕ ಸರ್ವರನ್ನು ತಲುಪಬೇಕೆಂಬ ಸದಾಶಯದಿಂದ ಸಾಹಿತ್ಯಾಸಕ್ತರ ಸದ್ಬಳಕೆಗಾಗಿ ಅಕ್ಟೋಬರ್ ೧೪ ರಂದು ಆನ್‌ಲೈನ್ ಮೂಲಕ ಬಿಡುಗಡೆ ಮಾಡಿ, ಅಕಾಡೆಮಿಯ ಅಂತರ್ಜಾಲ ತಿತಿತಿ. sಚಿhiಣhಥಿಚಿಚಿಛಿಚಿಜemಥಿ. ಞಚಿಡಿಟಿಚಿಣಚಿಞಚಿ.gov.iಟಿ ದಲ್ಲಿ ಈ ಮಾಹಿತಿಯನ್ನು ಅಪ್ಲೋಡ್ ಮಾಡಲಾಗಿದೆ.

ಈ ಸಾಹಿತಿ ಮಾಹಿತಿ ಕೋಶವು ಪ್ರತಿ ವರ್ಷ ಆಯಾಯ ಕಾಲಘಟ್ಟದಲ್ಲಿ ಪರಿಷ್ಕರಣೆಗೊಳ್ಳುತ್ತಾ ಬೆಳೆಯಬೇಕೆಂಬ ಅಪೇಕ್ಷೆಯಿಂದ ಈ ಮಾಹಿತಿ ಕೋಶದಲ್ಲಿ ಯಾವುದಾದರೂ ತಿದ್ದುಪಡಿಗಳಿದ್ದಲ್ಲಿ, ಹೊಸದಾಗಿ ಸೇರಿಸಬೇಕಾಗಿರುವ ಸಾಹಿತಿಗಳ ಹೆಸರುಗಳಿದ್ದಲ್ಲಿ ಸೂಕ್ತ ಮಾಹಿತಿ ಮತ್ತು ದಾಖಲೆಗಳೊಂದಿಗೆ ಅಕಾಡೆಮಿಗೆ ಕಳುಹಿಸಿಕೊಟ್ಟಲ್ಲಿ ಅದನ್ನು ಸಂಪಾದಕ ಮಂಡಳಿಯ ಮುಂದೆ ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟಾçರ್ ಎನ್. ಕರಿಯಪ್ಪ ತಿಳಿಸಿದ್ದಾರೆ.