*ಗೋಣಿಕೊಪ್ಪ, ಡಿ. 12: ಪೆÇನ್ನಂಪೇಟೆ ತಾಲೂಕಿನ ಗಿರಿಜನ ಕಾಫಿ ಬೆಳೆಗಾರರಿಗೆ ಗುಣಮಟ್ಟದ ಟಾರ್ಪಲ್‍ಗಳನ್ನು ಕಾಫಿ ಮಂಡಳಿ ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ವಿತರಿಸಲಾಯಿತು.
ಗೋಣಿಕೊಪ್ಪ ಕಾಫಿ ಮಂಡಳಿಯ ಸಭಾಂಗಣದಲ್ಲಿ 150 ಗಿರಿಜನ ಕಾಫಿ ಬೆಳೆಗಾರರು ಕಾಫಿ ಒಣಗಿಸಲು ಗುಣಮಟ್ಟದ ಟಾರ್ಪಲ್ ಗಳನ್ನು ಪಡೆದುಕೊಂಡರು. ಗಿರಿಜನರು ಕಾಫಿ ಬೆಳೆಯನ್ನು ಉತ್ತಮ ಗುಣಮಟ್ಟದಲ್ಲಿ ಬೆಳೆದು ತಮ್ಮದೇ ಆದ ಬ್ರಾಂಡ್ ಸೃಷ್ಟಿಸಿ ಕೊಂಡು ಅದರಿಂದ ಅಧಿಕ ಲಾಭ ಪಡೆದು ಎಲ್ಲರಂತೆ ಉತ್ತಮ ಜೀವನ ದೊಂದಿಗೆ ಸ್ವಾವಲಂಬಿಗಳಾಗಿ ಅಭಿವೃದ್ಧಿ ಹೊಂದಬೇಕು ಎಂದು ಕಾಫಿ ಮಂಡಳಿಯ ಜಂಟಿ ನಿರ್ದೇಶಕ ತಿಮ್ಮರಾಜು ತಿಳಿಸಿದರು. ಕಾಫಿ ಮಂಡಳಿಯ ಉಪ ನಿರ್ದೇಶಕಿ ಡಾ. ಶ್ರೀದೇವಿ ಮಾತನಾಡಿ, ಬುಡಕಟ್ಟು ಕಾಫಿ ಮತ್ತು ಕರಿಮೆಣಸು ಸಮಗ್ರ ಅಭಿವೃದ್ಧಿ ಕಾರ್ಯಕ್ರಮದ ಯೋಜನೆಯ ಮೂಲಕ ಗಿರಿಜನ ಕಾಫಿ ಬೆಳೆಗಾರರಿಗೆ ಕಾಫಿ ಉತ್ಪಾದನೆ ಪೆÇ್ರೀತ್ಸಾಹಿಸಲು ಈ ವರ್ಷ ಅನೇಕ ಸವಲತ್ತುಗಳನ್ನು ವಿತರಿಸಲಾಗಿದೆ ಎಂದು ಹೇಳಿದರು. ತಾಲೂಕು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವ್ಯವಸ್ಥಾಪಕ ನವೀನ್ ಕುಮಾರ್ ಮಾತನಾಡಿದರು. ಕಾಫಿ ಮಂಡಳಿಯ ಅಧಿಕಾರಿ ಮಿಥುನ್, ತಾಂತ್ರಿಕ ಸಹಾಯಕ ಮಧು, ಯೋಜನಾ ಸಹಾಯಕÀ ಮುತ್ತಪ್ಪ, ನಿತಿನ್, ಜವಿನ್ ಇದ್ದರು.