ಸೋಮವಾರಪೇಟೆ, ಡಿ. ೧೪: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರೇಂಜರ್ ಬ್ಲಾಕ್ನಲ್ಲಿರುವ ವನದುರ್ಗಿ ದೇವಾಲಯಕ್ಕೆ ಯಂತ್ರಗಳಿAದ ರಸ್ತೆ ನಿರ್ಮಿಸುತ್ತಿದ್ದ ಸಂದರ್ಭ ಎರಡು ಕೋಮುಗಳ ಯುವಕರ ತಂಡದ ನಡುವೆ ಘರ್ಷಣೆ ಏರ್ಪಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರೇಂಜರ್ ಬ್ಲಾಕ್ನಲ್ಲಿರುವ ಸುಮಾರು ೨ ಎಕರೆ ಜಾಗವನ್ನು ಈ ಹಿಂದೆ ಹಿಂದೂ ಕುಟುಂಬವೊAದು ಮುಸ್ಲಿಂ ಸಮುದಾಯಕ್ಕೆ ದಾನವಾಗಿ ನೀಡಿದ್ದು, ಈ ಜಾಗದೊಳಗೆ ಸ್ಥಳೀಯರು ಈ ಹಿಂದಿನಿAದಲೂ ಪೂಜಿಸಿಕೊಂಡು ಬರುತ್ತಿರುವ ವನದುರ್ಗಿ ದೇವಾಲಯವಿದೆ. ಈ ದೇವಾಲಯಕ್ಕೆ ತೆರಳಲು ದಾನ ನೀಡಿದ ಜಾಗದಿಂದಲೇ ಕಾಲು ರಸ್ತೆಯಿದ್ದು, ಕಳೆದ ಕೆಲ ಸಮಯಗಳ ಹಿಂದೆ ರಸ್ತೆಗೆ ಸಂಬAಧಿಸಿದAತೆ ಗಲಾಟೆಯೂ ನಡೆದಿದೆ. ಈ ಸಂದರ್ಭ ವಕ್ಫ್ ಮಂಡಳಿ, ಅನಿಫಿಯಾ ಮಸೀದಿಯ ಪ್ರಮುಖರು, ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆದು, ವನದುರ್ಗಿ ದೇವಾಲಯಕ್ಕೆ ತೆರಳಲು ರಸ್ತೆ ಬಿಟ್ಟುಕೊಡುವ ಬಗ್ಗೆ ತೀರ್ಮಾನವಾಗಿತ್ತು ಎನ್ನಲಾಗಿದೆ.
ಅದರಂತೆ ನಿನ್ನೆ ದಿನ ಯಂತ್ರಗಳ ಸಹಾಯದಿಂದ ರಸ್ತೆ ನಿರ್ಮಿಸುತ್ತಿದ್ದ ಸಂದರ್ಭ ಸ್ಥಳಕ್ಕೆ ಆಗಮಿಸಿದ ಮಸೀದಿಗೆ ಸೇರಿದ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂದರ್ಭ ಸ್ಥಳದಲ್ಲಿದ್ದ ಯುವಕರು ಹಾಗೂ ಮಸೀದಿಯ ಪದಾಧಿಕಾರಿಗಳ ನಡುವೆ ಘರ್ಷಣೆ ನಡೆದಿದೆ.
ಗಲಾಟೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಡಿವೈಎಸ್ಪಿ ಗಂಗಾಧರಪ್ಪ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘರ್ಷಣೆ ಘಟನೆಗೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಒಟ್ಟು ೧೩ ಮಂದಿಯ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ರೇಂಜರ್ ಬ್ಲಾಕ್ನಲ್ಲಿರುವ ಅನಿಫಿಯಾ ಮಸೀದಿಗೆ ಸೇರಿದ ಜಾಗದಲ್ಲಿ ಮಸೀದಿ ಆಡಳಿತ ಮಂಡಳಿ ಪದಾಧಿಕಾರಿಗಳ ಗಮನಕ್ಕೆ ತಾರದೇ ಏಕಾಏಕಿ ಯಂತ್ರಗಳಿAದ ರಸ್ತೆ ನಿರ್ಮಿಸುತ್ತಿದ್ದ ಸಂದರ್ಭ ತಾವುಗಳು ಸ್ಥಳಕ್ಕೆ ತೆರಳಿದ್ದು, ರಸ್ತೆ ನಿರ್ಮಿಸುತ್ತಿದ್ದವರೊಂದಿಗೆ ಮಾತನಾಡುತ್ತಿದ್ದ ಸಂದರ್ಭ ಕಿಬ್ಬೆಟ್ಟ ಗ್ರಾಮದ ನಿವಾಸಿ ಮಧು, ನೇಗಳ್ಳೆ ಗ್ರಾಮದ ಜೀವನ್, ಸುಭಾಷ್, ಉಮೇಶ್, ಜಗ್ಗ, ದರ್ಶನ್, ಶರತ್ ಸೇರಿದಂತೆ ಇತರರು ಜಗಳ ತೆಗೆದು ಹಲ್ಲೆ ಮಾಡಿರುವುದಾಗಿ ಪಟ್ಟಣದ ಎಂ.ಯು. ಕರೀಂ ಬೇಗ್, ರಿಹಾನ್ ಬೇಗ್, ರಹೀಂ ಬೇಗ್ ಅವರುಗಳು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಾಗಿ ದೂರು ನೀಡಿದ್ದಾರೆ.
ಇದೇ ಘಟನೆಗೆ ಸಂಬAಧಿಸಿದAತೆ ಮತ್ತೊಂದು ದೂರು ದಾಖಲಾಗಿದ್ದು, ಈ ಹಿಂದೆ ಸ್ಥಳೀಯರು ಹಾಗೂ ಮಸೀದಿಯ ಪದಾಧಿಕಾರಿಗಳು, ವಕ್ಫ್ ಮಂಡಳಿಯ ಪ್ರಮುಖರ ನಡುವೆ ಪೊಲೀಸ್ ಠಾಣೆಯಲ್ಲಿ ನಡೆದ ಮಾತುಕತೆಯಂತೆ ವನದುರ್ಗಿ ದೇವಾಲಯಕ್ಕೆ ಜಾಗ ಮಾಡುತ್ತಿದ್ದ ಸಂದರ್ಭ ಅಜೀಂ ಬೇಗ್, ಕರೀಂ ಬೇಗ್, ರಹೀಂ ಬೇಗ್, ರಿಯಾನ್, ಅಕ್ರಂ, ಮುನೀರ್ ಅವರುಗಳು ತಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆಂದು ಎಸ್.ಆರ್. ಸೋಮೇಶ್, ಶರತ್, ಮಹೇಶ್ ಅವರುಗಳು ದೂರು ನೀಡಿದ್ದಾರೆ. ಎರಡೂ ಕಡೆಯಿಂದ ದೊರೆತ ದೂರಿಗೆ ಸಂಬAಧಿಸಿದAತೆ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.