ಮಡಿಕೇರಿ, ಡಿ. ೧೪: ಕೊಡಗು ಜಿಲ್ಲಾ ಬ್ಯಾಡ್ಮಿಂಟನ್ ಸಂಘದ ವಾರ್ಷಿಕ ಸಭೆ ತಾ.೧೩ ರಂದು ನಗರದ ಖಾಸಗಿ ಹೊಟೇಲ್ನಲ್ಲಿ ನಡೆಯಿತು. ಪ್ರಸ್ತುತ ಇರುವ ಸಂಘದ ಆಡಳಿತ ಮಂಡಳಿಯ ಅಧಿಕಾರವಧಿ ಪೂರ್ಣಗೊಂಡಿದ್ದರೂ ಸರ್ವರ ಒತ್ತಾಯದ ಮೇರೆಗೆ ಮತ್ತೊಂದು ವರ್ಷ ಅದೇ ಆಡಳಿತ ಮಂಡಳಿ ಮುಂದುವರಿಯುವAತೆ ಈ ಸಂದರ್ಭ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ, ಅಂತರಶಾಲಾ ಬ್ಯಾಡ್ಮಿಂಟನ್ ಟೂರ್ನಮೆಂಟ್, ಮುಕ್ತ ಬ್ಯಾಡ್ಮಿಂಟನ್ ಟೂರ್ನಮೆಂಟ್ಗಳ ಆಯೋಜನೆಗೆ ಒತ್ತು ನೀಡಿ ಕ್ರೀಡೆಗೆ ಪ್ರೋತ್ಸಾಹ ನೀಡುವಂತೆ ತೀರ್ಮಾನಿಸಲಾಯಿತು. ಸಂಘದ ಸದಸ್ಯರೂ ಆಗಿರುವ ಬ್ಯಾಡ್ಮಿಂಟನ್ ತರಬೇತುದಾರರಾಗಿರುವ, ಅಂತರರಾಷ್ಟಿçÃಯ ಮಟ್ಟದ ಹಿರಿಯರ ಬ್ಯಾಡ್ಮಿಂಟನ್ನಲ್ಲಿ ಸಾಧನೆ ಮಾಡಿರುವ ಜ್ಯೋತಿ ಸೋಮಯ್ಯ ಅವರನ್ನು ಸನ್ಮಾನಿಸಲಾಯಿತು. ಅಂತರರಾಷ್ಟಿçÃಯ ಮಟ್ಟದ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರ ತಾಯಿ ಕಾವೇರಿ ಪೊನ್ನಪ್ಪ ಅವರು ಜ್ಯೋತಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಡಾ.ಮೋಹನ್ ಅಪ್ಪಾಜಿ, ಗೌರವ ಕಾರ್ಯದರ್ಶಿ ಡಾ.ದೇವಯ್ಯ ಹಾಗೂ ಇತರರು ಇದ್ದರು.