ಮಡಿಕೇರಿ, ಡಿ. ೧೪: ಮಡಿಕೇರಿ ನಗರದ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದ ಕಾಣಿಕೆ ಹುಂಡಿಯ ಎಣಿಕೆ ಕಾರ್ಯ ಇಂದು ಓಂಕಾರ ಸದನದಲ್ಲಿ ನಡೆಯಿತು. ಪ್ರತಿ ತಿಂಗಳು ಎಣಿಕೆ ಮಾಡಲಾಗುತ್ತಿದ್ದು, ನವೆಂಬರ್ ತಿಂಗಳಲ್ಲಿ ಭಕ್ತರಿಂದ ಒಟ್ಟು ರೂ. ೨.೩೯ ಲಕ್ಷ ಕಾಣಿಕೆ ಸಂಗ್ರಹವಾಗಿದೆ. ದೇವಾಲಯ ಸಮಿತಿ ಕಾರ್ಯ ನಿರ್ವಹಣಾಧಿಕಾರಿ ದೇವರಾಜು ಆವರ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಯಿತು.